ಭಾರಿ ಮಳೆಗೆ ಗೋಣಿಸೋಮನಹಳ್ಳಿಯಲ್ಲಿ ಕುಸಿದ ಮನೆ

IMG-20200406-WA0031.jpg
Published on

ಹಳೇಬೀಡು: ಭಾನುವಾರ ರಾತ್ರಿ ಹಳೇಬೀಡು ಸುತ್ತ ಸುರಿದ ಬಿರುಸು ಮಳೆಗೆ ಸಮೀಪದ ಗೋಣಿಸೋಮನ ಹಳ್ಳಿಯಲ್ಲಿ ಮನೆಯೊಂದು ಕುಸಿದು ಬಿದ್ದಿದೆ.

ಗ್ರಾಮದ ಅಂಬೇಡ್ಕರ್ ಕಾಲನಿ ನಿವಾಸಿ ಶಿವರುದ್ರಯ್ಯ ಎಂಬವರ ವಾಸದ ಮನೆ ಕುಸಿದಿದ್ದು ಕುಟುಂಬದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭಾನುವಾರ ಮಧ್ಯರಾತ್ರಿ ಆರಂಭವಾದ ಮಳೆ ಎರಡು ಗಂಟೆ ಕಾಲ ಬಿರುಸಿನಿಂದ ಸುರಿದ ಪರಿಣಾಮ ಮನೆಯ ಬಹುಭಾಗ ಕುಸಿದಿದ್ದು, ಪತಿ,ಪತ್ನಿ ಹಾಗೂ ಇಬ್ಬರು ಮಕ್ಕಳು ಇನ್ನೊಂದು ಬದಿಯಲ್ಲಿ ಮಲಗಿದ್ದ ಕಾರಣ ಅಪಾಯದಿಂದ ಪಾರಾಗಿದ್ದಾರೆ. ಮನೆಯಲ್ಲಿದ್ದ ವಸ್ತುಗಳಿಗೆ ಹಾನಿಯಾಗಿದ್ದು , ರಾಗಿ ಮತ್ತಿತರ ಧಾನ್ಯಗಳು ಮನೆಗೋಡೆಯ ಮಣ್ಣಿನಲ್ಲಿ ಸೇರಿಹೋಗಿದೆ.

ಸ್ಥಳಕ್ಕೆ ಭೇಟಿ ನೀಡಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಕೆ.ಸುರೇಶ್, ಸಂತ್ರಸ್ತ ವ್ಯಕ್ತಿಗೆ ಸಾಂತ್ವನ‌ ಹೇಳಿದರಲ್ಲದೆ, ಕುಟುಂಬಕ್ಕೆ ಸರ್ಕಾರದಿಂದ ಮಂಜೂರಾಗಿರುವ ಜನತಾಮನೆಯನ್ನು ಕಟ್ಟಿಕೊಟ್ಟಲು ತಕ್ಷಣ ಅನುಕೂಲ‌ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಹಾನಿಯ ಬಗ್ಗೆ ಪರಿಶೀಲನೆ ನಡೆಸಿ ಕ್ರಮವಹಿಸಲಾಗದೆಂದು ಪಿಡಿಒ ಶಿವಯ್ಯ ತಿಳಿಸಿದರು. ಅಧಿಕಾರಿಗಳಿಂದ ವರದಿ ಪಡೆದುಕೊಂಡು ಮನೆ ಕಳೆದುಕೊಂಡಿರುವ ಕುಟುಂಬಕ್ಕೆ ಆಸರೆ ಒದಗಿಸುತ್ತೇವೆ ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು.

_-----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net