ಭಾವಚಿತ್ರಕ್ಕೆ ಗಣ್ಯರ ಪುಷ್ಪಾರ್ಚನೆ

14ss1Doddakunda ambedkar acarane
Published on

ಶನಿವಾರಸಂತೆ: ಕೊಡ್ಲಿಪೇಟೆ ಸಮಿಪದ ದೊಡ್ಡಾಕುಂದ ಗ್ರಾಮದ ಅಂಬೇಡ್ಕರ್ ಯುವಕ ಸಂಘದಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 132ನೇ ಜನ್ಮದಿನವನ್ನು ಆಚರಿಸಲಾಯಿತು.


ಅಂಬೇಡ್ಕರ್ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡಿದರು. ಜವರೇಗೌಡ ಮಾಸ್ತರ್, ಡಿ.ಆರ್.ವೇದಕುಮಾರ್, ಪಾವನ ಗಗನ್ ರೈ, ಉಪನ್ಯಾಸಕ ಯೋಗೇಂದ್ರ, ಪ್ರಶಾಂತ್, ಜೆ.ಎಲ್.ಜನಾರ್ಧನ್, ಯೋಗಾನಂದ್, ಆರ್.ವಿ.ದರ್ಶನ್, ಆರ್.ಆರ್.ಪವನ್, ಜೆ.ಕೆ.ಜಯಂತ್, ಅಕ್ಷಯ್, ಡಿ.ಆರ್.ಲೋಕೇಶ್, ಡಿ.ಕೆ.ದರ್ಶನ್ ಇದ್ದರು.


ಆಲೂರು-ಸಿದ್ದಾಪುರ: ಶನಿವಾರಸಂತೆ ಹೋಬಳಿಯ ಆಲೂರು-ಸಿದ್ದಾಪರದಲ್ಲಿ ಅಂಬೇಡ್ಕರ್ ಅವರ ಜನ್ಮ ದಿನವನ್ನು ಸರಳವಾಗಿ ಆಚರಿಸಲಾಯಿತು. ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಎ.ಎಸ್.ಶ್ರುತಿ, ಚೈಲ್ಡ್‌ಲೈನ್ ಕೇಂದ್ರದ ತಾಲೂಕು ಕಾರ್ಯಕರ್ತೆ ಬಿ.ಆರ್.ಕುಮಾರಿ ದಿನದ ಮಹತ್ವ ಕುರಿತು ಮಾತನಾಡಿದರು. ವಿವೇಕಾನಂದ ಯೂತ್ ಮೂಮೆಂಟ್ ಸಂಘದ ಹರೀಶ್, ಚೈಲ್ಡ್‌ಲೈನ್ ಸಂಸ್ಥೆಯ ಯೋಗೇಶ್, ಶಿಕ್ಷಕರಾದ ಧರ್ಮಪ್ಪ, ಭಾಗ್ಯಜ್ಯೋತಿ, ಭವಾನಿ, ರಮೇಶ್, ಮಂಜಪ್ಪ, ಅಂಗನವಾಡಿ ಶಿಕ್ಷಕಿ ಜ್ಯೋತಿ, ಆಶಾ ಕಾರ್ಯಕರ್ತೆ ಶುಭಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net