ಭೀಮೆ ಆರ್ಭಟಕ್ಕೆ ನಲುಗಿದ ಗ್ರಾಮಗಳು

oppo_2
oppo_2
Published on

ಕಲಬುರಗಿ: ಜಿಲ್ಲೆಯ ನದಿ, ಹಳ್ಳ, ಕೊಳ್ಳಗಳು ಮೈದುಂಬಿ ಹರಿಯುತ್ತಿದ್ದು, ಮಳೆ ಣಿಸಿದರೂ ಸಹ ಭೀಮಾ ನದಿ ಆರ್ಭಟಕ್ಕೆ ತೀರದ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ಸೋಮವಾರವೂ ಮಹಾರಾಷ್ಟ್ರದ ಉಜನಿ, ಸೀನಾ ಜಲಾಶಯದಿಂದ 3.25 ಲಕ್ಷ ಕ್ಯೂಸೆಕ್​ ನೀರು ಬಿಟ್ಟಿದ್ದರಿಂದ ನದಿ ತೀರದ ಗ್ರಾಮಗಳಲ್ಲಿ ಆತಂಕದ ಸ್ಥಿತಿ ಮುಂದುವರಿದಿದ್ದು, ಮಂಗಳವಾರ ಸಿಎಂ ಸಿದ್ದರಾಮಯ್ಯ ವೈಮಾನಿಕ ಸಮೀೆ ನಡೆಸಿ, ಸಭೆ ನಡೆಸಲಿದ್ದು, ಪರಿಹಾರ ಘೋಷಣೆಯ ನಿರೀೆ ಮೂಡಿಸಿದೆ.

ಅಜಲಪುರದ ಸೊನ್ನ ಬ್ಯಾರೇಜ್​ನಿಂದ 3.25 ಲಕ್ಷ ಕ್ಯೂಸೆಕ್​ ನೀರು ಹೊರಬಿಟ್ಟಿದ್ದು, ಬೆಣ್ಣೆ ತೋರೆ ಜಲಾಶಯದಿಂದ 300 ಕ್ಯೂಸೆಕ್​ ನೀರು ಹರಿಬಿಟ್ಟಿದ್ದು, ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ಪ್ರವಾಹ ಭೀತಿ ಮುಂದುವರಿದಿದೆ. ಕಲಬುರಗಿ ತಾಲೂಕಿನ ಸರಡಗಿ ಬಿ, ಸೋಮನಾಥಹಳ್ಳಿ, ಹಸನಾಪುರ ಸೇರಿ ಎಲ್ಲೆಡೆ ಪ್ರವಾಹ ಸ್ಥಿತಿ ಯಥಾಸ್ಥಿತಿ ಮುಂದುವರಿದಿದೆ. ಜಿಲ್ಲೆಯಲ್ಲಿ 88 ಪ್ರವಾಹ ಪೀಡಿತ ಗ್ರಾಮಗಳನ್ನು ಗುರುತಿಸಿದ್ದು, 37 ಕಾಳಜಿ ಕೇಂದ್ರಗಳನ್ನು ಆರಂಭಿಸಲಾಗಿದೆ.

ಅಜಲಪುರದಲ್ಲಿ 17, ಜೇವರ್ಗಿಯಲ್ಲಿ 30, ಕಲಬುರಗಿಯಲ್ಲಿ 7, ಚಿತ್ತಾಪುರ&12, ಚಿಂಚೋಳಿ &3, ಸೇಡಂ&5, ಕಾಳಗಿ&8, ಶಹಾಬಾದ್​, ಆಳಂದ ತಾಲೂಕಿನಲ್ಲಿ ತಲಾ ಮೂರು ಗ್ರಾಮಗಳು ಪ್ರವಾಹದ ಹೊಡೆತಕ್ಕೆ ಸಿಲುಕಿವೆ. ಪ್ರವಾಹದ ಸಂಕಷ್ಟಕ್ಕೆ ಸಿಲುಕಿದ 5785 ಸಾರ್ವಜನಿಕರನ್ನು ಸುರತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಜಿಲ್ಲೆಯಲ್ಲಿ ಒಂದು ತಿಂಗಳಲ್ಲಿ 741 ಮನೆಗಳು ಭಾಗಶ@ ಹಾನಿಗೀಡಾಗಿದ್ದು, 28 ಪ್ರಾಣಿಗಳು ಮೃತಪಟ್ಟಿವೆ. 2832 ದಿನಬಳಕೆಯ ಗೃಹೋಪಯೋಗಿ ಸಾಮಗ್ರಿ ಹಾನಿಯಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net