

ಆಳಂದ: ಭೀಮಪುರದಲ್ಲಿ ಬುಧವಾರ ಸಾಲಬಾಧೆ ತಾಳಲಾರದೆ ರೈತನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕಾಶೀನಾಥ ಶಹಾಪುರೆ(45) ಸಾವಿಗೆ ಶರಣಾದ ರೈತ. 5 ಎಕರೆ ಜಮೀನಿದ್ದು, ಡಿಸಿಸಿ ಬ್ಯಾಂಕ್‌ನಲ್ಲಿ 5 ಲಕ್ಷ ರೂ., ಸ್ಥಳೀಯ ಬ್ಯಾಂಕ್‌ನಲ್ಲಿ 2.8 ಲಕ್ಷ, ಪಿಕೆಪಿಎಸ್‌ಎಸ್‌ನಲ್ಲಿ 20 ಸಾವಿರ ರೂ. ಮತ್ತು ಖಾಸಗಿಯಾಗಿ 2 ಲಕ್ಷ ರೂ. ಸಾಲ ಮಾಡಿದ್ದ ಎನ್ನಲಾಗಿದೆ. ಸರಿಯಾದ ಮಳೆಯಾಗದೆ ಸಾಲ ತೀರಿಸುವ ಬಗ್ಗೆ ಚಿಂತಿಸುತ್ತಿದ್ದ. ಬುಧವಾರ ಹೊಲದಲ್ಲಿನ ಬೇವಿನ ಮರಕ್ಕೆ ನೇಣು ಬಿಗಿದುಕೊಂಡಿದ್ದಾನೆ.
ಪಿಎಸ್‌ಐ ದಿನೇಶ ಎಂ.ಕೆ. ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಮಾದನಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.