ಭೂಮಿ ಇರುವವರೆಗೆ ಜಾನಪದ ಶಾಶ್ವತ

23 hbd 04
Published on

ಹುಮನಾಬಾದ್: ಜಾನಪದ ಜನರ ಬಾಯಿಂದ ಬಾಯಿಗೆ ಬಂದಿರುವ ಪದವಾಗಿದೆ. ಎಲ್ಲಿಯವರೆಗೆ ಭೂಮಿ ಮೇಲೆ ಜನ ಇರುತ್ತಾರೋ ಅಲ್ಲಿಯವರಿಗೆ ಜಾನಪದ ಇರುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆ ಅಧೀಕ್ಷಕ ಈರಯ್ಯ ಮಠ ಹೇಳಿದರು.
ಕನಕಟ್ಟಾ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕರ್ನಾಟಕ ಜಾನಪದ ಪರಿಷತ್ ತಾಲೂಕು ಘಟಕದಿಂದ ಬುಧವಾರ ಹಮ್ಮಿಕೊಂಡ ವಿಶ್ವ ಜಾನಪದ ದಿನಾಚರಣೆಯಲ್ಲಿ ಮಾತನಾಡಿ, ಜನರ ಆಯಾಸ ನಿವಾರಣೆಗೆ ಹಾಡು ಹಾಡುವುದು ರೂಡಿ ಮಾಡಿಕೊಂಡಿದ್ದರು. ಆದರೆ ಈಗ ರಚಿಸುವ ಜಾನಪದ ಗೀತೆಗಳು ಯಾವ ಲೆಕ್ಕಕ್ಕೂ ಇಲ್ಲದಂತಾಗಿದೆ ಎಂದು ನುಡಿದರು.
ಕಲಾವಿದ ಅಂಬಣ್ಣ ದುಂಪ ಮಾತನಾಡಿ, ಮೂಲ ಜಾನಪದ ಸೊಗಡನ್ನು ಬಿಚ್ಚಿಡುತ್ತಾ ಅನೇಕ ಕಥೆ, ಸೋಬಾನೆ, ಮದುವೆ, ಮೋಹರಂ, ಕುಟ್ಟುವ, ಬೀಸುವ, ಹಾಡುಗಳನ್ನು ಹಾಡಿ ಮಕ್ಕಳನ್ನು ಮನರಂಜಿಸಿದರು.
ರವಿ ಭಂಡಾರಿ, ಜಾನಪದ ಪರಿಷತ್ ಅಧ್ಯಕ್ಷ ಶರದಕುಮಾರ ನಾರಾಯಣಪೇಟ್ಕರ್, ಮುಖ್ಯಗುರು ಮಹಾವೀರ ಜಮಖಂಡಿ, ಸೋಮನಾಥ ಮೀನಕೇರಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net