ಭಾಷಣ ಸ್ಪರ್ಧೆಯಲ್ಲಿ ಎಂ.ಸಿಂಚನ ಪ್ರಥಮ ಸ್ಥಾನ

15rajesh5
Published on

ಚಾಮರಾಜನಗರ: ಜಿಲ್ಲಾ ಪೊಲೀಸ್ ಘಟಕದ ವತಿಯಿಂದ ಮಾದಕ ವಸ್ತು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಜಿಲ್ಲೆಯ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ ಜಿಲ್ಲಾಮಟ್ಟದ ಭಾಷಣ ಸ್ಪರ್ಧೆಯಲ್ಲಿ ಗುಂಡ್ಲುಪೇಟೆ ತಾಲೂಕು ಆಲತ್ತೂರಿನ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಎಂ.ಸಿಂಚನ ಪ್ರಥಮ ಬಹುಮಾನ ಹಾಗೂ ಹನೂರು ತಾಲೂಕು ಕೆಂಪಯ್ಯನ ಹಟ್ಟಿ ಸರ್ಕಾರಿ ಪ್ರೌಢಶಾಲೆಯ ಶಬರಿ ದ್ವಿತೀಯ ಬಹುಮಾನ ಪಡೆದಿದ್ದಾರೆ.

ಚಾ.ನಗರ ತಾಲೂಕಿನ ಹೊಂಗನೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಅನ್ನಪೂರ್ಣ, ಹರದನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಐಶ್ವರ್ಯ, ಆದರ್ಶ ವಿದ್ಯಾಲಯದ ತೇಜಸ್ವಿನಿ, ನಂಜದೇವನಪುರ ಸರ್ಕಾರಿ ಪ್ರೌಢಶಾಲೆಯ ನಾಗರತ್ನ, ಕೊಳ್ಳೇಗಾಲ ತಾಲೂಕಿನ ನಿಸರ್ಗ ವಿದ್ಯಾನಿಕೇತನದ ದಿವ್ಯಶ್ರೀ, ಗುಂಡ್ಲುಪೇಟೆ ತಾಲೂಕು ಸೂರಾಪುರ ಸರ್ಕಾರಿ ಪ್ರೌಢಶಾಲೆಯ ಲಕ್ಷ್ಮಿ, ಚಿಕ್ಕಾಟೆ ಸರ್ಕಾರಿ ಪ್ರೌಢಶಾಲೆಯ ನಂದನ್, ಚಾ.ನಗರ ಜೆ.ಎಸ್.ಎಸ್ ಪ್ರೌಢಶಾಲೆಯ ಯೋಗೇಶ್, ಗುಂಡ್ಲುಪೇಟೆ ತಾಲೂಕು ಅಣ್ಣೂರು ಕೇರಿ ಸರ್ಕಾರಿ ಪ್ರೌಢಶಾಲೆಯ ನೇತ್ರಾವತಿ ಪ್ರಶಂಸನಾ ಬಹುಮಾನ ಪಡೆದ ವಿದ್ಯಾರ್ಥಿಗಳಾಗಿದ್ದಾರೆ. ಬಹುಮಾನ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸುವುದಾಗಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ರಾಮಚಂದ್ರರಾಜೇ ಅರಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net