ಭ್ರಷ್ಟರಿಗೆ ಕಡ್ಡಾಯ ನಿವೃತ್ತಿ, ಅಮಾನತು

Court
Published on

ಕಲಬುರಗಿ: ರಾಜ್ಯ ಸರ್ಕಾರದ ವಿವಿಧ ಮಾಸಾಶನಗಳನ್ನು ಅಕ್ರಮವಾಗಿ ಮಂಜೂರು ಮಾಡಿದ, ಸರ್ಕಾರಿ ಕೆಲಸಕ್ಕಾಗಿ ಲಂಚ ಸ್ವೀಕರಿಸಿದ ಇಬ್ಬರು ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ ಹಾಗೂ ಇಬ್ಬರನ್ನು ಅಮಾನತು ಮಾಡಿ ಪ್ರಾದೇಶಿಕ ಆಯುಕ್ತ ಕೃಷ್ಣಾ ಬಾಜಪೇಯಿ ಆದೇಶಿಸಿದ್ದಾರೆ.
ಯಡ್ರಾಮಿ ತಾಲೂಕಿನ ಇಜೇರಿ ನಾಡ ಕಚೇರಿಯಲ್ಲಿ ಉಪ ತಹಸೀಲ್ದಾರ್ ಆಗಿದ್ದ ವಿಜಯಕುಮಾರ ಸಜ್ಜನ ಅರ್ಹವಲ್ಲದ ೩,೧೧೮ ಫಲಾನುಭವಿಗಳಿಗೆ ನಿಯಮ ಯಲ್ಲಂಘಿಸಿ ವಿವಿಧ ಮಾಶಾಸನ ಮಂಜೂರು ಮಾಡಿ, ಸರ್ಕಾರಕ್ಕೆ ೩,೩೨,೫೬,೫೧೦ ರೂ. ನಷ್ಟ ಉಂಟು ಮಾಡಿz್ದÁರೆ. ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಕಡ್ಡಾಯ ನಿವೃತ್ತಿಗೊಳಿಸಲಾಗಿದೆ.
ಗ್ರೇಡ್ ೨ ತಹಸೀಲ್ದಾರ್ ಅಮಾನತು: ಜೇವರ್ಗಿಯ ಗ್ರೇಡ್ ೨ ತಹಸೀಲ್ದಾರ್ ಪ್ರಸನ್ನ ಆರ್.ಮೇಘಕರ್ ಅನರ್ಹ ೧,೩೯೨ ಫಲಾನುಭವಿಗಳಿಗೆ ಮಾಸಾಶನ ಮಂಜೂರು ಮಾಡಿ, ೧,೩೦,೪೧,೦೦೦ ರೂ. ನಷ್ಟ ಮಾಡಿದ್ದರು. ನೋಟಿಸ್ ನೀಡಿದ್ದರೂ ಸಮಂಜಸ ಉತ್ತರ ನೀಡಿಲ್ಲ. ಇವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಲೋಕಾ ಬಲೆಗೆ ಬಿದ್ದವ ಅಮಾನತು: ಜೇವರ್ಗಿ ತಹಸೀಲ್ದಾರ್ ಕಚೇರಿ ಶಿರಸ್ತೇದಾರ್ ಸಿದ್ರಾಮಪ್ಪ ಶರಣಪ್ಪ ತಾಲೂಕಿನ ನೆಲೋಗಿ ಗ್ರಾಮದ ಅಲ್ಲಾವುದ್ದೀನ್ ಬಾಬುಮಿಯ್ಯಾ ಜಮೀನಿನ ಎನ್‌ಎ ಮಾಡಲು ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದಿದ್ದ. ಈ ಕುರಿತು ಜೇವರ್ಗಿ ತಹಸೀಲ್ದಾರ್ ವರದಿ ನೀಡಿದ್ದರು. ನ್ಯಾಯಾಂಗ ಬಂಧನಕ್ಕೆ ಒಳಗಾದಾಗಿನಿಂದ ಅಮಾನತು ಮಾಡಲಾಗಿದೆ.
ಠಾಣಾ ಕುಸನೂರಿನ ಹಿಂದಿನ ತಹಸೀಲ್ದಾರ್ ಧನರಾಜ ಮಲ್ಲಿಗೆ ನಿಯಮ ಮೀರಿ ಜಮೀನಿನ ಹಕ್ಕು ಬದಲಾವಣೆ ಮಾಡಿz್ದÁರೆ. ರಾಜ್ಯ ಸರ್ಕಾರ ಸಾಮಾಜಿಕ ಭದ್ರತಾ ಯೋಜನೆಯಡಿ ವಿವಿಧ ಮಾಶಾಸನಗಳ ಅರ್ಜಿಗಳನ್ನು ಸಕಾರಣ ಇಲ್ಲದೆ ತಿರಸ್ಕರಿಸಿದ್ದಾರೆ. ಅರ್ಜಿ ವಿಲೇವಾರಿ ಮಾಡಲು ವಿಳಂಬ ಮಾಡಿದ್ದು, ಸಾಬೀತಾದ್ದರಿಂದ ಕಡ್ಡಾಯ ನಿವೃತ್ತಿಗೊಳಿಸಿ ಆದೇಶ ಹೊರಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net