

ಭಾಲ್ಕಿ: ಭೌತಿಕ ಶ್ರೀಮಂತಿಕೆಯಿಂದ ಶಾಂತಿ ನೆಮ್ಮದಿ ದೊರೆಯುವುದಿಲ್ಲ. ನಮ್ಮ ಆಂತರಿಕ ಶ್ರೀಮಂತಿಕೆಗೆ ಸಂಗೀತವೇ ಸಮೃದ್ಧಿಯಾಗಿದೆ ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಹೇಳಿದರು.
ಪಟ್ಟಣದ ಚನ್ನಬಸವಾಶ್ರಮದಲ್ಲಿ ಭಾನುವಾರ ನಾದಬ್ರಹ್ಮ ಸಂಗೀತ ಸಮಿತಿ ವತಿಯಿಂದ ಪಂಡಿತ ಶಾಂತಾರಾಮ ಚಿಗ್ರಿ ಗುರೂಜಿ 4ನೇ ಪುಣ್ಯಸ್ಮರಣೆ ನಿಮಿತ್ತ ಆಯೋಜಿಸಿದ್ದ ಸಂಗೀತ ಸಮಾರೋಪ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಪಂಡಿತ ಶಾಂತಾರಾಮ ಅವರು ಸಂತರ ನಾಡಿನಲ್ಲಿ ಸಂಗೀತ ಬೆಳೆಸಿದ ಮಹಾನ್ ತಪಸ್ವಿ ಎಂದರು.
ಇವತ್ತಿನ ದಿನಮಾನಗಳಲ್ಲಿ ಕೃತಜ್ಞತಾ ಭಾವನೆ ಕುಸಿಯುತ್ತಿದೆ. ಇಂಥ ಸಂದರ್ಭದಲ್ಲಿಯೂ ಗುರುಗಳನ್ನು ಗೌರವಯುತವಾಗಿ ಕೃತಜ್ಞತೆ ಸಲ್ಲಿಸುವ ಯಾವುದಾದರು ಕ್ಷೇತ್ರವಿದ್ದರೆ ಅದು ಸಂಗೀತ ಮಾತ್ರ. ಮನಸ್ಸಿಗೆ ನೆಮ್ಮದಿ ಸಿಗುವುದರೊಂದಿಗೆ ಸಂಗೀತದಲ್ಲಿ ಮನಸ್ಸನ್ನು ಶಾಂತವಾಗಿಡುವ ಶಕ್ತಿ ಅಡಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ವಿಶ್ವ ಹಿಂದು ಪರಿಷತ್ ತಾಲೂಕು ಅಧ್ಯಕ್ಷ ಶಿವಾ ಲೋಖಂಡೆ, ಕರವೇ ತಾಲೂಕು ಅಧ್ಯಕ್ಷ ಗಣೇಶ ಪಾಟೀಲ್ ಮಾತನಾಡಿದರು. ಉದ್ಯಮಿ ಆಕಾಶ ರಿಕ್ಕೆ ಉದ್ಘಾಟಿಸಿದರು. ನ್ಯಾಯವಾದಿ ಧನರಾಜ ಸೋನಾಳೆ, ಚಂದ್ರಕಾಂತ ಪಾಟೀಲ್, ಶ್ರೀರಂಗ ಗಾಜರೆ, ಜಯರಾಜ ದಾಬಶೆಟ್ಟೆ, ಅಶೋಕ ಸಾಂಗವೆ, ಅರುಣಾಬಾಯಿ ಬಿರಾದಾರ್ ಇತರರಿದ್ದರು. ಸಂಯೋಜಕ ಶಿವಾಜಿರಾವ ಸಗರ ಪ್ರಾಸ್ತಾವಿಕ ಮಾತನಾಡಿದರು. ಧರ್ಮಗೀರ ಪಾಟೀಲ್ ಸ್ವಾಗತಿಸಿದರು. ದೀಪಕ ಥಮಕೆ ನಿರೂಪಣೆ ಮಾಡಿದರು.
ದೂರದರ್ಶನ ಕಲಾವಿದೆ ದುಗರ್ಾ ಶಮರ್ಾ, ಸಂಗೀತ ಪ್ರಭಾಕರ, ವಿಜಯಕುಮಾರ ಬನಸೋಡೆ, ತೇಜಸ್ ಧುಮಾಳ, ಡಾ.ರಾಧಿಕಾ ಪಾಠಕ, ಸಂಜಯ ಸುವರ್ಣಕಾರ, ಸೋನು ಡಗವಾಲೆ, ಅಮರ ಕಡತನೆ, ಆದಿತ್ಯ ಕಡತನೆ, ಸುರೇಶ ಕದಮ, ಗೋವಿಂದ ರಾಠೋಡ್, ಮಹೇಶ್ವರಿ ಮುಳೆ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ಡಾ.ಶ್ರಾವಣಕುಮಾರ ಟೊಂಪೆ, ರತ್ನದೀಪ ಶೇರಿಕಾರ, ಇಂದ್ರಕರಣ ಖಡಕೆ, ಕೇಶವರಾವ ಸೂರ್ಯವಂಶಿ, ಶಾಮ ಕುಲಕಣರ್ಿ, ಬಾಲಾಜಿ ಕೊಂಪಲೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ಕಲಾವಿದರಿಗೆ ನಾದಬ್ರಹ್ಮ ಸಂಗೀತ ಸಮಿತಿಯ ವತಿಯಿಂದ ಪ್ರಮಾಣಪತ್ರ ನೀಡಲಾಯಿತು.