ಭಾಷೆ ಉಳಿದರೆ ಸಂಸ್ಕೃತಿ ಉಳಿವು

nrp ratha
ಎನ್.ಆರ್.ಪುರ ತಾಲೂಕಿನ ಉಂಬಳೆಬೈಲಿನಲ್ಲಿ ಕನ್ನಡ ರಥಯಾತ್ರೆಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿದರು. ತನುಜಾ ಟಿ. ಸವದತ್ತಿ, ಪ್ರಶಾಂತ್ ಎಲ್. ಶೆಟ್ಟಿ, ಪೂರ್ಣೇಶ್, ಪ್ರೇಮಾ, ಭಾಗ್ಯಾ, ಜುಬೇದಾ, ಪಿ.ಸಿ.ಮ್ಯಾಥ್ಯು, ಎಚ್.ಎಂ.ಶಿವಣ್ಣ, ಬಿಳಾಲುಮನೆ ಉಪೇಂದ್ರ ಇತರರಿದ್ದರು.
Published on

ಎನ್.ಆರ್.ಪುರ: ಭಾಷೆ ಅವನತಿಯಾದರೆ ನಮ್ಮ ಸಂಸ್ಕೃತಿಯೂ ನಾಶವಾಗುತ್ತದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದರು.

ಭಾನುವಾರ ಪಟ್ಟಣದ ಅಂಬೇಡ್ಕರ್ ಸರ್ಕಲ್‌ನಲ್ಲಿ ಕನ್ನಡ ಜ್ಯೋತಿ ರಥ ಸ್ವಾಗತಿಸಿ ಮಾತನಾಡಿ, ಸರ್ಕಾರ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಒಟ್ಟಾಗಿ ರಥಯಾತ್ರೆ ಹಮ್ಮಿಕೊಂಡಿವೆ. ಸರ್ಕಾರ ಕನ್ನಡ ಭಾಷೆಗೆ ಅಗ್ರ ಸ್ಥಾನ ನೀಡಿದೆ. ಕನ್ನಡ ಮನಸ್ಸುಗಳು ಒಟ್ಟಾಗಿ ಕನ್ನಡದ ಕಾರ್ಯಕ್ರಮ, ಸಾಹಿತ್ಯ ಸಮ್ಮೇಳನ ನಡೆಸಬೇಕು ಎಂದರು.

ತಾಲೂಕು ಕಸಾಪ ಅಧ್ಯಕ್ಷ ಪೂರ್ಣೇಶ್ ಮಾತನಾಡಿ, ಜಿಲ್ಲಾ ಸಾಹಿತ್ಯ ಸಮ್ಮೇಳನ, ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲೂ ರಥಯಾತ್ರೆ ಕೈಗೊಂಡರೆ ಜನರಲ್ಲಿ ಕನ್ನಡದ ಬಗ್ಗೆ ಇನ್ನಷ್ಟ್ಟು ಜಾಗೃತಿ ಮೂಡಲಿದೆ ಎಂದು ಹೇಳಿದರು.

ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಎಲ್. ಶೆಟ್ಟಿ ಮಾತನಾಡಿ, ಕನ್ನಡಕ್ಕೆ ಅವಮಾನ ಮಾಡುವುವರನ್ನು ಕಠಿಣ ಶಿಕ್ಷೆಗೆ ಒಳಪಡಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸರ್ಕಾರ ಅರ್ಹರನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ ಎಂದರು.

ತರೀಕೆರೆಯಿಂದ ಬಂದ ರಥವನ್ನು ಎನ್.ಆರ್.ಪುರ ತಾಲೂಕಿನ ಉಂಬಳೆಬೈಲಿನಲ್ಲಿ ತಹಸೀಲ್ದಾರ್, ಇತರ ಅಧಿಕಾರಿಗಳು ಸ್ವಾಗತಿಸಿದರು. ನಂತರ ಕುದುರೆಗುಂಡಿ ಸಮೀಪದಲ್ಲಿ ರಥವನ್ನು ಬೀಳ್ಕೊಡಲಾಯಿತು.

ತಹಸೀಲ್ದಾರ್ ತನುಜಾ ಟಿ. ಸವದತ್ತಿ, ಜಿಲ್ಲಾ ಕಸಾಪ ಸಂಚಾಲಕ ಇಮ್ರಾನ್ ಬೇಗ್, ಪಪಂ ಅಧ್ಯಕ್ಷೆ ಸುರೈಯಾಭಾನು, ಉಪಾಧ್ಯಕ್ಷೆ ಉಮಾ, ಸದಸ್ಯೆ ಜುಬೇದಾ, ಭಾಗ್ಯಾ ನಂಜುಂಡಸ್ವಾಮಿ, ಪ್ರೇಮಾ ಶ್ರೀನಿವಾಸ್, ಎಚ್.ಎಂ.ಶಿವಣ್ಣ, ವಾಲ್ಮೀಕಿ ಶ್ರೀನಿವಾಸ್, ಬಿಳಾಲುಮನೆ ಉಪೇಂದ್ರ, ಪಿ.ಸಿ.ಮ್ಯಾಥ್ಯೂ, ಅಂಜುಂ, ಎಚ್.ಮಂಜುನಾಥ್, ವಿಜಯಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net