ಭೂಮಾಪಕರ ಮೇಲಿನ ಹಲ್ಲೆ ತಡೆಗೆ ಸರ್ಕಾರ ಕ್ರಮಕೆಗೊಳ್ಳಲಿ

2
Published on

ಕುಣಿಗಲ್​: ಭೂಮಾಪಕರ ಮೇಲೆ ನಡೆಯುವ ಹಲ್ಲೆಯನ್ನು ತಡೆಗಟ್ಟಲು ರಾಜ್ಯ ಸರ್ಕಾರ ಕ್ರಮಕೆಗೊಳ್ಳಬೇಕು ಎಂದು ಬಿದನಗೆರೆ ಬಸವೇಶ್ವರ ಮಠದ ಪೀಠಾಧಿಕಾರಿ ಡಾ.ಧನಂಜಯ ಗುರೂಜಿ ತಿಳಿಸಿದ್ದಾರೆ.

ಪಟ್ಟಣದ ಜಿಕೆಬಿಎಂಎಸ್​ ಶಾಲಾ ಮೆದಾನದಲ್ಲಿ ಕುಣಿಗಲ್​ ತಾಲೂಕು ಪರವಾನಗಿ ಭೂಮಾಪಕರ ಸಂ ರಾಷ್ಟ್ರೀಯ ಭೂಮಾಪಕರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಟೆನ್ನಿಸ್​ ಬಾಲ್​ ಸೀಮಿತ ಓವರ್​ಗಳ ಕ್ರಿಕೆಟ್​ ಟೂರ್ನ್​ಮೆಂಟ್​ನ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಭೂಮಾಪಕರು ಸರ್ಕಾರದ ಅಂಗವಾಗಿ ಕೆಲಸ ಮಾಡುತ್ತಿದ್ದಾರೆ. ಜಮೀನು, ರಸ್ತೆ ಸೇರಿ ವಿವಿಧ ಸರ್ವೇ ಸಮಯದಲ್ಲಿ ಹತಾಶಗೊಂಡ ಗುಂಪುಗಳು ಹಲ್ಲೆ ನಡೆಸಿರುವ ಉದಾರಣೆ ಇದೆ. ಇವರುಗೆ ಸೂಕ್ತ ರಣೆ ನೀಡುವ ದಿಸೆಯಲ್ಲಿ ರಾಜ್ಯ ಸರ್ಕಾರ ಕ್ರಮಕೆಗೊಳ್ಳಬೇಕೆಂದು ತಿಳಿಸಿದರು.

ಚಿಕ್ಕಬಳ್ಳಾಪುರ ಜಿಲ್ಲೆ ಮಂಚೇನಹಳ್ಳಿ ತಾಲೂಕಿನ ಕನಗಾನಕೊಪ್ಪದಲ್ಲಿ ಕ್ರಷರ್​ ಮಾಲೀಕ ರೆತರ ಮೇಲೆ ನಡೆದ ಗುಂಡಿನ ದಾಳಿ ಅಮಾನವೀಯವಾದದ್ದು, ಇಂತಹ ಟನೆಗಳು ಪ್ರತಿಯೊಬ್ಬ ನಾಗರಿಕರು ಖಂಡಿಸಬೇಕು, ಟನೆಯು ಸಮಾಜ ತಲೆ ತಗ್ಗಿಸುವಂತದಾಗಿದೆ. ಮುಂದೆ ಈ ರೀತಿ ಟನೆ ನಡೆಯದಂತೆ ಕ್ರಮಕೆಗೊಳ್ಳಬೇಕೆಂದು ಒತ್ತಾಯಿಸಿದರು. ಕೆಲಸ ಹಾಗೂ ಜೀವನದ ಜಂಜಾಟದಿಂದ ಹೊರಬರಲು ಕ್ರೀಡೆ ಪೂರಕವಾಗಿದೆ. ತಾಲೂಕು ಪರವಾನಗಿ ಭೂಮಾಪಕರ ಸಂ ಕ್ರೀಡಾ ಕೂಡ ಹಮ್ಮಿಕೊಂಡಿರುವುದು ಸ್ವಾಗತಕರವಾಗಿದೆ ಎಂದರು.

ಪರವಾನಗಿ ಭೂಮಾಪಕರ ಸಂದ ರಾಜ್ಯಾಧ್ಯ ತಿರುಮಲೇಗೌಡ ಮಾತನಾಡಿ, ಭಾರತದ ಭೂಮಾಪನವು ಭೂವೆಜ್ಞಾನಿಕ ದತ್ತಾಂಶಗಳ ಸಿದ್ಧಾಂತ, ಅಭ್ಯಾಸ, ಸಂಗ್ರಹಣೆ ಮತ್ತು ಅನ್ವಯಗಳ ಪ್ರಗತಿಗೆ ಭೂಮಾಪಕರು ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ದತ್ತಾಂಶ ಉತ್ಪಾದಕರು ಮತ್ತು ಬಳಕೆದಾರರಲ್ಲಿ ಮಾಹಿತಿ, ಆಲೋಚನೆಗಳು ಮತ್ತು ತಾಂತ್ರಿಕ ಆವಿಷ್ಕಾರಗಳ ಸಕ್ರಿಯ ವಿನಿಮಯವನ್ನು ಉತ್ತೇಜಿಸುತ್ತದೆ. ಪ್ರತಿಯೊಬ್ಬರಿಗೂ ದಿನನಿತ್ಯದ ಜೀವನಕ್ಕಾಗಿ ನೆಗಳು ಬೇಕಾಗುತ್ತವೆ ಮತ್ತು ಅವುಗಳ ಬಳಕೆಯು ಅವರ ಜೀವನವನ್ನು ಸುಲಭ ಮತ್ತು ಉತ್ತಮಗೊಳಿಸುತ್ತದೆ ಎಂದು ಹೇಳಿದರು.

ಸಂದ ತಾಲೂಕು ಅಧ್ಯ ಕೆ.ಟಿ.ಜಯರಾಜ್​, ಗೌರವಾಧ್ಯ ರಜನೀಕಾಂತ್​, ಉಪಾಧ್ಯ ಯೋಗನರಸಿಂಹ, ಪರ್ಯಾವೇಕರಾದ ಬೋರೇಗೌಡ, ಪುಟ್ಟರಾಜು, ಶಿವಪ್ರಸಾದ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net