ಭೀಮಾತೀರದಲ್ಲಿ ಅಕ್ರಮ ಮರಳು ದಂಧೆ, ಎಸಿ ರಾಹುಲ್ ಸಿಂಧೆ ನೇತೃತ್ವ ದಾಳಿ, 629 ಕ್ಯೂಬಿಕ್ ಮೀಟರ್ ಮರಳು ವಶ

IMG-20210518-WA0078
Published on

ವಿಜಯಪುರ: ಭೀಮಾತೀರದಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿದ್ದು ಇಂಡಿ ಉಪ ವಿಭಾಗಾಧಿಕಾರಿ ರಾಹುಲ್ ಸಿಂಧೆ ದಾಳಿ ನಡೆಸಿ 629 ಕ್ಯೂಬಿಕ್ ಮೀಟರ್ ಮರಳು ವಶಕ್ಕೆ ಪಡೆದಿದ್ದಾರೆ.

ಸೋಮವಾರವೇ ಈ ದಾಳಿ ನಡೆದಿದ್ದು ಪ್ರಕರಣ ದಾಖಲಿಸಿ ಇದೀಗ ಅಧಿಕೃತ ಮಾಹಿತಿ ಬಿಡುಗಡೆಗೊಳಿಸಲಾಗಿದೆ. ಒಟ್ಟು ಎರಡು ಕಡೆ ಈ ದಾಳಿ ನಡೆಸಲಾಗಿದ್ದು, ಕ್ರಮವಾಗಿ ದೇವಣಗಾಂವ ಗ್ರಾಮದ ಎರಡು ಸ್ಥಳ ಗಳಲ್ಲಿ 294 ಕ್ಯೂಬಿಕ್ ಮೀಟರ್ ಹಾಗೂ ಶಂಬೆವಾಡ ಗ್ರಾಮದ ಎರಡು ಸ್ಥಳಗಳಲ್ಲಿ 335 ಕ್ಯೂಬಿಕ್ ಮೀಟರ್‌ಗಳಂತೆ ಒಟ್ಟು 629 ಕ್ಯೂಬಿಕ್ ಮೀಟರ್ ಮರಳು ವಶಕ್ಕೆ ಪಡೆಯಲಾಗಿದೆ. ವಶಪಡಿಸಿಕೊಂಡ ಮರಳಿನ ಮೌಲ್ಯ ರೂ.5,31,505 ಗಳಷ್ಟು ಎಂದು ಅಂದಾಜಿಸಲಾಗಿದೆ. ಆಲಮೇಲ ಪೊಲೀಸ್ ಠಾಣೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.

ಸಿಂದಗಿ ತಹಸೀಲ್ದಾರ್, ಪೊಲೀಸ್ ಇಲಾಖೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದರೆಂದು ಉಪವಿಭಾಗಾಧಿಕಾರಿ ರಾಹುಲ್ ಸಿಂಧೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net