ಭ್ರಷ್ಟಾಚಾರ ತನಿಖೆ ಮಾಡಿಸದ ಜಿಪಂ ಸಿಇಒ

oppo_2
oppo_2
Published on

ಕಲಬುರಗಿ: ಫಿರೋಜಾಬಾದ್ ಗ್ರಾಪಂ ಪಿಡಿಒ ವಿದ್ಯಾವತಿ ಅವರು ೧೫ನೇ ಹಣಕಾಸಿನಲ್ಲಿ ೨೨ ಲಕ್ಷ ರೂ. ಹಣ ಅಕ್ರಮ ಮಾಡಿದ್ದು, ಈ ಕುರಿತು ಸೂಕ್ತ ತನಿಖೆ ನಡೆಸಬೇಕು ಎಂದು ಗ್ರಾಪಂ ಸದಸ್ಯ ಅಬ್ದುಲ್ ಲತೀಫ್ ಆಗ್ರಹಿಸಿದರು. ವಿದ್ಯಾವತಿ ಅವರಿಗಿಂದ ಮುನ್ನ ಇದ್ದ ಪಿಡಿಒ ಸೂರ್ಯಕಾಂತ ಸಹ ಗ್ರಾಪಂನಲ್ಲಿ ೬೦ರಿಂದ ೭೦ ಲಕ್ಷ ರೂ. ಅಕ್ರಮ ನಡೆಸಿದ್ದು, ಈ ಬಗ್ಗೆ ಜಿಪಂ ಸಿಇಒ ಅವರಿಗೆ ತನಿಖೆಗೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು. ಪದೇ ಪದೆ ದಾಖಲೆ ಸಹಿತ ಮನವಿ ಸಲ್ಲಿಸಿದ್ದರೂ ಜಿಲ್ಲಾ ಪಂಚಾಯಿತಿ ಸಿಇಒ ಅವರು ತನಿಖೆ ನಡೆಸುತ್ತಿಲ್ಲ. ಆದ್ದರಿಂದ ಹಲವು ಅನುಮಾನಗಳು ಕಾಡುತ್ತಿವೆ. ಆದ್ದರಿಂದ ಜಿಲ್ಲಾಧಿಕಾರಿಗಳಿಗೆ, ಪಂಚಾಯತ್ ರಾಜ್ ಆಯುಕ್ತರಿಗೆ ಮನವಿಯನ್ನು ಬರೆದಿz್ದÉÃನೆ ಎಂದರು. ದೇವಮ್ಮ, ನಾಗಮ್ಮ, ವಿದ್ಯಾಧರ ಮಾಮನಿ, ಶಿವಶರಣಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net