ಭೀಮ ಯಾತ್ರೆಗೆ ಚಾಲನೆ

bike rally
Published on

ಹುಬ್ಬಳ್ಳಿ: ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ನಗರದ ಅಂಚೆ ಕಚೇರಿ ಬಳಿಯ ಅಂಬೇಡ್ಕರ್ ಪುತ್ಥಳಿಗೆ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ, ಶಾಸಕ ಪ್ರಸಾದ ಅಬ್ಬಯ್ಯ ಮಾಲಾರ್ಪಣೆ ಮಾಡಿದರು.

ಇದೇ ಸಂದರ್ಭದಲ್ಲಿ ವಿವಿಧ ದಲಿತ ಪರ ಸಂಘಟನೆಗಳು, ಅಂಬೇಡ್ಕರ್ ಅನುಯಾಯಿಗಳ ಹಮ್ಮಿಕೊಂಡಿದ್ದ ಭೀಮ ಯಾತ್ರೆ ಬೈಕ್ ರ್ಯಾಲಿಗೆ ಚಾಲನೆ ನೀಡಿದರು.

ಮಾಜಿ ಸಂಸದ ಐ.ಜಿ.ಸನದಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸದಾನಂದ ಡಂಗನವರ, ಸತೀಶ ಮೆಹರವಾಡೆ, ನಾಗರಾಜ ಗೌರಿ, ಅಲ್ತಾಫ್ ಹಳ್ಳೂರ, ಗುರುನಾಥ ಉಳ್ಳಿಕಾಶಿ, ಪ್ರಭು ಪ್ರಭಾಕರ, ದೊರೆರಾಜ ಮಣಿಕುಂಟ್ಲ, ಶ್ರೀನಿವಾಸ ಬೆಳದಡಿ, ನವೀದ್ ಮುಲ್ಲಾ, ಮಹೇಶ ದಾಬಡೆ, ಅಕ್ಕಮ್ಮ ಕಂಬಳಿ, ಪ್ರಶಾಂತ ಮಣಮುಟ್ಟಗಿ, ಶೋಭಾ ಕಮತರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net