ಭೂತ ಬಂಗಲೆಯಾದ ಪುರಭವನ

23gkl1
Published on

ಭೂತ ಬಂಗಲೆಯಾದ ಪುರಭವನ

ಗುರುಮಠಕಲ್: ಕೋಟಿ ರೂ. ಖರ್ಚು ಮಾಡಿ ನವೀಕರಣಗೊಳಿಸಿರುವ ಪುರಭವನ ಈಗ ನಿರುಪಯುಕ್ತವಾಗಿ ಭೂತ ಬಂಗಲೆಯಾಗಿ ಪರಿಣಮಿಸಿದೆ.

ನಗರೋತ್ಥಾನ (ಮುನಿಸಿಪಾಲಿಟಿ) ೩ನೇ ಹಂತದ ಯೋಜನೆಯಡಿ ಶೇ.೪ ಪ್ರೋತ್ಸಾಹ ಹಣದ ಅನುದಾನದಲ್ಲಿ ಪುರಭವನ ಕಟ್ಟಡವನ್ನು ಮಂಗಲ ಕಾರ್ಯಾಲಯವಾಗಿ ಮಾರ್ಪಡಿಸುವುದು ಮತ್ತು ಉನ್ನತೀಕರಿಸುವ ಕಾಮಗಾರಿಗೆ ೨೦೧೮ರಲ್ಲಿ ಮಂಜೂರಾತಿ ದೊರೆತು, ೨೦೨೪ರಲ್ಲಿ ಕಾಮಗಾರಿ ಮುಗಿಸಿ ಉದ್ಘಾಟನೆಗೊಂಡಿದೆ.

ಆದರೆ ಮದುವಣಗಿತ್ತಿಯಂತೆ ಸಿಂಗಾರಗೊAಡ ಈ ಕಟ್ಟಡ ಮಾತ್ರ ಸಾರ್ವಜನಿಕರ ಉಪಯೋಗಕ್ಕೆ ಬಾರದೆ ಹಾಳು ಕೊಂಪೆಯಾಗಿದೆ. ನವೀಕರಣದ ಭಾಗವಾಗಿ ಒಳಾಂಗಣ ಹಾಸು, ಸುಣ್ಣ ಬಣ್ಣ ಸೇರಿ ವಿವಿಧ ಮೂಲಸೌಕರ್ಯ ಕಲ್ಪಿಸಲಾಗಿದೆ. ಬಡ ಮತ್ತು ಮಧ್ಯಮ ವರ್ಗದ ಜನರು ಮದುವೆ ಇತರೆ ಶುಭ ಸಮಾರಂಭಗಳಿಗೆ ಬಾಡಿಗೆ ಪಡೆಯಲು ಅನುಕೂಲವಾಗಲಿದೆ. ಜತೆಗೆ ಸರ್ಕಾರದ ಕಾರ್ಯಕ್ರಮ ಮಾಡುವುದಕ್ಕೂ ಉತ್ತಮ ವೇದಿಕೆಯಾಗಲಿದೆ. ಆದರೆ ಕಟ್ಟಡದ ಗೇಟ್‌ಗಳಿಗೆ ಬೀಗ ಹಾಕಲಾಗಿದ್ದು, ಹೊರಾಂಗಣದಲ್ಲಿ ನಿರುಪಯುಕ್ತ ಹುಲ್ಲು ಬೆಳೆದು ಆವರಣ ಸಂಪೂರ್ಣ ತಿಪ್ಪೆ ಗುಂಡಿಯಾAತಾಗಿ ಸಾರ್ವಜನಿಕರ ಉಪಯೋಗಕ್ಕೆ ಬಾರದಾಗಿದೆ.

ಕಳೆದ ಲೋಕಸಭೆ ಚುನಾವಣೆ ವೇಳೆ ನೀತಿ ಸಂಹಿತೆ ಜಾರಿಯಾಗುವ ಹೊತ್ತಿನಲ್ಲಿ ಕಾಮಗಾರಿ ಪೂರ್ಣಗೊಳಿಸಿ ಶಾಸಕ ಶರಣಗೌಡ ಕಂದಕೂರ ಅವರಿಂದ ಕಾಮಗಾರಿ ಉದ್ಘಾಟಿಸಲಾಗಿದೆ. ಆದರೆ ಪುರಸಭೆ ಅಧಿಕಾರಿಗಳ ನಿರ್ಲಕ್ಷÈಕ್ಕೆ ಸಾಕ್ಷಿ ಎಂಬAತೆ ಇದುವರೆಗೂ ಪುರಭವನದ ಬಾಗಿಲು ತೆರೆದಿಲ್ಲ ಎನ್ನುವುದು ವಿಪರ್ಯಾಸ.

ಶಾಸಕರು ಈ ಕಟ್ಟಡ ಉದ್ಘಾಟಿಸಿ ಸಾರ್ವಜನಿಕರಿಗೆ ಉಪಯೋಗವಾಗಲಿ ಎನ್ನುವ ಆಶಯ ವ್ಯಕ್ತಪಡಿಸಿದ್ದರು, ಆದರೆ ಅಂದು ಉದ್ಘಾಟನೆಯಾದ ಕಟ್ಟಡ ಈವರೆಗೆ ತೆರೆದಿಲ್ಲ ಎನ್ನುವ ಕುರಿತು ಶಾಸಕರ ಗಮನಕ್ಕೆ ಬಂದಿದೆಯೋ ಇಲ್ಲವೋ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net