ಭಾಷಾ ಕೌಶಲ ಬೆಳೆಸಿಕೊಳ್ಳಲು ವಿದ್ಯಾರ್ಥಿಗಳಿಗೆ ಸಲಹೆ

CTD 28 BEO S. NAGABUSHN-0003
Published on

ಚಿತ್ರದುರ್ಗ: ಪ್ರಸ್ತುತ ಸ್ಪರ್ಧಾ ಯುಗದಲ್ಲಿ ವಿದ್ಯಾರ್ಥಿಗಳು ಶಾಲಾ ಹಂತದಲ್ಲೇ ಕನ್ನಡ ಭಾಷೆ ಕೌಶಲ ತಿಳಿಯುವುದು ಮುಖ್ಯವೆಂದು ಕ್ಷೇತ್ರ ಶಿಕ್ಷಣಾಧಿ ಕಾರಿ ಎಸ್.ನಾಗಭೂಷಣ್ ಹೇಳಿದರು.
ಆಲೂರು ವೆಂಕಟರಾವ್ ಭಾಷಾ ತರಬೇತಿ ಕೌಶಲ ಕೇಂದ್ರ, ಸಿಟಿಇ ಹಾಗೂ ಡಯಟ್‌ನಿಂದ ನಗರದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಮಂಗಳವಾರ ಏರ್ಪಡಿಸಿದ್ದ ಚಿತ್ರದುರ್ಗ ತಾಲೂಕು ಸರ್ಕಾರಿ ಶಾಲೆಯ 6, 7 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಕಥೆ ಹೇಳುವ ಸ್ಪರ್ಧೆ ಮತ್ತು ಸರ್ಕಾರಿ ಪ್ರೌಢಶಾಲೆಯ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ರಸಪ್ರಶ್ನೆ ಸ್ಪರ್ಧೆ ಉದ್ಘಾಟನಾ ಕಾರ‌್ಯಕ್ರಮದಲ್ಲಿ ಅವರು ಮಾತನಾಡಿದರು.
ಕ್ಷೇತ್ರ ಸಮನ್ವಯಾಧಿಕಾರಿ ಇ.ಸಂಪತ್‌ಕುಮಾರ್ ಮಾತನಾಡಿ, ಕನ್ನಡ ಭಾಷೆಯಲ್ಲಿ ವಿದ್ಯಾರ್ಥಿಗಳು ಪ್ರೌಢಿಮೆ ಬೆಳಸಿಕೊಳ್ಳಬೇಕೆಂದರು. ನೋಡಲ್ ಅಧಿಕಾರಿ ಬಿಆರ್‌ಪಿ ದೇವರಾಜ್, ಬಿಆರ್‌ಪಿಗಳಾದ ಕೆ.ಖಲಂದರ್, ಬಿ.ಸಿ.ವಿದ್ಯಾ, ಎಸ್.ಮೈಲಾರಪ್ಪ, ಶಾಹಿನ ಖಾನಂ ಹಾಗೂ ತೀರ್ಪುಗಾರರಾದ ಎಂ.ತಿಪ್ಪೇಸ್ವಾಮಿ, ವಸಂತ್ ಕುಮಾರ್, ತಿಮ್ಮರಾಜು, ಎಸ್.ಜಿ.ಸೌಭಾಗ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net