

ಇಟಗಿ: ಬದಲಾವಣೆಗೆ ತಕ್ಕಂತೆ ಶಿಕರು ಕೌಶಲ ಆಧಾರಿತ ಭೋದನಾ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಸಾಮರ್ಥ್ಯ ಅಭಿವೃದ್ಧಿಪಡಿಸಿಕೊಳ್ಳುವುದು ಉಪಯುಕ್ತ ಎಂದು ಪಾರಿಶ್ವಾಡ ಹನಿವೆಲ್ ಇಂಟರ್ನ್ಯಾಷನಲ್ ಶಾಲೆ ಅಧ್ಯ ಸುಭಾಷ ಗುಳಶೆಟ್ಟಿ ಹೇಳಿದರು.
ಸಮೀಪದ ಪಾರಿಶ್ವಾಡ ಗ್ರಾಮದ ಹನಿವೆಲ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸಿಬಿಎಸ್ಇ ಶಾಲೆಗಳ ರಾಷ್ಟ್ರೀಯ ಪಠ್ಯಕ್ರಮದ ಜಿಲ್ಲಾಮಟ್ಟದ ಸಾಮರ್ಥ್ಯ ಅಭಿವೃದ್ಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಷ್ಟ್ರ ನಿರ್ಮಾಣದಲ್ಲಿ ಶಿಣದ ಪಾತ್ರ ಅತಿ ಮುಖ್ಯ ಎಂದರು.
ಪ್ರಾಚಾರ್ಯ ಡಾ.ಅನಿಲಕುಮಾರ ಬೆಣಗಿ ಮಾತನಾಡಿ, ಮೌಲ್ಯಾಧಾರಿತ ಶಿಣ ನೀಡಲು ಪರಿಣಾಮಕಾರಿ ಕಲಿಕೆಗೆ ಚಟುವಟಿಕೆ ಆಧಾರಿತ ಭೋದನೆ ಅವಶ್ಯ ಎಂದರು.
ಬೆಳಗಾವಿ ಭರತೇಶ ಇಂಟರ್ನ್ಯಾಷನಲ್ ಶಾಲೆಯ ಪ್ರಾಚಾಯೆರ್ ದೇವಯಾನಿ ಮತ್ತು ಬೆಳಗಾವಿ ಎಸ್.ಎಂ. ಕಲೂತಿ ಕ್ರೀಡಾ ಮಹಾವಿದ್ಯಾಲಯದ ಸಂಪನ್ಮೂಲ ವ್ಯಕ್ತಿ ಪಾಂಡುರಂಗ ಪಾಟೀಲ ಪ್ರಾತ್ಯಕೆ ಮೂಲಕ ತರಬೇತಿ ನೀಡಿದರು. ಉಜ್ಮಾ ನಾಯಕ ನಿರೂಪಿಸಿದರು, ಕವಿತಾ ಅಂಗಡಿ ಸ್ವಾಗತಿಸಿದರು, ವಿಜಯಾ ಪೂಜಾರಿ ವಂದಿಸಿದರು.