ಭಾರತ್ ಬಂದ್‌ಗೆ ಮಿಶ್ರಪ್ರತಿಕ್ರಿಯೆ ; ಕೇಂದ್ರ ಸರ್ಕಾರದ ವಿರುದ್ಧ ರೈತರ ಹೋರಾಟ ; ಬೆಲೆ ಏರಿಕೆಗೆ ವಿರೋಧ

27TMK_Bharath_Bandh 1
Published on

ತುಮಕೂರು : ನಗರದಲ್ಲಿ ಸೋಮವಾರ ಬೆಳಗ್ಗೆಯೇ ಕಿಸಾನ್ ಸಂಯುಕ್ತ ಕರ್ನಾಟಕ, ರೈತ ಸಂ ಮತ್ತು ಹಸಿರು ಸೇನೆ ಸೇರಿ ವಿವಿಧ ರೈತ ಸಂಟನೆಗಳು, ಕಾರ್ಮಿಕ ಸಂಟನೆಗಳು, ಕನ್ನಡ ಪರ ಸಂಟನೆಗಳ ಕಾರ್ಯಕರ್ತರು ರಸ್ತೆಗಿಳಿದು ಕೇಂದ್ರ ಸರ್ಕಾರದ ವಿರುದ್ಧ ೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ನಾಲ್ಕು ದಿಕ್ಕುಗಳಾದ ಮರಳೂರು ಕೆರೆಯ ರಿಂಗ್ ರಸ್ತೆ ಹಾಗೂ ಗುಬ್ಬಿಗೇಟ್ ರಿಂಗ್ ರಸ್ತೆಯಿಂದ ಕೆಆರ್‌ಆರ್‌ಎಸ್ ಎ.ಗೊವಿಂದರಾಜು ಮತ್ತು ಆನಂದ ಪಟೇಲ್ ಹಾಗೂ ಕಟ್ಟಡ ಕಾರ್ಮಿಕ ಸಂಟನೆಯ ಶಂಕರಪ್ಪ, ಪ್ರಗತಿಪರ ಸಂಟನೆಯ ತಾಜ್‌ಉದ್ದೀನ್ ಮುಂದಾಳತ್ವದಲ್ಲಿ ಮತ್ತು ಶಿರಾ ಗೇಟ್ ವೃತ್ತದಿಂದ ಪ್ರಾಂತ್ಯ ರೈತ ಸಂದ ಕರಿಬಸವಯ್ಯ, ಕಾರ್ಮಿಕ ಮುಖಂಡ ಗಿರೀಶ್, ಲೋಕೇಶ್, ಷಣ್ಮುಖಪ್ಪ, ಖಲೀಲ್, ಬಟವಾಡಿ ವೃತ್ತದಿಂದ ಆರ್.ಕೆ.ಎಸ್.ನ ಸ್ವಾಮಿ ಮತ್ತು ಎಐಕೆಎಸ್ ಕಂಬೇಗೌಡ ಹಾಗೂ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯ ಎ.ನರಸಿಂಹಮೂರ್ತಿ, ಕಾರ್ಮಿಕ ಸಂಟನೆಯ ಮಂಜುಳಾ ನೇತೃತ್ವದ ತಂಡ, ರೈತರು, ಕಾರ್ಮಿಕರು ಸವಾವೇಶಗೊಂಡು ಪ್ರತಿಭಟನಾ ಮೆರವಣಿಗೆ ಮೂಲಕ ನಗರದ ಬಿಜಿಎಸ್ ವೃತ್ತಕ್ಕೆ ಆಗಮಿಸಿ ವಾನವ ಸರಪಳಿ ನಿರ್ಮಿಸಿದರು.

ನಂತರ ಬಿ.ಎಚ್.ರಸ್ತೆ ಮೂಲಕ ಜೆ.ಸಿ.ರಸ್ತೆ, ಮಂಡಿಪೇಟೆ, ಅಶೋಕ ರಸ್ತೆ, ಎಂ.ಜಿ.ರಸ್ತೆಯಲ್ಲಿ ಸಾಗಿ ಮತ್ತೆ ಬಿಜಿಎಸ್ ವೃತ್ತದಲ್ಲಿ ಪ್ರತಿಭಟನಾಕಾರರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ೋಷಣೆ ಕೂಗಿದರು.

ರಾಜ್ಯ ರೈತ ಸಂದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ವಾತನಾಡಿ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ, ಜನ ವಿರೋಧಿ, ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು. ಲಜ್ಜೆಗೆಟ್ಟ ಸರ್ಕಾರ ದೇಶದ 70 ಭಾಗ ಇರುವ ರೈತರನ್ನು, ಭೂಮಿಯನ್ನು ನಾಶ ವಾಡುತ್ತಿದೆ. ರೈತರು ಪ್ರತಿಭಟನೆ ವಾಡುತ್ತಿದ್ದರೂ ಕರೆದು ವಾತನಾಡಿ ಸಮಸ್ಯೆ ಆಲಿಸುವುದನ್ನು ಬಿಟ್ಟು ಹೋರಾಟ ಹತ್ತಿಕ್ಕುವ ಕೆಲಸ ವಾಡುತ್ತಿದೆ ಎಂದರು.

ಪ್ರಗತಿಪರ ಚಿಂತಕ ಸಿ.ಯತಿರಾಜು, ಕಾರ್ಮಿಕ ಮುಖಂಡ ಸೈಯದ್ ಮುಜೀಬ್ ವಾತನಾಡಿದರು. ಜೆಸಿಟಿಯು ಸಂಟನೆಗಳಾದ ಎಐಟಿಯುಸಿ, ಸಿಐಟಿಯು ಸೇರಿದಂತೆ ಕಾರ್ಮಿಕ ಸಂಟನೆಗಳು ರೈತರ ಹೋರಾಟಕ್ಕೆ ಕೈ ಜೋಡಿಸಿದ್ದವು.

ಎಂದಿನಂತಿದ್ದ ಜನಜೀವನ :? ಬಸ್, ಆಟೋ ರಿಕ್ಷಾ, ಲಾರಿ, ಕಾರುಗಳು ಎಂದಿನಂತೆ ಸಂಚರಿಸಿದವು, ಹೋಟೆಲ್ ಸೇರಿ ಎಲ್ಲ ರೀತಿಯ ಅಂಗಡಿ ಮುಂಗಟ್ಟುಗಳು ಬಾಗಿಲು ತೆರೆದು ವ್ಯಾಪಾರ ವಹಿವಾಟು ನಡೆಸಿದವು. ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು, ಖಾಸಗಿ ಆಸ್ಪತ್ರೆಗಳು, ಶಾಲಾಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಿದವು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಬಸವರಾಜು, ರವೀಶ್, ಉಮೇಶ್, ಕಾರ್ಮಿಕ ಮುಖಂಡರಾದ ಎನ್.ಕೆ. ಸುಬ್ರಹ್ಮಣ್ಯ, ಗಿರೀಶ್, ಅಜ್ಜಪ್ಪ, ಚಿರತೆ ಚಿಕ್ಕಣ್ಣ, ಪಿ.ಎನ್. ರಾಮಯ್ಯ, ನರಸಿಂಹಮೂರ್ತಿ, ಪಂಡಿತ್ ಜವಹರ್ ಸೇರಿ ವಿವಿಧ 47 ಸಂಟನೆಗಳ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net