ಭೀಮಾತೀರಕ್ಕೂ ವಿಸ್ತರಿಸಿದ ಕೇಸರಿ ಶಾಲಿನ ಹೋರಾಟ !

IMG-20220207-WA0018
Published on

ವಿಜಯಪುರ: ರಾಜ್ಯಾದ್ಯಂತ ಸದ್ದು ಮಾಡುತ್ತಿರುವ ಹಿಜಾಬ್- ಕೇಸರಿ ಶಾಲಿನ ಹೋರಾಟ ಇದೀಗ ಭೀಮಾತೀರಕ್ಕೂ ವಿಸ್ತರಿಸಿದೆ.

ಇಂಡಿ ಪಟ್ಟಣದ ಶ್ರೀ ಶಾಂತೇಶ್ವರ ಪದವಿ ಪೂರ್ವ ಕಾಲೇಜ್ ಹಾಗೂ ಜಿಆರ್ ಜಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ಸೋಮವಾರ ಕೇಸರಿ ಶಾಲು ಧರಿಸಿ ಕಾಲೇಜಿಗೆ ಬರುವ ಮೂಲಕ ಗಮನ ಸೆಳೆದರು.

ಇದರಿಂದ ಎಚ್ಚೆತ್ತುಕೊಂಡ ಆಡಳಿತ ಮಂಡಳಿ ಯಾವುದೇ ವಿವಾದಕ್ಕೆ ಕಾರಣವಾಗಬಾರದು ಎಂದು ಶಾಲೆಗೆ ರಜೆ ಘೋಷಿಸಿತು.

ನಾಳೆಯಿಂದ ಸರ್ಕಾರ ಜಾರಿ ಮಾಡಿರೋ ನಿಯಮದ

ಪ್ರಕಾರ ಸಮವಸ್ತ್ರ ಹಾಕಿಕೊಂಡು‌ ಕಾಲೇಜಿಗೆ ಬರುವಂತೆ ಸೂಚನೆ ನೀಡಿ ರಜೆ ಘೋಷಿಸಿದ್ದರಿಂದ ವಿದ್ಯಾರ್ಥಿಗಳು ವಾಪಸ್ ಆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net