

ಹಲಗೂರು: ಶಾಲೆಗಳಲ್ಲಿ ನಡೆಸುವ ಕ್ರೀಡಾಕೂಟಗಳಲ್ಲಿ ಭಾಗವಹಿಸುವುದರಿಂದ ಪರಸ್ಪರ ಪ್ರೀತಿ, ವಿಶ್ವಾಸ, ಭಾವೈಕ್ಯತೆ ಮೂಡಲು ಸಹಕಾರಿಯಾಗುತ್ತದೆ ಎಂದು ಶಿಕ್ಷಣ ಸಂಯೋಜಕ ಶ್ರೀನಿವಾಸ್ ತಿಳಿಸಿದರು.
ಹಲಗೂರಿನ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಹೋಬಳಿ ಮಟ್ಟದ 2023-24ನೇ ಕ್ರೀಡಾಕೂಟದಲ್ಲಿ ಮಾತನಾಡಿದರು.
ನಮಗೆ ಎಲ್ಲ ಸೌಲಭ್ಯಗಳಿದ್ದರೂ ಸಾಧನೆ ಮಾಡಲು ಹಿಂದೆ ಸರಿಯುತ್ತೇವೆ. ಕ್ರೀಡೆಯೂ ಶಿಕ್ಷಣದಷ್ಟೇ ಮುಖ್ಯ. ಉನ್ನತ ವಿದ್ಯಾಭ್ಯಾಸ ಮಾಡುವುದಕ್ಕಾಗಲಿ, ಮುಂದೆ ವೃತ್ತಿಯನ್ನು ಪ್ರಾರಂಭಿಸುವಾಗಲಿ ಕ್ರೀಡೆಯಲ್ಲಿ ಮಾಡಿದ ಸಾಧನೆ ತುಂಬಾ ಉಪಯೋಗಕ್ಕೆ ಬರುತ್ತದೆ. ಕ್ರೀಡೆಯಲ್ಲಿ ಹೆಚ್ಚೆಚ್ಚು ಸಾಧನೆಗಳನ್ನು ಮಾಡಿ, ಭವಿಷ್ಯದಲ್ಲಿ ನಿಮ್ಮ ವೃತ್ತಿ ಬದುಕನ್ನು ಉತ್ತಮಗೊಳಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ದಿವ್ಯಜ್ಯೋತಿ ಶಾಲೆ ವಿದ್ಯಾರ್ಥಿನಿ ಭವಾನಿಯನ್ನು ಸನ್ಮಾನಿಸಲಾಯಿತು. ಎಸ್‌ಡಿಎಂಸಿ ಉಪಾಧ್ಯಕ್ಷ ಜಿ.ಎಂ. ಮಹಾದೇವ, ಖಾಸಗಿ ಆಸ್ಪತ್ರೆ ವೈದ್ಯ ಎ.ಎಸ್. ನಾಗೇಶ್, ಜಿ.ಎಂ. ಮಹಾದೇವ, ಶ್ರೀನಿವಾಸ್, ಸೋಮಣ್ಣ, ದೇವರಾಜು ಎಂ.ಎಸ್, ಗುರುಸ್ವಾಮಿ, ಎ.ಎಸ್. ನಾಗೇಶ್, ಅನುರಾಧಾ, ಗುರುಸ್ವಾಮಿ, ದಯಾನಂದ, ಎನ್.ಎಂ.ಪುಟ್ಟಸ್ವಾಮಿ, ಡಿ.ಕೆ. ಕರಿಯಪ್ಪ, ಜಿ.ಕೃಷ್ಣ, ಕಿರಣ್‌ಕುಮಾರ್, ಶೋಭಾ, ಶ್ರೀನಿವಾಸ ಸೇರಿದಂತೆ ಇತರರಿದ್ದರು.