ಭಾಷಾಭಿಮಾನ ಮೂಡಿಸುವ ಆಟೋಚಾಲಕರಿಗೆ ಗೌರವಿಸಬೇಕು

16 ckm 9
ಚಿಕ್ಕಮಗಳೂರು ಅಂಬೇಡ್ಕರ್ ರಸ್ತೆ ಸಮೀಪದ ಕನ್ನಡಸೇನೆ ಆಟೋ ನಿಲ್ದಾಣದಲ್ಲಿ ೬೯ನೇ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣವನ್ನು ನಗರಸಭೆ ಆಯುಕ್ತ ಬಿ.ಸಿ.ಬಸವರಾಜ್ ನೆರವೇರಿಸಿದರು. ಪಿ.ಸಿ.ರಾಜೇಗೌಡ, ಶಾಹೀದ್, ಸತೀಶ್, ಹುಣಸೆಮಕ್ಕಿ ಲಕ್ಷö್ಮಣ್, ಜಯಪ್ರಕಾಶ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ದೈನಂದಿನ ಕಾಯಕದಲ್ಲಿ ಸ್ಥಳೀಯರು ಹಾಗೂ ಪ್ರವಾಸಿಗರೊಂದಿಗೆ ಕನ್ನಡದಲ್ಲೇ ವ್ಯವಹರಿಸಿ ಭಾಷಾಭಿಮಾನ ಮೂಡಿಸುತ್ತಿರುವ ಆಟೋ ಚಾಲಕರಿಗೆ ಸದಾ ಗೌರವದಿಂದ ಕಾಣುವುದನ್ನು ರೂಢಿಸಿಕೊಳ್ಳಬೇಕು ಎಂದು ನಗರಸಭೆ ಆಯುಕ್ತ ಬಿ.ಸಿ.ಬಸವರಾಜ್ ತಿಳಿಸಿದರು.

ನಗರದ ಅಂಬೇಡ್ಕರ್ ರಸ್ತೆ ಸಮೀಪದ ಕನ್ನಡಸೇನೆ ಆಟೋ ನಿಲ್ದಾಣದಲ್ಲಿ ೬೯ನೇ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣವನ್ನು ಶನಿವಾರ ನೆರವೇರಿಸಿ ಮಾತನಾಡಿದ ಅವರು, ಅನೇಕ ಧರ್ಮದವರು ಆಟೋ ವೃತ್ತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಮಾತೃಭಾಷೆಯಂತೆ ಕನ್ನಡವನ್ನು ಕುಟುಂಬದಲ್ಲಿ ಹಾಗೂ ವೃತ್ತಿಯಲ್ಲಿ ಅಳವಡಿಸಿಕೊಂಡಿರುವುದು ಹೆಮ್ಮೆಯ ಸಂಗತಿ. ಆ ನಿಟ್ಟಿನಲ್ಲಿ ಆಟೋ ಚಾಲಕರು ಕನ್ನಡದ ತೇರನ್ನು ಎಳೆಯುವ ಭಾಷಾಭಿಮಾನಿಗಳು ಎಂದು ಬಣ್ಣಿಸಿದರು.

ಇತ್ತೀಚೆಗೆ ಸರ್ಕಾರಿ ಬಸ್ ನಿಲ್ದಾಣ ಸಮೀಪ ಆಟೋ ಚಾಲಕರಿಗೆ ಅನುಕೂಲವಾಗಲು ನಗರಸಭೆ ಅನುದಾನದಿಂದ ಆಟೋ ನಿಲ್ದಾಣವನ್ನು ನಿರ್ಮಿಸಿ ಚಾಲಕರಿಗೆ ಅನುಕೂಲ ಕಲ್ಪಿಸಿದೆ. ಇದನ್ನು ಹೊರತಾಗಿ ನಿಲ್ದಾಣಕ್ಕೆ ಸಣ್ಣಪುಟ್ಟ ಕೆಲಸಗಳು ಬಾಕಿಯಿದ್ದು ಸದ್ಯದಲ್ಲೇ ಪೂರ್ಣಗೊಳಿಸಲು ಮುಂದಾಗುತ್ತೇವೆ ಎಂದರು.

ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ಮಾತನಾಡಿ, ಜಾತಿ, ಮತ ಹಾಗೂ ಪಂಥವನ್ನು ಮೀರಿ ನಿಂತಿರುವ ಕರ್ನಾಟಕ ರಾಜ್ಯ ನಮ್ಮದು. ಸರಳ ಹಾಗೂ ಸಜ್ಜನಿಕೆಯ ವ್ಯಕ್ತಿತ್ವವನ್ನು ಹೊಂದಿರುವ ಕನ್ನಡಿಗರು ಶಾಂತಿಪ್ರಿಯರೆAದೇ ಪ್ರಸಿದ್ಧರಾದವರು. ನಾಡು, ನುಡಿಗೆ ಧಕ್ಕೆಯಾದರೆ ಧೈರ್ಯವಾಗಿ ಎದುರಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದರು.

ಜಿಲ್ಲೆಯಲ್ಲಿ ಅತಿಹೆಚ್ಚು ಸಂಖ್ಯೆಯಲ್ಲಿ ಕನ್ನಡದ ಕ್ರಾಂತಿ, ಕಂಪು ಹಾಗೂ ಭಾಷಾಭಿಮಾನಕ್ಕೆ ಒತ್ತು ಕೊಡುವವರು ಆಟೋಚಾಲಕರು. ಪ್ರತಿ ರಾಜ್ಯೋತ್ಸವದಲ್ಲಿ ಕನ್ನಡ ಧ್ವಜವನ್ನು ರಾರಾಜಿಸುವಂತೆ ಮಾಡುವ ಆಟೋ ಚಾಲಕರ ಸೇವೆ ಅವಿಸ್ಮರಣೀಯ. ಈ ನಡುವೆ ಚಾಲಕರಿಗೆ ಸಮಸ್ಯೆಗಳು ಎದುರಾದರೂ ಕೂಡಾ ಕನ್ನಡಸೇನೆ ಸದಾ ಜೊತೆಗಿರಲಿದೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕನ್ನಡಸೇನೆ ಆಟೋ ಸಂಘದ ಅಧ್ಯಕ್ಷ ಶಾಹೀದ್, ಉಪಾಧ್ಯಕ್ಷ ಸತೀಶ್, ದೌರ್ಜನ್ಯ ಸಮಿತಿ ಸದಸ್ಯ ಹುಣಸೇಮಕ್ಕಿ ಲಕ್ಷö್ಮಣ್, ಕನ್ನಡ ಸೇನೆ ಆಟೋ ಘಟಕದ ಅಧ್ಯಕ್ಷ ಜಯಪ್ರಕಾಶ್, ಮುಖಂಡರಾದ ಶಂಕರೇಗೌಡ, ಜಗದೀಶ್, ಅಂಗಡಿ ಮಾಲೀಕ ವರದರಾಜ್, ಆಟೋ ಚಾಲಕರಾದ ಇಜಾಜ್, ನಿಸಾರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net