

ನರಗುಂದ: ಉತ್ತರ ಕರ್ನಾಟಕದ ಬಹುವರ್ಷಗಳ ಬೇಡಿಕೆಯಾದ ಮಹದಾಯಿ ಯೋಜನೆಗೆ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದ ಹಿನ್ನೆಲೆಯಲ್ಲಿ ಮಹದಾಯಿ ಹೋರಾಟಗಾರರು ಪಟ್ಟಣದ ಬಾಬಾಸಾಹೇಬ ಭಾವೆ ಪುತ್ಥಳಿಗೆ ಶುಕ್ರವಾರ ಮಹದಾಯಿ ನದಿ ನೀರಿನ ಅಭಿಷೇಕ ಮಾಡಿದರು.
ಮಹದಾಯಿ ಹೋರಾಟದ ವೇದಿಕೆಯಲ್ಲಿ ರೈತಸೇನಾ ಕರ್ನಾಟಕ ಅಧ್ಯಕ್ಷ ವೀರೇಶಸ್ವಾಮಿ ಸೊಬರದಮಠ ಮಾತನಾಡಿ, ಕಳೆದ 40 ವರ್ಷಗಳಿಂದ ಮಹದಾಯಿ ಹೋರಾಟ ನಿರಂತರವಾಗಿ ನಡೆದುಕೊಂಡು ಬಂದಿದೆ. ಬಹು ವರ್ಷಗಳ ಈ ಮಹತ್ವದ ಯೋಜನೆಗೆ ಗೆಜೆಟ್ ನೋಟಿಫಿಕೇಷನ್ ಹೊರಡಿಸುವಂತೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಈ ಹಿನ್ನೆಲೆ ಕೇಂದ್ರ ಸರ್ಕಾರ ಈ ಯೋಜನೆಯ 13.44 ಟಿಎಂಸಿ ನೀರನ್ನು ಬಳಸಿಕೊಳ್ಳಲು ಗೆಜೆಟ್ ಅಧಿಸೂಚನೆ ಹೊರಡಿಸಿರುವುದು ಅಭಿನಂದನಾರ್ಹ ಕಾರ್ಯವಾಗಿದೆ ಎಂದರು.
ವಿಜಯೋತ್ಸವ ಆಚರಣೆ ನಿಮಿತ್ತ ಪುರಸಭೆ ಆವರಣದಿಂದ ಹೋರಾಟದ ವೇದಿಕೆಯವರೆಗೆ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ವಿಶ್ವನಾಥ ಗುಡಿಸಾಗರ, ಫಕೀರಪ್ಪ ಜೋಗಣ್ಣವರ, ಮಲ್ಲಣ್ಣ ವಾಲೀಕಾರ ಮಾತನಾಡಿದರು. ಅರ್ಜುನ ಮಾನೆ, ರಮೇಶ ನಾಯ್ಕರ, ಈರಬಸಪ್ಪ ಹೂಗಾರ, ರಾಮು ಸಾಬಳೆ, ಪುಂಡಲೀಕಪ್ಪ ಯಾದವ, ಗೋವಿಂದರಡ್ಡಿ ಕೀಲಬನೂರ, ಮಾರುತಿ ಬಡಿಗೇರ, ಶಿವಪ್ಪ ಸಾತನ್ನವರ, ಬಸಯ್ಯಾ ಮಠದ, ಪಾರವ್ವ ದಾನರಡ್ಡಿ, ಚನ್ನಮ್ಮ ಕರ್ಜಗಿ, ಕಾಶವ್ವ, ಲಚ್ಚೆವ್ವ ಜ್ಯೋತೆಣ್ಣವರ, ಅನಸವ್ವ ಶಿಂಧೆ, ರತ್ನವ್ವ ಸವಳಭಾವಿ, ಇತರರು ಉಪಸ್ಥಿತರಿದ್ದರು. ಈ ವೇಳೆ ಮಹದಾಯಿ ಹೋರಾಟದಲ್ಲಿ ಭಾಗಿಯಾಗಿ ಸಾವನ್ನಪ್ಪಿದ 11 ಜನ ರೈತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜನ್ಮದಿನದಂದೇ ಮಹದಾಯಿ ಯೋಜನೆಗೆ ಅಧಿಸೂಚನೆ ಹೊರಡಿಸುವ ಮೂಲಕ ಕೇಂದ್ರ ಸರ್ಕಾರ ರಾಜ್ಯದ ಜನರಿಗೆ ಗಿಫ್ಟ್ ನೀಡಿದೆ. ಹೋರಾಟ ಮಾಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. | ಸಿ.ಸಿ. ಪಾಟೀಲ, ಗದಗ ಜಿಲ್ಲಾ ಉಸ್ತುವಾರಿ ಸಚಿವ
ಮಹದಾಯಿ ವಿವಾದ ಬಿಜೆಪಿ ಸರ್ಕಾರದ ಅವಧಿಯಲ್ಲಿ ರ್ತಾಕ ಅಂತ್ಯ ಕಂಡಿದ್ದು, ರೈತ ನಾಯಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜನ್ಮದಿನದಂದು ಮಹದಾಯಿ ಯೋಜನೆಗೆ ಅಧಿಸೂಚನೆ ಹೊರಡಿಸಿರುವುದು ಸ್ವಾಗತಾರ್ಹ ನಿರ್ಣಯ. ಮಲಪ್ರಭೆಗೆ ಮಹದಾಯಿ ನೀರು ಹರಿದು ಈ ಭಾಗದ ರೈತರ ಕನಸು ನನಸಾಗಲಿದೆ.ನಳೀನ್ಕುಮಾರ ಕಟೀಲ್, ಬಿಜೆಪಿ ರಾಜ್ಯಾಧ್ಯಕ್ಷ
ಹೋರಾಟಗಾರರಿಂದ ವಿಜಯೋತ್ಸವ
ನರಗುಂದ: ಮಹದಾಯಿ ಯೋಜನೆಗೆ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದ ಹಿನ್ನೆಲೆ, ಮಹದಾಯಿಗಾಗಿ ಮಹಾವೇದಿಕೆ, ಕಳಸಾ-ಬಂಡೂರಿ ಹಾಗೂ ಬಿಜೆಪಿಯ ನೂರಾರು ಕಾರ್ಯಕರ್ತರು ಶುಕ್ರವಾರ ಪರಸ್ಪರ ಬಣ್ಣ ಎರಚಿ, ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿದರು. ಪಟ್ಟಣದ ಶಿವಾಜಿ ವರ್ತಲ, ಬಸವೇಶ್ವರ ವರ್ತಲ, ಕೋರ್ಟ್ ಸರ್ಕಲ್, ಹುತಾತ್ಮ ರೈತ ವೀರಪ್ಪ ಕಡ್ಲಿಕೊಪ್ಪ ಸ್ಮಾರಕ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.
ಕಳಸಾ-ಬಂಡೂರಿ ಕೇಂದ್ರ ಯುವ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ, ಮಹದಾಯಿಗಾಗಿ ಮಹಾವೇದಿಕೆ ಸಂಘಟನೆ ಸಂಚಾಲಕ ಶಂಕರಪ್ಪ ಅಂಬಲಿ, ಉಮೇಶಗೌಡ ಪಾಟೀಲ ಮಾತನಾಡಿದರು. ಶಿವಾನಂದ ಮುತವಾಡ, ಹಸನ ನವದಿ, ವಿಠ್ಠಲ ಹವಾಲ್ದಾರ, ಪ್ರಕಾಶ ಹಾದಿಮನಿ, ಚಂದ್ರು ದಂಡಿನ, ಅನಿಲ ಧರೆಯಣ್ಣವರ, ಬಿ.ಬಿ. ಐನಾಪೂರ, ಬಸು ಪಾಟೀಲ, ಮಾರುತಿ ಅರ್ಭಣದ, ಚಂದ್ರು ಪವಾರ, ಚಂದ್ರಗೌಡ ಪಾಟೀಲ, ಚಂಬಣ್ಣ ವಾಳದ, ಸಂಗನಗೌಡ ಹಾಲಗೌಡ್ರ, ಗುರಪ್ಪ ಅದೇಪ್ಪನವರ, ಜಮದಗ್ನಿ ಋಷಿ ಪಾತ್ರೋಟಿ, ರಾಜುಗೌಡ ಪಾಟೀಲ, ಸಿದ್ದೇಶ ಹೂಗಾರ, ಶರಣಪ್ಪ ಗುಗ್ಗರಿ ಅನೇಕರು ಉಪಸ್ಥಿತರಿದ್ದರು.
ಸಿಹಿ ಹಂಚಿ ಸಂಭ್ರಮ
ಗದಗ: ಮಹದಾಯಿ ಯೋಜನೆಗೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿರುವುದನ್ನು ಸ್ವಾಗತಿಸಿ ರೈತ ಹೋರಾಟಗಾರರು, ಅನಿಲ ಮೆಣಸಿನಕಾಯಿ ಅಭಿಮಾನಿ ಬಳಗ, ಬಿಜೆಪಿ ಮಹಿಳಾ ಕಾರ್ಯಕರ್ತೆಯರು, ವಿವಿಧ ಸಂಘಟನೆಗಳ ಮುಖಂಡರು ನಗರದ ಗದಗ-ಹುಬ್ಬಳ್ಳಿ ರಸ್ತೆಯಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಕಳಸಾ-ಬಂಡೂರಿ ಹೋರಾಟಗಾರ ಬಸವಣ್ಣೆಯ್ಯ ಹಿರೇಮಠ, ನವಿಲುತೀರ್ಥ ಅಣೆಕಟ್ಟೆಯಲ್ಲಿ ಸಂಗ್ರಹವಾದ ಹೂಳನ್ನು ತೆಗೆಯಬೇಕು. ಬರುವ ಬಜೆಟ್ನಲ್ಲಿ ವಿಶೇಷ ಅನುದಾನ ಮೀಸಲಿಡಬೇಕು ಎಂದು ಆಗ್ರಹಿಸಿದರು. ಬಿಜೆಪಿ ಮುಖಂಡ ಎಂ.ಎಸ್. ಕರಿಗೌಡ್ರ ಮಾತನಾಡಿದರು. ಮಹೇಶ ದಾಸರ, ವೆಂಕಟೇಶ ಬೇಲೂರ, ಉಮೇಶ ಹಡಪದ, ಬಸವರಾಜ ಮೆಣಸಿನಕಾಯಿ, ಮೋಹನ ಮದ್ದಿನ, ರಾಯಪ್ಪ ಚಕ್ರಸಾಲಿ, ಬಾಬು ಯಲಿಗಾರ, ವಿಲ್ಸನ್ ಕಂಬಳಿ, ನಗರಸಭೆ ಮಾಜಿ ಸದಸ್ಯೆ ಜಯಶ್ರೀ ಭೈರವಾಡೆ, ರೇಣುಕಾ ಸುಣಗಾರ, ಕಮಲಾಕ್ಷಿ ಬಳಿಶೆಟ್ಟರ, ಜಯಶ್ರೀ ಅಣ್ಣಿಗೇರಿ, ಪುಷ್ಪಾ ಬಡಿಗೇರ, ರತ್ನಾ ಕುರಗೋಡ, ಪಾರ್ವತೆಮ್ಮ ಮರಿಗೌಡ್ರ, ಶರಣಪ್ಪ ಕಮಡೊಳ್ಳಿ, ಯಮನೂರಸಾಬ ನದಾಫ್ ಮತ್ತಿತರರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.
ಗೆಜೆಟ್ ನೋಟಿಫಿಕೇಷನ್ ಸ್ವಾಗತಾರ್ಹ
ನರಗುಂದ: ಸುಪ್ರೀಂಕೋರ್ಟ್ ಆದೇಶದಂತೆ ಬಹು ದಿನಗಳ ಮಹದಾಯಿ ಯೋಜನೆಗೆ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಷನ್ ಹೊರಡಿಸಿರುವುದು ಅತ್ಯಂತ ಸ್ವಾಗತಾರ್ಹ ಕ್ರಮವಾಗಿದೆ ಎಂದು ಮಾಜಿ ಶಾಸಕ ಬಿ.ಆರ್. ಯಾವಗಲ್ ಹೇಳಿದರು.
ಪಟ್ಟಣದ ಮಲಪ್ರಭಾ ಆಯಿಲ್ ಮಿಲ್ನಲ್ಲಿ ಶುಕ್ರವಾರ ಜರುಗಿದ ಕಾಂಗ್ರೆಸ್ ಕಾರ್ಯಕರ್ತರ ವಿಜಯೋತ್ಸವ ಸಭೆಯಲ್ಲಿ ಸಂಭ್ರಮಾಚರಿಸಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯ ಕೇಳಿದ್ದ 36 ಟಿಎಂಸಿ ನೀರಲ್ಲಿ ನ್ಯಾಯಾಧಿಕರಣ ಕೇವಲ 13.44 ಟಿಎಂಸಿ ನೀರನ್ನು ಕೊಟ್ಟಿರುವುದಕ್ಕೆ ಅಸಮಾಧಾನವಿದ್ದರೂ ಯೋಜನೆಗೆ ಗೆಜೆಟ್ ಅಧಿಸೂಚನೆ ಹೊರಡಿಸಿರುವುದು ಸ್ವಾಗತಾರ್ಹವಾಗಿದೆ. ಆದರೆ, ಕರ್ನಾಟಕದ ಹೆಚ್ಚುವರಿ ನೀರನ್ನು ಕಾನೂನಾತ್ಮಕವಾಗಿ ಪಡೆಯುವಂತೆ ರಾಜ್ಯ ಬಿಜೆಪಿ ಸರ್ಕಾರವನ್ನು ಆಗ್ರಹಿಸುತ್ತೇನೆ ಎಂದರು.
ಪ್ರವೀಣ ಯಾವಗಲ್, ರಾಜು ಕಲಾಲ, ಎಸ್.ಡಿ. ಕೊಳ್ಳಿಯವರ, ಲಾಲಸಾಬ ಅರಗಂಜಿ, ಪ್ರಕಾಶ ತಿರಕನಗೌಡ್ರ, ವಿಠ್ಠಲ ತಿಮ್ಮರಡ್ಡಿ, ಟಿ.ಬಿ. ಶಿರಿಯಪ್ಪಗೌಡ್ರ, ಪ್ರಭುಲಿಂಗಪ್ಪ ಯಲಿಗಾರ, ಎಂ.ಬಿ. ಅರಹುಣಸಿ, ಬಸಪ್ಪ ಸವದತ್ತಿ, ಪಕ್ಕೀರಪ್ಪ ಸವದತ್ತಿ, ಯಲ್ಲಪ್ಪಗೌಡ ನಾಯ್ಕರ, ವಿಷ್ಣು ಸಾಠೆ, ಎಸ್.ಬಿ. ಜೋಗಣ್ಣವರ ಅನೇಕರು ಉಪಸ್ಥಿತರಿದ್ದರು.
EndFragment