

ನೆಲಮಂಗಲ: ದೇಶಕ್ಕೆ ಮತೀಯ ಶಕ್ತಿ, ನಾಸ್ತಿಕವಾದಿಗಳು ಹಾಗೂ ಭ್ರಷ್ಟ ವ್ಯವಸ್ಥೆ ಅಪಾಯಕಾರಿಯಾಗಿದ್ದು, ಇವುಗಳ ನಿಮೂರ್ಲನೆಗೆ ಹಿಂದುಗಳೆಲ್ಲರೂ ಸಂಟಿತರಾಗಬೇಕಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದರು.
ನಗರದ ಪವಾಡ ಶ್ರೀ ಬಸವಣ್ಣ ದೇವರ ಮಠದಲ್ಲಿ ಗುರುವಾರ ಸಂಜೆ ಶ್ರೀರಾಮ ಸೇನಾ ಕರ್ನಾಟಕ ಸಂಟನೆಯಿಂದ ಆಯೋಜಿಸಿದ್ದ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಹಿಂದುಗಳನ್ನು ಸಂಟನೆ ಮಾಡಲು ನೂರಾರು ವ್ನಿಗಳು ಎದುರಾಗುತ್ತಿರುವುದು ದುರ್ದೈವ. ಜಾತಿ ಸಂಟನೆ ಮಾಡುತ್ತೇವೆ ಎಂದಾಗ ಯಾರೂ ಕಿರಿಕಿರಿ ಮಾಡುವುದಿಲ್ಲ. ಕ್ರೀಡಾ ಸಂಟನೆ, ವ್ಯಾಪಾರಿಗಳ ಸಂಟನೆ ಮಾಡುವಾಗ ಯಾರೂ ತೊಂದರೆ ಕೊಡುವುದಿಲ್ಲ. ನಾವು ಪಾಕಿಸ್ತಾನ, ಅಫ್ಘಾನಿಸ್ತಾನ, ಇರಾನ್ ಸೇರಿ ಬೇರೆ ದೇಶಗಳಲ್ಲಿ ಹಿಂದು ಸಂಟನೆ ಮಾಡುತ್ತಿಲ್ಲ. ನಮ್ಮ ದೇಶದಲ್ಲಿ ಮಾಡುತ್ತಿದ್ದೇವೆ. ಇಲ್ಲಿನವರೇ ನಮಗೆ ತೊಂದರೆ ಕೊಡುತ್ತಾರೆ. ಆದ್ದರಿಂದ ಪ್ರತಿಯೊಬ್ಬ ಹಿಂದು ಒಗ್ಗೂಡಿ ಭಾರತ ಮಾತೆಯ ರಕ್ಷಣೆಗೆ ಮುಂದಾಗಬೇಕು ಎಂದರು.
ಸ್ವದೇಶಿ ವಸ್ತುಗಳಿಗೆ ಹೆಚ್ಚಿನ ಅದ್ಯತೆ ನೀಡಬೇಕು. ನಮ್ಮ ವ್ಯಾಪಾರ ವ್ಯವಹಾರವೂ ಹಿಂದುಗಳೊಂದಿಗೆ ಮಾಡಬೇಕು. ಪ್ರತಿಯೊಬ್ಬರಲ್ಲೂ ದೇಶಾಭಿಮಾನವನ್ನು ಹುಟ್ಟು ಹಾಕುವ ಕಾರ್ಯ ಶ್ರೀರಾಮ ಸೇನೆ ನಿರಂತರವಾಗಿ ಮಾಡುತ್ತಿದೆ ಎಂದರು.
50 ವರ್ಷಗಳ ಹಿಂದೆ ಚಾಮರಾಜನಗರದಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ಅಡ್ಡಿಪಡಿಸಿದ್ದರು. ಜತೆಗೆ ಇತ್ತೀಚೆಗೆ ಮಂಡ್ಯ ಜಿಲ್ಲೆಯ ನಾಗಮಂಗಲದ ಗಣೇಶ ವಿಸರ್ಜನೆ ವೇಳೆಯೂ ಹಲ್ಲೆ ಮಾಡಿ ಕಲ್ಲು ತೂರಾಟ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ದೇವಸ್ಥಾನಗಳಿಗೆ, ನಮ್ಮ ಹಬ್ಬ ಆಚರಣೆಗೂ ಅಡ್ಡಿ ಪಡಿಸಬಹುದು. ಇದನ್ನು ತಡೆಯಲು ಹಿಂದುಗಳು ಒಂದಾಗಬೇಕು ಎಂದು ಹೇಳಿದರು.
ಜಿಲ್ಲಾಧ್ಯಕ್ಷ ರಮೇಶ್ಗೌಡ ಅವರ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಮಂದಿ ಕಾರ್ಯಕರ್ತರು ಪದಗ್ರಹಣ ಮಾಡಿದರು. ಉದ್ಯಮಿ ರಾಯನ್ನಗರ ನಾಗೇಶ್, ಶ್ರೀರಾಮ ಸೇನೆ ಜಿಲ್ಲಾ ಗೌರವಾಧ್ಯಕ್ಷ ಶ್ರೀ ಶ್ರೀನಿವಾಸ್ ಗುರೂಜೀ, ಜಿಲ್ಲಾಧ್ಯಕ್ಷ ರಮೇಶ್ಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ್, ಉಪಾಧ್ಯಕ್ಷ ಯೋಗೇಶ್ , ಪ್ರವಿಣ್, ಪ್ರಮುಖ್ ರಾಜು, ವಿದ್ಯಾರ್ಥಿ ಪ್ರಮುಖ್ ನರಸೇಗೌಡ, ಮಾದ್ಯಮ ಪ್ರಮುಖ್ ರಾಮಚಂದ್ರ, ಮುಖಂಡ ಮಾಣಿಕ್ಯ ನಾಗೇಶ್, ರುವರ್ಮ ಸುಮಾ, ಸೌಮ್ಯಾ ಉಪಸ್ಥಿತರಿದ್ದರು.
ಜಾರಿಯಾಗದ ಕಾನೂನು: ಗೋಮಾತೆಯ ರಕ್ಷಣೆ ಮಾಡಲು ನಮಗೆ ಇನ್ನೂ ಸಾಧ್ಯವಾಗಿಲ್ಲ. ಗೋಸಾಗಣೆ ತಡೆಯಲು ಹೋದ ಹಿಂದು ಕಾರ್ಯಕರ್ತರ ವಿರುದ್ಧವೇ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಕಟ್ಟುನಿಟ್ಟಾಗಿ ಜಾರಿಯಾಗಿಲ್ಲ. ಹತ್ಯೆ ನಿರಂತರವಾಗಿ ನಡೆಯುತ್ತಿದೆ. ಗೋವುಗಳ ರಕ್ಷಣೆ, ಹಿಂದುಗಳ ರಕ್ಷಣೆಗಾಗಿ ಕೆಲಸ ಮಾಡಿದ್ದಕ್ಕೆ ನಮ್ಮ ಸಂಟನೆ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿ, ಗಡಿಪಾರು ಮಾಡುತ್ತಿದ್ದಾರೆ. ಏನೇ ಮಾಡಿದರೂ ಹೆದರುವುದಿಲ್ಲ. ಆರ್ಎಸ್ಎಸ್ ಹಾಗೂ ಇತರ ಹಿಂದು ಸಂಟನೆಗಳಲ್ಲಿ ದೇಶ ರಕ್ಷಣೆ, ಗೋ ಮಾತೆ ರಕ್ಷಣೆಗೆ ಸಿದ್ಧರಿದ್ದಾರೆ ಎಂದರು.
ಪ್ರಧಾನಿ ಕೈ ಬಲಪಡಿಸೋಣ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು 500 ವರ್ಷ ಬೇಕಾಯಿತು. ಅದಕ್ಕಾಗಿ ಮತ್ತೊಬ್ಬ ರಾಮ ಪ್ರಧಾನಿ ನರೇಂದ್ರ ಮೋದಿ ಅವರು ಬರಬೇಕಾಯಿತು. ನಾವು ಅವರ ಕೈ ಬಲಪಡಿಸಬೇಕು. ಇದಕ್ಕಾಗಿ ಹಿಂದುಗಳೆಲ್ಲರೂ ಒಗ್ಗಟ್ಟಾಗಬೇಕು ಎಂದು ಪ್ರಮೋದ್ ಮುತಾಲಿಕ್ ಹೇಳಿದರು.
ಶೋಭಾಯಾತ್ರೆ: ಕಾರ್ಯಕ್ರಮ ಹಿನ್ನೆಲೆಯಲ್ಲಿ ನಗರಸಭೆ ವ್ಯಾಪ್ತಿಯ ಅರಿಶಿಣಕುಂಟೆ ಸರ್ಕಾರಿ ಶಾಲೆ ಅವರಣದಲ್ಲಿ ಸಮಾವೇಶಗೊಂಡ ನೂರಾರು ಮಂದಿ ಶ್ರೀರಾಮ ಸೇನಾ ಸಂಟನೆ ಕಾರ್ಯಕರ್ತರು ಪ್ರಮೋದ್ ಮುತಾಲಿಕ್ ಅವರ ನೇತೃತ್ವದಲ್ಲಿ ರಾ.ಹೆದ್ದಾರಿ ಹಾಗೂ ನಗರದ ಮುಖ್ಯರಸ್ತೆಯಲ್ಲಿ ಬೈಕ್, ಕಾರು ಮೂಲಕ ಶೋಭಾಯಾತ್ರೆ ನಡೆಸಿದರು.
ಎಲ್ಲ ಧರ್ಮಕ್ಕಿಂತಲೂ ಶ್ರೇಷ್ಠ ಹಿಂದು ಧರ್ಮ ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಅದು ನಶಿಸಿ ಹೋಗಲು ಯಾರೂ ಬಿಡಬಾರದು. ಪ್ರಮೋದ್ ಮುತಾಲಿಕ್ ಹಿಂದು ಧರ್ಮದ ರಕ್ಷಣೆಗಾಗಿ ಶ್ರಮಿಸುತ್ತಿದ್ದಾರೆ. ಅವರಿಗೆ ರಾಜಕೀಯ ಬೆಂಬಲ ಇಲ್ಲ. ಏಕಾಂಗಿಯಾಗಿ ಹೋರಾಡುತ್ತಿದ್ದಾರೆ.| ಗಂಗಾಧರ್ ಕುಲಕರ್ಣಿ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ