ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ
ತಾಲೂಕಿನ ಹಿರೇಕೊಡಿ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಹಾಗೂ ಕೆಲವು ಸದಸ್ಯರು ಲಕ್ಷಾಂತರ ರೂಪಾಯಿಗಳ ಭ್ರಷ್ಟಾಚಾರ ಮಾಡಿದ್ದಾರೆ ಎಂಬ ಆರೋಪಿಸಿ ಗ್ರಾ.ಪ 19 ಸದಸ್ಯರು ಅವಿಶ್ವಾಸ ನಿರ್ಣಯ ಮಂಡನೆ ಮಾಡಲು ಪ್ರಯತ್ನಿಸಿ, ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಜಡಿದ ಘಟನೆ ನಡೆದಿದೆ.
ಒಟ್ಟು 30 ಗ್ರಾಮ ಪಂಚಾಯತ್ ಸದಸ್ಯರ ಬಲ ಹೊಂದಿರುವ ಹಿರೇಕೊಡಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಉಪಾಧ್ಯಕ್ಷ ಹಾಗೂ ಕೆಲವು ಸದಸ್ಯರು ಲಕ್ಷಾಂತರ ರೂಪಾಯಿಗಳ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಆರೋಪಿಸಿ ಸದಸ್ಯರು ಇವತ್ತು ಅವಿಶ್ವಾಸ ಮಂಡನೆಗೆ ಮುಂದಾಗಿದ್ದರೂ. ಚಿಕ್ಕೋಡಿ ಉಪವಿಭಾಗ ಅಧಿಕಾರಿ ಸುಭಾಷ ಸಂಪಗಾವಿ ನೇತೃತ್ವದಲ್ಲಿ ಅವಿಶ್ವಾಸಕ್ಕಾಗಿ ಸಭೆ ನಡೆಸಲಾಯಿತು. ಆದರೆ 19 ಸದಸ್ಯರು ಮಾತ್ರ ಸಭೆಗೆ ಆಗಮಿಸಿದರು. ಆವಿಶ್ವಾಸಕ್ಕೆ ಕನಿಷ್ಠ 20 ಸದಸ್ಯರು ಬೇಕಾದ ಹಿನ್ನಲೆ ಕೊರಂ ಕೊರತೆಯಿಂದ ಅವಿಶ್ವಾಸ ನಿರ್ಣಯ ಮಂಡನೆ ವಿಫಲವಾಗಿದೆ.