ಭೂಮಿ ಇರುವವರೆಗೂ ಗಾಂಧೀಜಿ ನೆನಪು ಶಾಶ್ವತ : ಸಿ.ಎನ್.ಬಾಲಕೃಷ್ಣ

ಭೂಮಿ ಇರುವವರೆಗೂ ಗಾಂಧೀಜಿ ನೆನಪು ಶಾಶ್ವತ : ಸಿ.ಎನ್.ಬಾಲಕೃಷ್ಣ
Published on


ಚನ್ನರಾಯಪಟ್ಟಣ :
ಅಹಿಂಸಾ ಮಾರ್ಗದ ಮೂಲಕ ಸ್ವಾತಂತ್ರ್ಯ ತಂದುಕೊಟ್ಟು ದೇಶಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ಮಹಾನ್ ವ್ಯಕ್ತಿ ಗಾಂಧೀಜಿ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.


ತಾಲೂಕಿನ ದಿಡಗ ಗ್ರಾಮದ ಸರ್ಕಾರಿ ಫ್ರೌಢಶಾಲೆಯ ಆವರಣದಲ್ಲಿ ಹಳೆ ವಿದ್ಯಾರ್ಥಿಗಳ ಸಹಕಾರದೊಂದಿಗೆ ನಿರ್ಮಿಸಿರುವ ಮಹಾತ್ಮ ಗಾಂಧೀಜಿಯವರ ಪುತ್ಥಳಿಯನ್ನು ಸೋಮವಾರ ಅನಾವರಣಗೊಳಿಸಿ ಮಾತನಾಡಿದರು.


ಮಹಾತ್ಮ ಗಾಂಧೀಜಿಯವರಿಗೆ ಅವರೇ ಸಾಟಿ. ಈ ಭೂಮಿ ಇರುವವರೆಗೂ ಅವರ ನೆನಪು ಶಾಶ್ವತವಾಗಿರುತ್ತದೆ. ಅವರ ತತ್ವ, ಆದರ್ಶ ಹಾಗೂ ಸಂದೇಶಗಳನ್ನು ಯುವ ಸಮುದಾಯವು ಮೈಗೂಡಿಸಿಕೊಂಡು ಮುನ್ನಡೆಯಬೇಕು ಎಂದರು.


ಶ್ರೀ ಮಾತಾ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಎಚ್.ಎಂ.ನಾಗಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು ಗಣ್ಯರು ಪುತ್ಥಳಿಗೆ ಪುಷ್ಪಾರ್ಚನೆ ಮಾಡಿದರು. ಪದವಿ ಪೂರ್ವ ಕಾಲೇಜು ಹಾಗೂ ಸರ್ಕಾರಿ ಫ್ರೌಢಶಾಲೆಯ ವಿದ್ಯಾರ್ಥಿಗಳು ಗಾಂಧೀಜಿಯವರ ವಿಚಾರ ಒಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.


ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಾವಿತ್ರಮ್ಮ, ಸದಸ್ಯೆ ಸೌಮ್ಯ ಗವೀಶ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಎಂ.ಆರ್.ವಾಸು, ಪುಟ್ಟರಾಜು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಕೆ.ಎನ್.ಪ್ರಕಾಶ್, ಎಂಎಂಎಲ್‌ನ ವಿಶ್ರಾಂತ ಜನರಲ್ ಮ್ಯಾನೇಜರ್ ಬಿದರಕೆರೆ ಲಕ್ಕಣ್ಣ, ನಿವೃತ್ತ ಶಿಕ್ಷಕರಾದ ಬಿ.ಎನ್.ಕಾವೇಟಿಗೌಡ, ಜೆ.ಬಿ.ಸುಬ್ರಾಯ, ಗಾಂಧಿವಾದಿ ಶಿವರಾಜ್, ಪ್ರಮುಖರಾದ ಪುರದ ಚಂದ್ರಣ್ಣ, ತೋಟಿ ನಾಗಣ್ಣ, ಮಂಜೇಗೌಡ, ಪ್ರಾಂಶುಪಾಲ ಡಿ.ಆರ್.ಮಂಜುನಾಥ್, ಮುಖ್ಯಶಿಕ್ಷಕ ನೀಲಿಸಿದ್ದು ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net