ಭಾವೈಕ್ಯತೆ ಪ್ರತಿಯೊಬ್ಬರ ಮಂತ್ರವಾಗಲಿ

ydg 01
Published on

ಶಹಾಪುರ: ಬಲಿಷ್ಠ ಭಾರತವನ್ನು ಕಟ್ಟುವಲ್ಲಿ ಸಮಾನತೆ, ಸೌಹಾರ್ದತೆ, ಸಹಬಾಳ್ವೆ, ಸೇರಿ ರಾಷ್ಟ್ರೀಯ ಭಾವೈಕ್ಯತೆ ಈ ದೇಶದ ಪ್ರತಿಯೊಬ್ಬರ ಮೂಲ ಮಂತ್ರವಾಗಬೇಕು ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ಕರೆ ನೀಡಿದರು.

ತಾಲೂಕು ಆಡಳಿತದಿಂದ ಬುಧವಾರ ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ 73ನೇ ಗಣರಾಜ್ಯೋತ್ಸವ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ಮಹಾನ್ ವ್ಯಕ್ತಿಗಳ ಪರಿಶ್ರಮ, ತ್ಯಾಗ ಹಾಗೂ ಬಲಿದಾನದ ಪ್ರತೀಕವಾಗಿ ಬ್ರಿಟಿಷರ ಗುಲಾಮಗಿರಿಯಿಂದ ದೇಶ ಮುಕ್ತಿ ಹೊಂದಿದೆ. ಇಡೀ ವಿಶ್ವಕ್ಕೆ ಮಾದರಿಯಾಗುವ ಸಂವಿಧಾನವನ್ನು ಈ ದೇಶದ ಜನ ಅಧಿಕೃತವಾಗಿ ಒಪ್ಪಿಕೊಂಡ ದಿನವಿದು ಎಂದರು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ತಹಸೀಲ್ದಾರ್ ಮಧುರಾಜ ಕೂಡ್ಲಿಗಿ, ಸ್ವತಂತ್ರ ಭಾರತದ ಪಾಲಿನ ಮಹತ್ವದ ದಿನ ಇದಾಗಿದೆ. ಭಾರತದ ಸಂವಿಧಾನ ಅಧಿಕೃತವಾಗಿ ಜಾರಿಗೆ ಬಂದ ದಿನ ಇದು. ಸರ್ಕಾರದ ಯೋಜನೆಗಳನ್ನು ಪ್ರತಿಯೊಬ್ಬರೂ ಬಳಸಿಕೊಳ್ಳುವುದರ ಜತೆಗೆ ನಮ್ಮ ಸಂವಿಧಾನ ನಮಗೆ ನೀಡಿದ ಮತದಾನದ ಹಕ್ಕಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಪ್ರತಿಯೊಬ್ಬರೂ ಮಾಡಬೇಕಿದೆ ಎಂದು ತಿಳಿಸಿದರು.

ತಾಪಂ ಇಒ ಜಗನ್ನಾಥ ಮೂತರ್ಿ, ನಗರಸಭೆ ಪೌರಾಯುಕ್ತ ಓಂಕಾರ ಪೂಜಾರಿ, ಬಿಇಓ ರುದ್ರಗೌಡ ಪಾಟೀಲ್ ಇದ್ದರು. ಸವಿತಾ ಸಮಾಜ ಕಚೇರಿಯಲ್ಲಿ ಗಣರಾಜ್ಯೋತ್ಸವ ಸರಳವಾಗಿ ಆಚರಿಸಲಾಯಿತು. ಜಿಲ್ಲಾಧ್ಯಕ್ಷ ಅಪ್ಪಣ್ಣ ಚಿನ್ನಾಕಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಜಿಲ್ಲಾ ಮುಖಂಡರಾದ ಮಲ್ಲಣ್ಣ ವಡಗೇರಿ, ಶಂಕರ ಕಲ್ಮನಿ, ವಿಶ್ವನಾಥ ಬಸವನಗುಡಿ, ಗೋಪಾಲ ಕಿಲ್ಲೇದ, ಮಾಜಿ ಅಧ್ಯಕ್ಷ ಶಿವಾಜಿ ಗಿರದಾವರಿ, ನರಸಿಂಗ ಚಿನ್ನಾಕಾರ, ರಾಜು ದುಗನೂರ, ಕಾಶೀನಾಥ ನಾಚವಾರ, ಚೆನ್ನಪ್ಪ ಕಲ್ಮನಿ, ಮಾರುತಿ ಕಟ್ಟಿಮನಿ, ನಾಗಪ್ಪ ಹತ್ತಿಕುಣಿ, ಹಣಮಂತ ಗೌಡಗೇರಿ, ಬನ್ನಪ್ಪ ಕಿಲ್ಲಕನೇರಾ, ಬಸವರಾಜ ಹೊಸಮನಿ, ರಮೇಶ ಹಕೀಮ್, ರಾಘವೇಂದ್ರ ದಾಂಡೇಲಿ, ಈರಣ್ಣ ಅಲ್ಲಿಪುರ, ದಶರಥ ಕಲ್ಮನಿ, ದೊಡ್ಡಪ್ಪ ಕಟ್ಟಿಮನಿ, ಆನಂದ ಮೆಕ್ಯಾನಿಕ್, ಪ್ರಕಾಶ ಉಜ್ಜೇಲಿ, ವೀರೇಶ ರಾಯಚೂರಕರ್, ಶ್ರೀನಿವಾಸ ಕಲ್ಮನಿ, ನಾಗರಾಜ ಹೊಸಮನಿ, ಅಶೋಕ ಗೌನಳ್ಳಿ ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net