ಭೂಮಿ ಮಂಜೂರಾತಿಗಾಗಿ ಪಂಜಿನ ಮೆರವಣಿಗೆ 14ಕ್ಕೆ

Pressmeet
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.62666637, 0.47464284);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 41;
Published on

ಚಿತ್ರದುರ್ಗ: ಭೂಮಿ-ವಸತಿ ಇಲ್ಲದ ಬಡವರಿಗೆ, ಅವರ ಜೀವನಾಧಾರವಾಗಿರುವ ತುಂಡು ಭೂಮಿಯ ಮೇಲೆ ತ್ವರಿತ ಹಕ್ಕು ಮಂಜೂರಾತಿಗಾಗಿ ಆ. 14ರಂದು ಸಂಜೆ 6ಕ್ಕೆ ಪಂಜಿನ ಮೆರವಣಿಗೆ ಮೂಲಕ ರಾಜ್ಯದೆಲ್ಲ ಶಾಸಕರಿಗೆ ಒತ್ತಾಯಿಸಲಾಗುವುದು. ಸ್ಪಂದಿಸದಿದ್ದರೆ, 15ರಂದು ಘೇರಾವ್ ಹಾಕಲಾಗುವುದು ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಮುಖಂಡ ಕುಮಾರ್ ಸಮತಳ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 15ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೂ ಒತ್ತಾಯಿಸಲಿದ್ದೇವೆ. ಸರ್ಕಾರ ಸ್ಪಂದಿಸದಿದ್ದಲ್ಲಿ ಹೋರಾಟದ ಸ್ವರೂಪ ಬದಲಾಗಲಿದೆ ಎಂದರು.

ಭೂಮಿ-ವಸತಿ ಮಂಜೂರಾತಿ ಪ್ರಕ್ರಿಯೆ ತ್ವರಿತಗೊಳಿಸಲು ಹೋರಾಟಗಾರರನ್ನೂ ಒಳಗೊಂಡ ಉನ್ನತ ಮಟ್ಟದ ಸಮಿತಿ ಮರು ರಚಿಸಿ ಕಾರ್ಯೋನ್ಮುಖರಾಗಬೇಕು. ಕೂಡಲೇ ನಮೂನೆ 50, 53, 57ರಲ್ಲಿ ಅರ್ಜಿ ಸಲ್ಲಿಸಿ ಸಾಗುವಳಿ ಮಾಡುತ್ತಿರುವ ಭೂಮಿಗಳನ್ನು ಪಂಚನಾಮೆ, ಜಿಪಿಎಸ್ ಸರ್ವೇ ನಡೆಸಬೇಕು. 94‘ಸಿ’ ಮತ್ತು 94‘ಸಿಸಿ’ ಅಡಿಯಲ್ಲಿ ಸಲ್ಲಿಸಿರುವ ಅರ್ಜಿಗಳನ್ನು ಪರಿಶೀಲಿಸಿ, ಹಕ್ಕುಪತ್ರ ನೀಡಲು ಸತ್ಕಾರ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದರು.

ದಶಕಗಳಿಂದ ಉಳುಮೆ ಮಾಡುತ್ತ ಬಂದಿರುವ ಬಡವರಿಗೆ ಹಕ್ಕುಪತ್ರ ನೀಡುವಲ್ಲಿ ಸರ್ಕಾರವೇ ವಿಳಂಬ ಧೋರಣೆ ಅನುಸರಿಸುತ್ತಿದೆ. ಆದ್ದರಿಂದ ಬಗರ್ ಹುಕುಂ ಸಾಗುವಳಿ ಮಾಡುತ್ತ ಅರ್ಜಿ ಸಲ್ಲಿಸಿರುವ ಭೂ ರಹಿತರೆಲ್ಲರಿಗೂ ಭೂಮಿ ಮಂಜೂರಾತಿ ನೀಡಬೇಕು ಎಂದು ಆಗ್ರಹಿಸಿದರು.

ಅರಣ್ಯ-ಕಂದಾಯ ಭೂಮಿಗಳ ಜಂಟಿ ಸರ್ವೇ ನಡೆಸಬೇಕು. ಅರಣ್ಯ ಹಕ್ಕು ಕಾಯ್ದೆಯನ್ನು ಗೌರವಿಸಿ ಜಾರಿಗೊಳಿಸಬೇಕು. ಸ್ವಾತಂತ್ರೃ ಬಂದು 7 ದಶಕಗಳಾದರೂ ನೆಲೆ ಇಲ್ಲದೆ, ಅಲೆಯುತ್ತಿರುವ ಅಲೆಮಾರಿ ಸಮುದಾಯಗಳಿಗೆ ಆದ್ಯತೆಯ ಮೇಲೆ ವಸತಿ ವ್ಯವಸ್ಥೆ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಬಲವಂತದ ಭೂಸ್ವಾಧೀನ ಸರ್ಕಾರ ಕೈಬಿಡಬೇಕು. ಕಂಪನಿಗಳ ಅಭಿವೃದ್ಧಿಗಿಂತ ಜನತೆಯ ಪ್ರಗತಿಗೆ ಮೊದಲ ಆದ್ಯತೆ ನೀಡಬೇಕು. ಭೂ ಮಂಜೂರಾತಿ ಹೆಸರಲ್ಲಿ ಭ್ರಷ್ಟಾಚಾರ ನಡೆಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಕೋರಿದರು.

ಮುಖಂಡರಾದ ಸತ್ಯಪ್ಪ ಮಲ್ಲಾಪುರ, ಹನುಮಂತಪ್ಪ ಗೋನೂರು, ಬಿ.ಬಿ.ಹಟ್ಟಿ ವೆಂಕಟೇಶ್, ಈರಣ್ಣ, ಚಂದ್ರಣ್ಣ, ಅಜ್ಜಪ್ಪ, ತಿಮ್ಮಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net