

ಹುಬ್ಬಳ್ಳಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ರ್ಚಚಿಸಿ ಭೋವಿ ನಿಗಮಕ್ಕೆ ಹೆಚ್ಚಿನ ಅನುದಾನ ಕೊಡಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಭರವಸೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹು-ಧಾ ಮಹಾನಗರ ಪಾಲಿಕೆ, ತಾಲೂಕು ಆಡಳಿತ, ಹುಬ್ಬಳ್ಳಿ ತಾಲೂಕು ಭೋವಿ (ವಡ್ಡರ) ಸಮಾಜ, ಧಾರವಾಡ ಜಿಲ್ಲಾ ಭೋವಿ ನೌಕರರ ಸಂಘದ ಆಶ್ರಯದಲ್ಲಿ ಇಂದಿರಾ ಗಾಜಿನ ಮನೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಶ್ರೀ ಶಿವಯೋಗಿ ಸಿದ್ಧರಾಮೇಶ್ವರರ 848ನೇ ಜಯಂತ್ಯುತ್ಸವ ಹಾಗೂ ಸಿದ್ಧರಾಮೇಶ್ವರ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಹುಡಾಕ್ಕೆ ಸಿಎ ಸೈಟ್ಗಾಗಿ ಅರ್ಜಿ ಸಲ್ಲಿಸಿ. ಪರಿಶೀಲಿಸಿ ಭವನ ನಿರ್ವಿುಸಲು ಜಾಗ ಕೊಡಿಸಲು ಪ್ರಯತ್ನಿಸುವೆ. ಸುಳ್ಳದಲ್ಲಿ ಜಮೀನು ಕೇಳಿದ್ದೇವೆ. ಅಲ್ಲಿನ ರೈತರು ಒಪ್ಪಿಗೆ ಕೊಟ್ಟಿದ್ದಾರೆ. ಪ್ರಕ್ರಿಯೆ ಚಾಲನೆಯಲ್ಲಿದೆ. 5ರಿಂದ 10 ಸಾವಿರ ಮನೆ ನಿರ್ವಿುಸಿ ಕೊಡಲಾಗುವುದು’ ಎಂದರು.
ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಜಾತಿ ವ್ಯವಸ್ಥೆಯಿಂದ ದೇಶದ ಅಭಿವೃದ್ಧಿಗೆ ಕಂಟಕ. ಪ್ರತಿಯೊಬ್ಬರಿಗೂ ಶಿಕ್ಷಣ ಸಿಗುವುದರಿಂದ ಜಾತಿ ವ್ಯವಸ್ಥೆ ನಿಮೂಲನೆ ಮಾಡಲು ಸಾಧ್ಯ. ಶರಣರು ವಚನಗಳ ಮೂಲಕ ಸಮಾಜದ ಅಂಕು-ಡೊಂಕು ತಿದ್ದಿದರು. ಡಾ. ಅಂಬೇಡ್ಕರ್ ಅವರು ಸಂವಿಧಾನ ರಚಿಸುವ ಮೂಲಕ ಎಲ್ಲರಿಗೂ ಸಾಮಾಜಿಕ ನ್ಯಾಯ, ಸಮಾನತೆ ನೀಡಿದರು ಎಂದರು.
ಶಾಸಕ ಸಿ.ಎಂ. ನಿಂಬಣ್ಣವರ ಮಾತನಾಡಿದರು. ದೈಹಿಕ ಶಿಕ್ಷಣ ಶಿಕ್ಷಕ ಕೆ.ವಿ. ಒಡೆಯರ ಉಪನ್ಯಾಸ ನೀಡಿದರು.
ಬಾಗಲಕೋಟೆ-ಚಿತ್ರದುರ್ಗ ಭೋವಿ (ವಡ್ಡರ) ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಎಂ.ವೈ. ನರಗುಂದ ಅಧ್ಯಕ್ಷತೆ ವಹಿಸಿದ್ದರು. ಸಾಧಕರಾದ ಕಿಮ್್ಸ ವೈದ್ಯ ಡಾ. ಎಚ್. ಸುರೇಶ, ಶಿಕ್ಷಕ ಸಿದ್ದರಾಮಪ್ಪ ಅಮರಾವತಿ, ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕಾನಂದ ವಿಶ್ವಜ್ಞ ಅವರಿಗೆ ಸಿದ್ಧರಾಮೇಶ್ವರ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಶಾಸಕಿ ಕುಸುಮಾವತಿ ಶಿವಳ್ಳಿ, ಪ್ರಭು ಹಿರೇಕೆರೂರ, ಲಕ್ಷ್ಮಣ ಬೀಳಗಿ, ಮಹಾಂತೇಶ ಕೃಷ್ಣಾಪೂರ, ವೆಂಕಟೇಶ ಮೇಸ್ತ್ರಿ, ಗುರುನಾಥ ಇಳಕಲ್ಲ, ಲಕ್ಷ್ಮಣ ಬೆಳ್ಳಿಗುಂಡಿ, ದತ್ತು ಉಣಕಲ್ಲ ಇತರರು ಇದ್ದರು.