ಭೂಸಂತ್ರಸ್ತ ರೈತರಿಗೆ ಪರಿಹಾರ ನೀಡಿ

dvd5
ದೇವದುರ್ಗ ತಾಲೂಕಿನ ಚಿಕ್ಕಹೊನ್ನಕುಣಿ ವಿಭಾಗದ ನೀರಾವರಿ ಇಲಾಖೆ ಕಚೇರಿಗೆ ರಾಜ್ಯ ರೈತ ಸಂಘದ ಮುಖಂಡರು ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್, ಉಪಾಧ್ಯಕ್ಷ ಅಮರಣ್ಣ ಗುಡಿಹಾಳ, ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್, ತಾಲೂಕು ಅಧ್ಯಕ್ಷ ಹಾಜಿ ಮಸ್ತಾನ್, ಪ್ರಮುಖರಾದ ರಾಜು, ಮಲ್ಲಣ್ಣ ಗೌಡೂರು, ರಮೇಶ ಅಬಕಾರಿ, ಹುಸೇನ್‌ಸಾಬ್, ತಿಮ್ಮಣ್ಣ ನಾಯಕ ಇತರರಿದ್ದರು.
Published on

ದೇವದುರ್ಗ: ನಾರಾಯಣಪುರ ಬಲದಂಡೆ ವಿತರಣೆ ನಾಲೆಯ 9ಎ ಯೋಜನೆಗೆ ಭೂಮಿ ಕಳೆದುಕೊಂಡ ರೈತರಿಗೆ ತಕ್ಷಣ ಪರಿಹಾರ ನೀಡುವಂತೆ ಆಗ್ರಹಿಸಿ ರಾಜ್ಯ ರೈತ ಸಂಘದ ಮುಖಂಡರು ತಾಲೂಕಿನ ಚಿಕ್ಕಹೊನ್ನಕುಣಿ ವಿಭಾಗದ ನೀರಾವರಿ ಇಲಾಖೆ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.


ಎನ್‌ಆರ್‌ಬಿಸಿ 9ಎ ವಿತರಣೆ ನಾಲೆ ವಡವಾಟಿ ವ್ಯಾಪ್ತಿಯ ಶಾವಂತಗಲ್ ಗ್ರಾಮದಲ್ಲಿ ನಾಲ್ವರು ರೈತರು ಭೂಮಿಯನ್ನು ನಾಲೆ ನಿರ್ಮಾಣಕ್ಕೆ ನೀಡಿದ್ದಾರೆ. ಆದರೆ, 9 ವರ್ಷ ಕಳೆದರೂ ರೈತರಿಗೆ ಸೂಕ್ತ ಪರಿಹಾರ ನೀಡುತ್ತಿಲ್ಲ.

ಶಾವಂತಗಲ್ ಗ್ರಾಮದ ಸರ್ವೇ ನಂಬರ್ 65ರ ರೈತರಾದ ಕನಕಪ್ಪ ನಿಂಗಯ್ಯ, ಭೀಮರಾಯ ನಿಂಗಯ್ಯ, ದುರುಗಪ್ಪ ನಿಂಗಯ್ಯ, ಅಂಬ್ರಮ್ಮ ರಂಗಯ್ಯ ಬಾಡ್ಲ, ಬಸವರಾಜ ತಿಮ್ಮಯ್ಯ ತಮ್ಮ ಜಮೀನನ್ನು ನಾಲೆ ನಿರ್ಮಾಣಕ್ಕೆ ನೀಡಿದ್ದಾರೆ.

ರೈತ ಸಂಘ ಹಾಗೂ ತಹಸೀಲ್ದಾರ್ ನೇತೃತ್ವದಲ್ಲಿ ಸಂಧಾನಸಭೆ ನಡೆಸಿ ರೈತರ ಮನವೊಲಿಸಲಾಗಿದೆ. ಆದರೆ ಪರಿಹಾರ ನೀಡುವುದಾಗಿ ರೈತರಿಗೆ ಲಿಖಿತ ಭರವಸೆ ನೀಡಿ ಆರು ತಿಂಗಳು ಕಳೆದರೂ ನೀಡಿಲ್ಲ. ಬೇಡಿಕೆ ಈಡೇರಿಸದೆ ನಿರ್ಲಕ್ಷ್ಯ ವಹಿಸಿದರೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟಿಸಲಾಗುವುದು ಎಚ್ಚರಿಸಿದರು.


ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್, ಉಪಾಧ್ಯಕ್ಷ ಅಮರಣ್ಣ ಗುಡಿಹಾಳ, ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್, ತಾಲೂಕು ಅಧ್ಯಕ್ಷ ಹಾಜಿ ಮಸ್ತಾನ್, ಪ್ರಮುಖರಾದ ರಾಜು, ಮಲ್ಲಣ್ಣ ಗೌಡೂರು, ರಮೇಶ ಅಬಕಾರಿ, ಹುಸೇನ್‌ಸಾಬ್, ತಿಮ್ಮಣ್ಣ ನಾಯಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net