ಭೀಮಾತೀರದ ಗುಂಡಿನ ದಾಳಿ ಪ್ರಕರಣ; ಮತ್ತೆ ಮೂವರ ಬಂಧನ

IMG-20201112-WA0053
Published on

ವಿಜಯಪುರ: ಭೀಮಾತೀರದ ರೌಡಿ ಶೀಟರ್ ಮಹಾದೇವ ಸಾಹುಕಾರ ಮೇಲಿನ ಗುಂಡಿನ ದಾಳಿ ಹಾಗೂ ಇಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಗುರುವಾರ ಮತ್ತೆ ಮೂವರನ್ನು ಬಂಧಿಸಿದ್ದಾರೆ.

ಇಂಡಿ ತಾಲೂಕಿನ ದೇಗಿನಾಳ ಗ್ರಾಮದ ಸಂಘರ್ಷ ಸಂಜಯ ಸೂರ್ಯವಂಶಿ (23), ಉಮರಾಣಿ ಗ್ರಾಮದ ಸಂಗಪ್ಪ ಗುರುಬಸು ಯಮದೆ (35) ಹಾಗೂ ಸ್ಥಳೀಯ ಜಲನಗರ ನಿವಾಸಿ ಚೇತನ ಚನ್ನಪ್ಪ ಶಿರಶ್ಯಾಡ (30) ಬಂಧಿತ ಆರೋಪಿಗಳು. ಇವರಿಂದ ಒಂದು ಮೋಟರ್ ಸೈಕಲ್, ಎರಡು ಮೊಬೈಲ್ ಹಾಗೂ ಒಂದು ಏರ್ ಗನ್ ವಶಪಡಿಸಿಕೊಳ್ಳಲಾಗಿದೆ ಎಂದು ಎಸ್‌ಪಿ ಅನುಪಮ ಅಗರವಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net