ಭೋವಿ ಸಮುದಾಯಕ್ಕೆ ಟಿಕೆಟ್ ನೀಡಿ

Sunilkumar
Published on

ಚಿತ್ರದುರ್ಗ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಭೋವಿ ಸಮಾಜಕ್ಕೆ ಚಿತ್ರದುರ್ಗ ಕ್ಷೇತ್ರದ ಟಿಕೆಟ್ ನೀಡುವಂತೆ ವರಿಷ್ಠರಿಗೆ ಮನವಿ ಮಾಡಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಎಸ್.ಸುನಿಲ್‌ಕುಮಾರ್ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ 1.2 ಲಕ್ಷ ಭೋವಿ ಸಮುದಾಯದವರು ಇದ್ದಾರೆ. ಈ ಬಾರಿ ನಮ್ಮವರಿಗೆ ಟಿಕೆಟ್ ನೀಡುವಂತೆ ಇಮ್ಮಡಿ ಸಿದ್ಧರಾಮೇಶ್ವರ ಶ್ರೀಗಳು, ಸಚಿವ ಶಿವರಾಜ್ ತಂಗಡಗಿ ಸೇರಿ ಸಮುದಾಯದ ಹಲವು ಮುಖಂಡರು ಸಿಎಂಗೂ ಮನವಿ ಮಾಡಿದ್ದಾರೆ ಎಂದರು.

27 ವರ್ಷಗಳಿಂದ ಕಾಂಗ್ರೆಸ್ ಕಾರ್ಯಕರ್ತನಾಗಿ, ಯುವ ಕಾಂಗ್ರೆಸ್ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ, ಎನ್‌ಎಸ್‌ಯುಐನಲ್ಲೂ ಕೆಲಸ ಮಾಡಿದ್ದೇನೆ. ಎಸ್ಸಿ ಮೀಸಲು ಕ್ಷೇತ್ರವಾದ ಕಾರಣ ನಾನೂ ಇಲ್ಲಿನ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದು, ವರಿಷ್ಠರು ನೀಡುವ ವಿಶ್ವಾಸವಿದೆ ಎಂದು ತಿಳಿಸಿದರು.

ನಾನೂ ಹೊರಗಿನವನಲ್ಲ, ಸ್ಥಳೀಯನೇ ಆಗಿದ್ದು, ಚಿತ್ರದುರ್ಗದ ಗೋಪಾಲಪುರ ಬಡಾವಣೆಯಲ್ಲಿ ನನ್ನ ತಾತ ವಾಸವಿದ್ದರು. ವ್ಯವಹಾರಿಕ ದೃಷ್ಟಿಯಿಂದ ಬೆಂಗಳೂರಿನಲ್ಲಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಜನಸೇವೆ ಮಾಡುವ ಉದ್ದೇಶದಿಂದ ರಾಜಕೀಯ ಪ್ರವೇಶಿಸಿದ್ದೇನೆ. ಪಕ್ಷದ ವರಿಷ್ಠರನ್ನು ಈಗಾಗಲೇ ಭೇಟಿ ಮಾಡಿದ್ದು, ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ. ಕ್ಷೇತ್ರದ 8 ಜನ ಶಾಸಕರನ್ನು ಭೇಟಿಯಾಗಿದ್ದು, ಬೆಂಬಲಿಸುವ ನಂಬಿಕೆ ಇದೆ ಎಂದು ಹೇಳಿದರು.

ಮುಖಂಡರಾದ ಶಿವರೆಡ್ಡಿ, ಚೆನ್ನಪ್ಪ, ತುಳಸಿ ರಮೇಶ್, ಸುಧಾ ಶ್ರೀನಿವಾಸ್, ಗೋಪಾಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net