ಭೋಗೇಶ್ವರ ದೇಸ್ಥಾನದಲ್ಲಿ ವಿಶೇಷ ಪೂಜೆ

04 kem 2
Published on

ಕೆಂಭಾವಿ: ಪವಿತ್ರ ಮಾಸವಾದ ಶ್ರಾವಣ ಸೋಮವಾರ ಪಟ್ಟಣದ ಶ್ರೀ ಭೋಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ಅಭಿಷೇಕ ಸೇರಿ ವಿವಿಧ ಧಾರ್ಮಿಕ ಕಾರ‍್ಯಕ್ರಮ ಜರುಗಿದವು.

ಬೆಳಗ್ಗೆಯಿಂದ ಸಾಗರೋಪಾದಿಯಲ್ಲಿ ಭಕ್ತರ ದಂಡು ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಮಳೆಯ ನಡುವೆಯೂ ಭಕ್ತರ ಉತ್ಸಾಹ ಇಮ್ಮಡಿಗೊಂಡಿತು.

ರಾಜಶೇಖರಯ್ಯ ಹಿರೇಮಠ ನೇತೃತ್ವದಲ್ಲಿ ಭೋಗೇಶ್ವರನಿಗೆ ನಾಮ ಸಂಕೀರ್ತನೆ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಲಕ್ಷ ಬಿಲ್ವಾರ್ಚನೆ ಸೇರಿ ಹಲವು ಪೂಜೆ ನೆರವೇರಿದವು. ನಂತರ ನೆರೆದಿದ್ದ ಭಕ್ತರಿಗೆ ದೇವಸ್ಥಾನ ಕಮಿಟಿಯಿಂದ ಮಹಾಪ್ರಸಾದ ವ್ಯವಸ್ಥೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net