ಭೇದಭಾವ ಮರೆತು ಸೇವೆ ಸಲ್ಲಿಸಿ

7krp-01
Published on

ಕೆ.ಆರ್.ಪೇಟೆ: ಭೇದಭಾವ ಮರೆತು ಸೇವೆ ಸಲ್ಲಿಸಲು ಮುಂದಾದಾಗ ಮಾತ್ರ ಗ್ರಾಮಗಳ ಅಭಿವೃದ್ಧಿ ಸಾಧ್ಯ ಎಂದು ಮನ್ಮುಲ್ ನಿರ್ದೇಶಕ ರವಿ ಹೇಳಿದರು. ಸಂತೆಬಾಚಳ್ಳಿ ಹೋಬಳಿ ಹಳೇ ಅತ್ತಿಗುಪ್ಪೆ ಗ್ರಾಮದಲ್ಲಿ ಕೆ.ಆರ್. ಪೇಟೆ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಎನ್ನೆಸ್ಸೆಸ್ ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಸೇವಾ ಮನೋಭಾವ ಕಲಿಯುತ್ತಾರೆ.

ಗ್ರಾಮೀಣ ಜನರೊಡನೆ ಬೆರೆತು ನಿಸ್ವಾರ್ಥವಾಗಿ ಕೆಲಸ ನಿರ್ವಹಿಸುವುದರಿಂದ ಜೀವನದ ಪಾಠ ಕಲಿಯುತ್ತಾರೆ. ಗಾಂಧೀಜಿ ಕಂಡ ಕನಸಿನಂತೆ ಹಳ್ಳಿಗಳ ಉದ್ಧಾರ ಆಗಬೇಕು ಎಂದರೆ ಅದು ಸೇವಾನಿರತ ಯುವಕರಿಂದ ಮಾತ್ರ ಸಾಧ್ಯ ಎಂದರು.

ನಾವು ಯಾವಾಗಲೂ ಆತ್ಮತೃಪ್ತಿಗಾಗಿ ಕೆಲಸ ನಿರ್ವಹಿಸಬೇಕು. ಸರ್ಕಾರಿ ಶಾಲಾ ಕಾಲೇಜುಗಳನ್ನು ಉಳಿಸಿ ಬೆಳೆಸಲು ಸರ್ಕಾರಿ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ತಮ್ಮ ತಮ್ಮ ಮಕ್ಕಳನ್ನು ಮೊದಲು ಸರ್ಕಾರಿ ಶಾಲೆಗೆ ಕಳಿಸಬೇಕು ಎಂದು ರವಿ ಸಲಹೆ ನೀಡಿದರು.

ಧಾರವಾಡ ಜಿಲ್ಲೆಯ ಭಾರತ ಸೇವಾದಳ ಸಂಚಾಲಕ ಕಾಶೀನಾಥ್, ಉಪನ್ಯಾಸಕ ಕತ್ತರಘಟ್ಟ ವಾಸು, ಪ್ರೊ. ಧನಂಜಯ, ಕನ್ನಡ ಉಪನ್ಯಾಸಕ ಜಯಕುಮಾರ್, ಶಿಕ್ಷಕ ನಾಗೇಶ್ ಇತರರರು ಇದ್ದರು. ಇದೇ ಸಂದರ್ಭ ವಿದ್ಯಾರ್ಥಿಗಳಿಗೆ ಅತಿಥಿಗಳು ಪ್ರಮಾಣಪತ್ರ ಪತ್ರ ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net