ಭಾವನೆಗಳ ಆನಂದದ ಅಭಿವ್ಯಕ್ತಿಯೇ ಕಾವ್ಯ

klb4
ಸೇಡಂನ ನೀಲಗಂಗಮ್ಮ ಸಜ್ಜನಶೆಟ್ಟಿ ಕಲ್ಯಾಣ ಮಂಟಪದಲ್ಲಿ ನೃಪತುಂಗ ಅಧ್ಯಯನ ಸಂಸ್ಥೆ ಆಯೋಜಿಸಿದ್ದ ಶ್ರಾವಣ ಕಾವ್ಯ ಸಂಜೆ ಕವಿಗೋಷ್ಠಿಯಲ್ಲಿ ಹಿರಿಯ ಲೇಖಕಿ ಡಾ.ಶೋಭಾದೇವಿ ಚೆಕ್ಕಿ ಮಾತನಾಡಿದರು. ಪ್ರಕಾಶ ಗೊಣಗಿ, ರುಕ್ಮೀಣಿ ಕಾಳಗಿ, ಆರತಿ ಕಡಗಂಚಿ, ಪ್ರಭಾಕರ ಜೋಶಿ ಇದ್ದರು.
Published on

ಸೇಡಂ: ಭಾವನೆಗಳು ಅಕ್ಷರ ರೂಪದಲ್ಲಿ ಅಭಿವ್ಯಕ್ತಿಸಿದಾಗ ಉಂಟಾಗುವ ಆನಂದವೇ ಕಾವ್ಯವಾಗುತ್ತದೆ ಎಂದು ಹಿರಿಯ ಲೇಖಕಿ ಡಾ.ಶೋಭಾದೇವಿ ಚೆಕ್ಕಿ ಹೇಳಿದರು.

ನೀಲಗಂಗಮ್ಮ ಸಜ್ಜನಶೆಟ್ಟಿ ಕಲ್ಯಾಣ ಮಂಟಪದಲ್ಲಿ ನೃಪತುಂಗ ಅಧ್ಯಯನ ಸಂಸ್ಥೆಯಿAದ ಭಾನುವಾರ ಸಂಜೆ ಆಯೋಜಿಸಿದ್ದ ಶ್ರಾವಣ ಕಾವ್ಯ ಸಂಜೆ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿ, ಕಾವ್ಯ ಮತ್ತೊಬ್ಬರ ಒತ್ತಾಯಕ್ಕೆ ಉದ್ಭವಿಸಲಾರದು. ಅನುಭವ, ಅಧ್ಯಯನ, ಆಸಕ್ತಿಯ ಫಲವಾಗಿ ಮೂಡುವ ಕವನಗಳಿಂದ ಓದುಗರ ಮನಸ್ಸು ಸಂತಸಗೊಳ್ಳುತ್ತದೆ. ಸಾಹಿತ್ಯದಲ್ಲಿ ಆಸಕ್ತಿ ಇರುವ ಎಲ್ಲರೂ ಬೆಳೆಯುವಂತಹ ಅವಕಾಶಗಳನ್ನು ನೃಪತುಂಗ ಅಧ್ಯಯನ ಸಂಸ್ಥೆ ಮಾಡುತ್ತಿದೆ ಎಂದು ಶ್ಲಾಘಿಸಿದರು.

ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷೆ ಆರತಿ ಕಡಗಂಚಿ ಅಧ್ಯಕ್ಷತೆವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಗೌರವ ಕಾರ್ಯದರ್ಶಿ ಪ್ರಕಾಶ ಗೊಣಗಿ, ಬರಹಗಾರರ ಸಂಘದ ತಾಲೂಕು ಅಧ್ಯಕ್ಷೆ ರುಕ್ಮಿಣಿ ಕಾಳಗಿ, ಪ್ರಮುಖರಾದ ಶಿವಯ್ಯಸ್ವಾಮಿ ಬಿಬ್ಬಳ್ಳಿ, ಸುಲೋಚನಾ ಬಿಬ್ಬಳ್ಳಿ, ಜನಾರ್ದನರೆಡ್ಡಿ ತುಳೇರ, ವೀರಭದ್ರಪ್ಪ ಟೆಂಗಳಿ, ಶರಣು ಮಹಾಗಾಂವ್, ಆದಿತ್ಯ ಜೋಶಿ, ಕಾರ್ತಿಕರೆಡ್ಡಿ, ವೀರಭದ್ರಯ್ಯಸ್ವಾಮಿ ಇತರರಿದ್ದರು.
ಲಲಿತಾ ಕೋಕಟ್ ಪ್ರಾರ್ಥಿಸಿದರು. ಸಿದ್ದಪ್ಪ ತಳ್ಳಳ್ಳಿ ಸ್ವಾಗತಿಸಿದರು. ಮಹಿಪಾಲರೆಡ್ಡಿ ಮುನ್ನೂರ ಪ್ರಾಸ್ತಾವಿಕ ಮಾತನಾಡಿದರು. ಭಾಗ್ಯಶ್ರೀ ಮಠಪತಿ ನಿರೂಪಣೆ ಮಾಡಿದರು. ನೃಪತುಂಗ ಅಧ್ಯಯನ ಸಂಸ್ಥೆ ಅಧ್ಯಕ್ಷ ಪ್ರಭಾಕರ ಜೋಶಿ ವಂದಿಸಿದರು.

ಕವನ ವಾಚಿಸಿದ ಕವಿಗಳು: ಹಿರಿಯ ಕವಿಗಳಾದ ಲಿಂಗಾರೆಡ್ಡಿ ಶೇರಿ, ಡಾ.ಎಂ.ಜಿ.ದೇಶಪಾAಡೆ, ವಿಜಯಲಕ್ಷಿö್ಮÃ ಪತ್ತಾರ್, ವಿಠ್ಠಲ್ ಬರಮಕರ್, ಚಂದ್ರಕಲಾ ಪಾಟೀಲ್, ಡಾ.ಸುವರ್ಣಾ ಅಳ್ಳೊಳ್ಳಿ, ಜ್ಯೋತಿ ಲಿಂಗAಪಲ್ಲಿ, ಅಮರಮ್ಮ ಪಾಟೀಲ್, ನಾಗಲಕ್ಷಿö್ಮÃ ಪಾಟೀಲ್, ವಿಜಯ ಭಾಸ್ಕರರೆಡ್ಡಿ, ಸಂತೋಷ ತೊಟ್ನಳ್ಳಿ, ಶರಣು, ಮುರುಗೆಪ್ಪ ಹಣಮನಳ್ಳಿ, ಸವಿತಾ ಕುಂಬಾರ, ಪ್ರಮೀಳಾ ಪಾಟೀಲ್, ಗಣಪತಿ ಬಡಿಗೇರ, ವೀರಯ್ಯಸ್ವಾಮಿ ಮಠಪತಿ, ಶಿವಾರೆಡ್ಡಿ ಇತರರು ಕವನ ವಾಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net