ಭಾರಿ ಮಳೆ, ಶಾಲೆಗೆ ತೆರಳಲು ಹರಸಾಹಸ

22Sambaragi1
ಭಾರಿ ಮಳೆಗೆ ಅಗ್ರಾಣಿ ನದಿಯ ಸಂಬರಗಿ-ಆಜೂರ ಸೇತುವೆ ಮೇಲೆ ಹರಿಯುತ್ತಿರುವ ನೀರಿನ ಮಧ್ಯೆಯೇ ವಿದ್ಯಾರ್ಥಿಗಳು ಶಾಲೆಗೆ ತೆರಳುತ್ತಿರುವುದು.
Published on

ಸಂಬರಗಿ: ಗಡಿಭಾಗದಲ್ಲಿರುವ ಅಗ್ರಾಣಿ ತೀರದಲ್ಲಿ ಶನಿವಾರ ಸುರಿದ ಭಾರಿ ಮಳೆಯಿಂದ ಅಗ್ರಾಣಿ ನದಿ ನೀರಿನ ಮಟ್ಟ ಹೆಚ್ಚಾಗಿ ಸಂಬರಗಿ-ಆಜೂರ ಸೇತುವೆ ಮೇಲೆ ನೀರು ಹರಿಯುತ್ತಿದ್ದು ಅಂಕಲಗಿ ತೋಟದ ಮಕ್ಕಳು ಶಾಲೆಗೆ ತೆರೆಳಲು ಜೀವ ಕೈಯಲ್ಲಿ ಹಿಡಿದು ಸೇತುವೆ ದಾಟುವ ಸ್ಥಿತಿ ನಿರ್ಮಾಣವಾಗಿದೆ.

ಕಳೆದ ಎರಡು ತಿಂಗಳಿಂದ ಅಗ್ರಾಣಿ ನದಿ ತೀರದ ಸಾಂಗಲಿ ಸಾತಾರಾ ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿದ್ದು ಅಗ್ರಾಣಿ ನದಿ ಉಕ್ಕಿ ಹರಿಯುತ್ತಿದೆ. ಸದ್ಯ ಸಂಬರಗಿ-ಆಜೂರ ಸೇತುವೆ ಮೇಲೆ ಹರಿಯುತ್ತಿರುವ ನೀರಿನಲ್ಲೇ ಮಕ್ಕಳು ತೆರಳುವಂತಾಗಿದೆ. ಸದ್ಯಕ್ಕೆ ಸಂಬರಗಿ-ಆಜೂರ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸಿ ಸೇತುವೆ ಮೇಲೆತ್ತರಿಸಲು ಕ್ರಮ ವಹಿಸುಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net