

ಭಾಲ್ಕಿ: ಭಾಲ್ಕಿ-ಬೆಂಗಳೂರು ಸಂಪರ್ಕ ಕಲ್ಪಿಸುವ ನೂತನ ಸ್ಲಿಪರ್ ಬಸ್ ಸೇವೆಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಚಾಲನೆ ನೀಡಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ (ಕೆಕೆಆರ್‌ಟಿಸಿ)ಯ ಅಮೋಘವರ್ಷ ಹೆಸರಿನ ಎರಡು ನಾನ್ ಎಸಿ ಸ್ಲಿಪರ್ ಬಸ್ ಸೇವೆಗೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.
ನಂತರ ಮಾತನಾಡಿದ ಸಚಿವರು, ತಾಲೂಕಿನಿಂದ ರಾಜಧಾನಿ ಬೆಂಗಳೂರು ನಗರಕ್ಕೆ ಓಡಾಡುವ ಪ್ರಯಾಣಿಕರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ. ಹಾಗಾಗಿ ಭಾಲ್ಕಿಯಿಂದ ನೇರವಾಗಿ ಬೆಂಗಳೂರಿಗೆ ಬಸ್ ಸಂಚಾರ ಆರಂಭಿಸಬೇಕು ಎನ್ನುವುದು ಪ್ರಯಾಣಿಕರ ಬಹುದಿನಗಳ ಬೇಡಿಕೆ ಆಗಿತ್ತು. ಅದನ್ನು ಈಡೇರಿಸಲಾಗಿದೆ ಎಂದರು.
ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಕಾAತ ಫುಲೇಕರ್ ಮಾತನಾಡಿ, ಭಾಲ್ಕಿ-ಬೆಂಗಳೂರು ಮಧ್ಯೆ ಪ್ರತಿದಿನ ಎರಡು ನಾನ್ ಎಸಿ ಸ್ಲಿಪರ್ ಬಸ್ಸಂ ಚರಿಸಲಿವೆ. ಭಾಲ್ಕಿಯಿಂದ ಮಧ್ಯಾಹ್ನ ೩.೪೦ಕ್ಕೆ ಹೊರಟು ವಾಯಾ ಹೈದರಾಬಾದ್ ಮಾರ್ಗವಾಗಿ ಮರುದಿನ ಬೆಳಗ್ಗೆ ೬ಕ್ಕೆ ಬೆಂಗಳೂರು ತಲುಪುಲಿದೆ. ಜತೆಗೆ ಬೆಂಗಳೂರಿನಿಂದ ಸಂಜೆ ೬ಕ್ಕೆ ಹೊರಟು ಮರುದಿನ ಬೆಳಗ್ಗೆ ೯ಕ್ಕೆ ತಲುಪಲಿದೆ ಎಂದು ಮಾಹಿತಿ ನೀಡಿದರು.
ಸ್ಥಳೀಯ ಬಸ್ ಡಿಪೋ ವ್ಯವಸ್ಥಾಪಕ ಭದ್ರಪ್ಪ ಹುಡಗೆ ಮಾತನಾಡಿ, ಭಾಲ್ಕಿ-ಬೆಂಗಳೂರು ಬಸ್ ಸೇವೆ ಜತೆಗೆ ತಡೆರಹಿತ ಭಾಲ್ಕಿ-ಬೀದರ್, ಭಾಲ್ಕಿ-ಮುಗಳಖೋಡ ಮತ್ತು ಭಾಲ್ಕಿ-ಕೊಪ್ಪಳ ಮಧ್ಯೆ ಹೊಸದಾಗಿ ಬಸ್ ಸೇವೆ ಆರಂಭಿಸಲಾಗಿದೆ. ಪ್ರಯಾಣಿಕರು ಸದುಪಯೋಗ ಪಡೆದು ಕೊಳ್ಳಬೇಕು ಎಂದು ತಿಳಿಸಿದರು.
ಸಾರಿಗೆ ಇಲಾಖೆ ತಾಂತ್ರಿಕ ಶಿಲ್ಪಿ ಚಂದ್ರಕಾAತ, ವಿಭಾಗೀಯ ಸಂಚಾರಾಧಿಕಾರಿ ಇಂದ್ರಸೇನ್ ಬಿರಾದಾರ, ಇಂಜನೀಯರ ಪತ್ತಾರ್ ಇತರರಿದ್ದರು.