

ವಿಜಯಪುರ: ಭೀಮಾತೀರದ ರೌಡಿ ಶೀಟರ್ ಮಹಾದೇವ ಸಾಹುಕಾರmore ಭೈರಗೊಂಡ ಮೇಲಿನ ಗುಂಡಿನ ದಾಳಿಗೆ ಸಂಬಂಧಿಸಿದಂತೆ ತನಿಖೆಗಾಗಿ ಬೆಳಗಾವಿ ಎಫ್‌ಎಸ್‌ಎಲ್ ತಂಡ ಸ್ಥಳಕ್ಕೆ ಭೇಟಿ ನೀಡಿದೆ.
ಘಟನಾ ಸ್ಥಳದಲ್ಲಿ 6 ಬೈಕ್‌ಗಳು ಪತ್ತೆಯಾಗಿವೆ. ಎಲ್ಲ ಬೈಕ್‌ಗಳ ನಂಬರ್ ಪ್ಲೇಟ್ ನಕಲಿಯಾಗಿರುವುದು ಕಂಡು ಬಂದಿದೆ. ಘಟನೆ ಬಳಿಕ ಹಂತಕರು ಬೈಕ್‌ಗಳನ್ನು ಬಿಟ್ಟು ಪರಾರಿಯಾಗಿದ್ದರು. ಸ್ಥಳದಲ್ಲಿ ಪೆಟ್ರೋಲ್ ಬಾಂಬ್ ಸಹ ಸಿಕ್ಕಿದ್ದವು. ತನಿಖೆ ಮುಂದುವರಿದಿದ್ದು ಉತ್ತರ ವಲಯದ ಐಜಿಪಿ ಸಹ ಸ್ಥಳಕ್ಕೆ ಆಗಮಿಸುತ್ತಿದ್ದಾರೆ.
ಸ್ಥಳದಲ್ಲಿ 6 ಬೈಕ್ ಪತ್ತೆ
ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಸಾಹುಕಾರ ಕಾರ್ ಚಾಲಕ ಲಕ್ಷ್ಮಣ ದಿಂಡೋರೆ (27) ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾನೆ. ಲಕ್ಷ್ಮಣಗೆ ಒಂದು ಗುಂಡು ತಗುಲಿತ್ತಲ್ಲದೇ ಕಾಲು ತುಂಡಾಗಿತ್ತು. ಹೀಗಾಗಿ ಅತಿಯಾದ ರಕ್ತಸ್ರಾವವಾಗಿ ಅಸುನೀಗಿದ್ದಾಗಿ ಪೊಲೀಸರು ದೃಢಪಡಿಸಿದ್ದಾರೆ. ಮಹದೇವ ಬೈರಗೊಂಡ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದ್ದು, ಸದ್ಯಕ್ಕೆ ಯಾವುದೇ ಪ್ರಾಣಾಪಾಯ ಇಲ್ಲವೆಂದು ತಿಳಿದು ಬಂದಿದೆ.
ಚಾಲಕ ಸಾವು
ಘಟನಾ ಸ್ಥಳವಾದ ಅರಕೇರಿ ತಾಂಡಾ ಬಳಿಕ ಕನ್ನಾಳ ಕ್ರಾಸ್‌ಗೆ ಮಂಗಳವಾರ ಬೆಳಗ್ಗೆಯೇ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಸೋಮವಾರ ಮಧ್ಯಾಹ್ನ 3.30ಕ್ಕೆ ಮಹಾದೇವ ಸಾಹುಕಾರ ಹಾಗೂ ಆತನ ಬೆಂಬಲಿಗರ ಮೇಲೆ ಟಿಪ್ಪರ್ ಹಾಯಿಸಿ ಕೊಲೆ ಯತ್ನ ನಡೆದಿತ್ತು. ತನ್ನಿಮಿತ್ತ ಇಂದು ಮೂವರು ಸದಸ್ಯರಿರುವ ಎಫ್‌ಎಸ್‌ಎಲ್ ತಂಡ ಸ್ಥಳಕ್ಕೆ ಭೇಟಿ ನೀಡಿ ಟಿಪ್ಪರ್ ಹಾಗೂ ಜೀವಂತ ಗುಂಡುಗಳನ್ನು ವಶಕ್ಕೆ ಪಡೆದಿದೆ. ಎಸ್‌ಪಿ ಅನುಪಮ್ ಅಗರವಾಲ್ ಸಾಥ್ ನೀಡಿದ್ದಾರೆ.