ಭೀಮನಗರದ ನಿವಾಸಿ ಕಾಣೆ

Pruthvi
Published on

ಚಾಮರಾಜನಗರ: ಕೊಳ್ಳೇಗಾಲ ಪಟ್ಟಣದ ಭೀಮನಗರ ನಿವಾಸಿ ಪೃಥ್ವಿ ಎಂಬುವವರು ಕಿರಗಸೂರು ಗ್ರಾಮದಿಂದ ಕಾಣೆಯಾಗಿದ್ದು ಇವರ ಪತ್ತೆಗೆ ಸಹಕರಿಸುವಂತೆ ಕೋರಲಾಗಿದೆ.

37 ವರ್ಷದ ಪೃಥ್ವಿ 5.8 ಅಡಿ ಎತ್ತರ, ಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು, ಕೋಲುಮುಖ, ಕಪ್ಪು ತಲೆಕೂದಲು ಹೊಂದಿದ್ದು ಗಡ್ಡಮೀಸೆ ಬಿಟ್ಟಿರುತ್ತಾರೆ. ಕನ್ನಡ, ತಮಿಳು, ತೆಲುಗು, ಇಂಗ್ಲೀಷ್ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ನೀಲಿ ಬಣ್ಣದ ಚೌಕುಳಿ ಮನೆ ಇರುವ ಶರ್ಟ್ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದರು.

ಇವರ ಸುಳಿವು ದೊರೆತಲ್ಲಿ ಕುದೇರು ಪೊಲೀಸ್ ಠಾಣೆ ದೂ.ಸಂ 08226-234439, ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮೊ.ಸಂ 9480804647 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net