ಭಿನ್ನಾಭಿಪ್ರಾಯ ಆರೋಗ್ಯಕರ ಸಮಾಜಕ್ಕೆ ನಷ್ಟ

Swamiji
Published on

ಚಿತ್ರದುರ್ಗ: ವಿವಾಹದ ಮೊದಲು, ನಂತರ ಪರಸ್ಪರರಲ್ಲಿ ಹೊಂದಾಣಿಕೆ ಕೊರತೆಯಿಂದ ಬಹುಬೇಗ ಭಿನ್ನಾಭಿಪ್ರಾಯ ಮೂಡುತ್ತಿರುವುದು ಆರೋಗ್ಯಕರ ಸಮಾಜಕ್ಕೆ ನಷ್ಟ ಎಂದು ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.

ಬಸವೇಶ್ವರ ವಧು-ವರರ ಮಾಹಿತಿ ಕೇಂದ್ರದಿಂದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ಸರ್ವ ಧರ್ಮ ವಧು-ವರರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಸಂಬಂಧ ಒಪ್ಪಿದ ನಂತರ ಪ್ರಬಲ ಕಾರಣವಿಲ್ಲದೆ, ಊಟದಲ್ಲಿ ವ್ಯತ್ಯಾಸವಾಗಿ ಮದುವೆಗಳಿಂದು ಮುರಿದು ಬೀಳುತ್ತಿವೆ. ಹೀಗಾಗಿ ಮಾನವನ ಮಾನಸಿಕ ಸ್ಥಿತಿ, ಮೌಲ್ಯಗಳು ಕುಸಿಯುತ್ತಿವೆ. ಹಣ, ಅಧಿಕಾರ ಶಾಶ್ವತವಲ್ಲ, ಮುಖ್ಯವೂ ಅಲ್ಲ. ಕೂಡಿ ಬಾಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪತ್ರಕರ್ತ ದೊಣ್ಣೆಹಳ್ಳಿ ಗುರುಮೂರ್ತಿ ಮಾತನಾಡಿ, ಮದುವೆಗಳು ಕೂಡ ವ್ಯಾಪಾರೀಕರಣವಾಗಿದೆ. ಇಲ್ಲಿಯೂ ಮಧ್ಯವರ್ತಿಗಳ ಹಾವಳಿ ಹೆಚ್ಚುತ್ತಿದೆ. ಬೆರಳೆಣಿಕೆಯಷ್ಟು ಮಂದಿ ಮಾತ್ರ ಸಾಮಾಜಿಕ ಕಳಕಳಿಯೊಂದಿಗೆ ವಧು-ವರರ ಒಗ್ಗೂಡಿಸಲು ಸೇವೆ ರೂಪದಲ್ಲಿ ಮಾಡುತ್ತಿದ್ದಾರೆ ಎಂದರು.

ಬಾಪೂಜಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕೆ.ಎಂ.ವೀರೇಶ್, ಕೇಂದ್ರದ ವ್ಯವಸ್ಥಾಪಕ ಜೆ.ಎಂ.ಜಂಬಯ್ಯ, ಬಿ.ಎಲ್.ಶಿವಾನಂದ ಸ್ವಾಮಿ, ಬಸವನಗೌಡ, ಗೋಪಿನಾಥ, ಬಿ.ಲೋಕೇಶ್ ಗದಿಗಯ್ಯ ಕಿತ್ತೂರುಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net