ಭೂ ಮಂಜೂರಾತಿಗೆ ಒನ್‌ಟೈಂ ಸೆಟಲ್‌ಮೆಂಟ್ ಜಾರಿ ಮಾಡಿ

bumi matthu vasathi
Published on

ಮಡಿಕೇರಿ: ಉಳುವವನೇ ಭೂ ಒಡೆಯ ನೀತಿ ಜಾರಿ ಮಾಡಿದಂತೆ ಭೂ ರಹಿತರಿಗೆ ಭೂ ಮಂಜೂರಾತಿ ನೀಡಲು ಸರ್ಕಾರ ಒನ್‌ಟೈಂ ಸೆಟಲ್‌ಮೆಂಟ್ ಜಾರಿ ಮಾಡಬೇಕು ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಅಧ್ಯಕ್ಷ ಅಮೀನ್ ಮೋಹಿಸಿನ್ ಒತ್ತಾಯಿಸಿದರು.

ಕೊಡಗು ಜಿಲ್ಲೆಯಲ್ಲಿ ಸಾವಿರಾರು ಕುಟುಂಬಗಳು, ಆದಿವಾಸಿ ದಲಿತರು, ಬಡವರು ಲೈನ್ ಮನೆಯಲ್ಲಿ ಜೀತದಾರರಾಗಿ ಲೈನ್ ಮನೆಯಲ್ಲಿ ಸೂರಿಲ್ಲದೆ ವಾಸ ಮಾಡುತ್ತಿದ್ದಾರೆ. ಉಳ್ಳವರ ದೌರ್ಜನ್ಯ ದಬ್ಬಾಳಿಕೆಯಿಂದ ಫಾರಂ ನಂ.೫೦, ೫೩, ೫೭, ೯೪ ಸಿಗಳಲ್ಲಿ ಮತ್ತು ಅರಣ್ಯ ಕಾಯ್ದೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿದರೂ ಯಾವುದೇ ಪ್ರಯೂಜನವಾಗುತ್ತಿಲ್ಲ. ಬಡವರಿಗೆ ನೀಡಲು ಭೂಮಿ ಇಲ್ಲ ಎಂದು ಹೇಳುವ ಸರ್ಕಾರ ಬಲಾಡ್ಯರಿಗೆ ಗುತ್ತಿಗೆ ಆಧಾರದಲ್ಲಿ ೨೫ ಎಕರೆವರೆಗೆ ೩೦ ವರ್ಷಕ್ಕೆ ಎಕರೆಗೆ ೧೦೦೦ ನೀಡಲು ಉಳ್ಳವರಿಂದ ಅರ್ಜಿ ಸ್ವೀಕರಿಸಿದೆ. ಆದರೆ ಬಡವರ ಮೂಲಭೂತ ಬೇಡಿಕೆಗಳು ಈಡೇರುತ್ತಿಲ್ಲ ಎಂದರು.

ಡಿ.ದೇವರಾಜ್ ಅರಸು ಅವರ ೧೧೦ನೇ ಜನ್ಮಾದಿನಾಚರಣೆ ಕಾರ್ಯಕ್ರಮ ಆಚರಿಸುತ್ತಿರುವ ಸರ್ಕಾರ ಡಿ.ದೇವರಾಜ್ ಅರಸು ಅವರ ಉಳುವವನೇ ಭೂ ಒಡೆಯ ನೀತಿ ಜಾರಿ ಮಾಡಿದಂತೆ ಭೂ ರಹಿತರಿಗೆ ಭೂ ಮಂಜೂರಾತಿ ನೀಡಲು ಸರ್ಕಾರ ಒನ್‌ಟೈಂ ಸೆಟಲ್‌ಮೆಂಟ್ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿ ಗೌರವಾಧ್ಯಕ್ಷ ಡಿ.ಎಸ್.ನಿರ್ವಾಣಪ್ಪ, ಮುಖಂಡರಾದ ಕೆ.ಕೆ.ಮೊಣ್ಣಪ್ಪ, ಸಣ್ಣಪ್ಪ, ಸಮಿತಿ ಸದಸ್ಯರಾದ ಸುರೇಶ್, ಮೊಹಮ್ಮದ್ ಆಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net