ಬಳ್ಳಾರಿ: ಹತ್ತನೇ ವಾರ್ಡ್‌ನ ದೊಡ್ಡ ಮಾರ್ಕೆಟ್ ಬಳಿ ಕೇಂದ್ರ ಸರ್ಕಾರ ಮಾಡಲ್ ಶಾಲೆ ಮಾದರಿಯಲ್ಲಿ 21.50 ಲಕ್ಷ ರೂ. ವೆಚ್ಚದ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಶಾಸಕ ವೈ.ಎಂ. ಸತೀಶ್ ಗುರುವಾರ ಭೂಮಿಪೂಜೆ ನೆರವೇರಿಸಿದರು. ಮಾಜಿ ಶಾಸಕ ಜಿ. ಸೋಮಶೇಖರರೆಡ್ಡಿ, ಪಾಲಿಕೆ ಸದಸ್ಯರಾದ ಕೋನಂಕಿ ತಿಲಕ್, ಗೋವಿಂದರಾಜುಲು, ಶ್ರೀನಿವಾಸ್ ಮೋತ್ಕರ್, ಗೋವಿಂದ ಇದ್ದರು.