ಭೇದವೆಣಿಸದೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧ

IMG_20230708_123410--01
Published on

ಚಿತ್ರದುರ್ಗ: ನಾನೀಗ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಶಾಸಕ,ನನಗೆ ಅವರು ಮತ ಕೊಟ್ಟಿಲ್ಲ,ಇವರು ವೋಟ್ ಹಾಕಿದ್ದಾರೆ ಎಂದೆಲ್ಲ ಭೇದಭಾವ ಮಾಡದೆ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸುವುದಾಗಿ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಹೇಳಿದರು.

ನಗರದ ನಗರದ ಐಯ್ಯಣ್ಣ ಪೇಟೆಯಲ್ಲಿ ಅಂದಾಜು 2.50 ಕೋಟಿ ರೂ.ವೆಚ್ಚದ ತ್ಯಾಗರಾಜ ಮಾರುಕಟ್ಟೆ ನೂತನ ಕಟ್ಟಡಕ್ಕೆ ಶನಿವಾರ ಶಂಕುಸ್ಥಾಪನೆ ನೇರವೇರಿಸಿ ಮಾತನಾಡಿದ ಅವರು, ಕ್ಷೇತ್ರದ ಜನರು ಕಳೆದ 30 ವರ್ಷಗಳಿಂದಿರುವ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದಾರೆ. ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸ ಬೇಕಿದೆ.

ಈ ನಿಟ್ಟಿನಲ್ಲಿ ಸೂಕ್ತ ಸಲಹೆಗಳನ್ನು ಕೊಡುವಂತೆ ಹಿರಿಯರಿಗೆ ಮನವಿ ಮಾಡುವುದಾಗಿ ಹೇಳಿದ ಅವರು,ಎಲ್ಲರೂ ಸೇರಿ ನವದುರ್ಗವನ್ನು ನಿರ್ಮಿಸೋಣವೆಂದರು.
ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ ಮಾತನಾಡಿ,ಈ ಮಾರುಕಟ್ಟೆಗೆ ಇತಿಹಾಸವಿದ್ದು,ನಗರಕ್ಕೆ ಇದೊಂದು ಮಾರುಕಟ್ಟೆ ಆಗಿತ್ತು ಎಂದರು. ನಗರಸಭಾ ಸದಸ್ಯರಾದ ಹರೀಶ್,ವೆಂಕಟೇಶ್,ಮಾಜಿ ಸದಸ್ಯರಾದ ಡಿ.ಸಿ.ಸುರೇಶ್,ರಾಜೇಶ್ ಹಾಗೂ ನಾಗ ರಾಜ್,ಎನ್.ಡಿ.ಕುಮಾರ್,ನಿತಿನ್,ಗುತ್ತಿಗೆದಾರ ಕುಮಾರ್,ಹೇಮಂತ್,ವಸಂತಕುಮಾರ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net