ಭೀಮಾ ನೀರಿಗಾಗಿ ಟ್ರಿಬ್ಯುನಲ್‌ಗೆ ಹೋಗಲು ಮನವಿ

M Y PATIL
Published on

ಕಲಬುರಗಿ: ಜಿಲ್ಲೆಯಲ್ಲಿ ಬರ ನಿರ್ಮಾಣವಾಗಿದ್ದು, ಅಂತರ್ಜಲ ಕುಸಿತವಾಗಿದೆ. ಆದರೆ ಮಹಾರಾಷ್ಟçದಿಂದ ಭೀಮಾ ನದಿಗೆ ಸೂಕ್ತ ಪ್ರಮಾಣದಲ್ಲಿ ನೀರು ಬಿಡುಗಡೆ ಆಗುತ್ತಿಲ್ಲ. ಇದರಿಂದ ಭೀಮಾ ನದಿ ತಟದಲ್ಲಿ ನೀರಿನ ಸಮಸ್ಯೆ ಸೃಷ್ಟಿಯಾಗಿದ್ದು, ಇದರ ಮೂಲ ಸಮಸ್ಯೆಯಾದ ಮಹಾರಾಷ್ಟದಿಂದ ನೀರು ಬಿಡುಗಡೆಗೆ ಆಗ್ರಹಿಸಿ ಟ್ರಿಬ್ಯುನಲ್‌ಗೆ ಹೋಗುವಂತೆ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಲಾಗುವುದು ಎಂದು ಶಾಸಕ ಎಂ.ವೈ.ಪಾಟೀಲ್ ತಿಳಿಸಿದರು.

ನೀರಿನ ಅಭಾವದಿಂದ ಬೆಳೆ ನಾಶವಾಗಿದೆ. ಕುಡಿಯುವ ನೀರಿನ ತಾಪತ್ರೆಯ ಉಂಟಾಗಿದೆ. ಜಿಲ್ಲೆಯಲ್ಲಿ ಅಂತರ್ಜಲ ಕೊರತೆ ಆಗಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಮಹಾರಾಷ್ಟçದ ಉಜನಿ ಡ್ಯಾಂನಿAದ ನೀರು ಬಿಡುತ್ತಿಲ್ಲ. ಅಲ್ಲಿಯ ನೀರನ್ನು ಅಕ್ರಮವಾಗಿ ಸೀನಾ ನದಿಗೆ ತಿರುವಿ ಬಿಡುತ್ತಿದ್ದಾರೆ ಎಂಬ ವರದಿ ಇದ್ದು, ಇದು ಬಚಾವತ್ ಆಯೋಗದ ತೀರ್ಪಿನ ವಿರುದ್ಧ ನಡೆಯಾಗಿದ್ದು, ರಾಜ್ಯದ ಪಾಲಿನ ನೀರು ಬಿಡುಗಡೆ ಆಗ್ರಹಿಸಿ ಟ್ರಿಬುನಲ್‌ಗೆ ಹೋಗುವಂತೆ ಜಿಲ್ಲೆಯ ಶಾಸಕರೊಂದಿಗೆ ನಿಯೋಗ ಹೋಗಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆಲಮಟ್ಟಿಯಿಂದ ನೀರು ಬಿಡಲಿ: ಎರಡು ತಿಂಗಳ ಹಿಂದೆ ಕೃಷ್ಣಾ ಮೇಲ್ದಂಡೆ ಯೋಜನೆಯ ನೀರು ಬಳಕೆದಾರರ ಸಭೆಯನ್ನು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರ ಅಧ್ಯಕ್ಷತೆಯಲ್ಲಿ ಕರೆದಿದ್ದರು. ಆಗ ಆಲಮಟ್ಟಿ ಜಲಾಶಯದಿಂದ ಇಂಡಿ ಕ್ಯಾನಲ್ ಮೂಲಕ ಭೀಮಾ ನದಿಗೆ ನೀರು ಹರಿಸುವಂತೆ ಮನವಿ ಸಲ್ಲಿಸಲಾಗಿತ್ತು. ಆಗ ಭರವಸೆ ನೀಡಿದ್ದರು. ಆದರೆ ಇದುವರೆಗೂ ಅದರ ಪ್ರಕ್ರಿಯೇ ಆರಂಭಿಸಿಲ್ಲ ಎಂದು ಶಾಸಕ ಎಂ.ವೈ.ಪಾಟೀಲ್ ಅಳಲು ತೋಡಿಕೊಂಡರು.

ಶೀಘ್ರದಲ್ಲಿ ಇಂಡಿ ಕ್ಯಾನಲ್ ಮೂಲಕ ಭೀಮಾ ನದಿಗೆ ನೀರು ಹರಿಸಬೇಕು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ನೀರಾವರಿ ಸಚಿವರಿಗೂ ಮನವಿ ಸಲ್ಲಿಸಲಾಗುವುದು. ಇದರಿಂದ ಈ ಭಾಗದ ರೈತರ ಬೆಳೆಗಳಿಗೆ ವಿಶೇಷವಾಗಿ ಕುಡಿಯುವ ನೀರಿಗೆ ಅನುಕೂಲವಾಗಲಿದೆ. ಇಲ್ಲದಿದ್ದರೆ ಜನ ಜಾನುವಾರು ಜೀವನ ಕಷ್ಟಕ್ಕೆ ಸಿಲುಕಲಿದೆ ಎಂದು ಮನವಿ ಮಾಡಿದರು.
ಪ್ರಮುಖರಾದ ಸಿದ್ಧಾರ್ಥ ಬಸರಿಗಿಡ, ಸರ್ವರ್ ಪಟೇಲ್, ಸಿದ್ದು ಸಿರಸಗಿ, ಪ್ರಕಾಶ ಜಮಾದಾರ, ಖಬೀರ್ ಪಟೇಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net