ಭೀಮಾತೀರದ ಗುಂಡಿನ ದಾಳಿ; ಮತ್ತಿಬ್ಬರ ಬಂಧನ

IMG-20201112-WA0053
Published on

ವಿಜಯಪುರ: ಭೀಮಾತೀರದ ರೌಡಿ ಶೀಟರ್ ಮಹಾದೇವ ಸಾಹುಕಾರ ಭೈರಗೊಂಡ ಮೇಲಿನ ಗುಂಡಿನ ದಾಳಿ ಹಾಗೂ ಇಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಪೊಲೀಸರು ಮತ್ತೊಬ್ಬರನ್ನು ಬಂಧಿಸಿದ್ದಾರೆ.

ಸ್ಥಳೀಯ ಬಂಬಳ ಅಗಸಿ ನಿವಾಸಿ ಮಹೇಶ ಅರ್ಜುನ ಸಾಳುಂಕೆ (26)  ಹಾಗೂ ವಜ್ರಹನುಮಾನ್ ಗೇಟ್ ಬಳಿಯ‌ ನಿವಾಸಿ ಬಾಬು ನಿಂಗನಗೌಡ ಬಿರಾದಾರ (23) ಬಂಧಿತ ಆರೋಪಿಗಳು.

ಈ ಇಬ್ಬರಿಂದ ಕೃತ್ಯಕ್ಕೆ ಬಳಸಿದ ಒಂದು ಆಟೋರಿಕ್ಷಾ, ಮೊಬೈಲ್ ಹಾಗೂ ತಲವಾರ ವಶಕ್ಕೆ ಪಡೆಯಲಾಗಿದೆ.

ಈಗಾಗಲೇ 19 ಜನರನ್ನು ಬಂಧಿಸಲಾಗಿದ್ದು ಸದರಿ ಆರೋಪಿಗಳು ಸೇರಿ ಈವರೆಗೆ ಒಟ್ಟು 21 ಆರೋಪಿಗಳನ್ನು ಬಂಧಿಸಿದಂತಾಗಿದೆ ಎಂದು ಎಸ್ ಪಿ ಅನುಪಮ್ ಅಗರವಾಲ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net