ಭಾರತ್ ಜೋಡೋದಂತಹ ಯಾತ್ರೆ ಬಿಜೆಪಿಯಿಂದ ಅಸಾಧ್ಯ: ಡಿಕೆಶಿ

WEBBBBB
Published on

ತ್ಯಾಗರ್ತಿ: ಭಾರತ್ ಜೋಡೋದಂತಹ ಯಾತ್ರೆಯನ್ನು ಮಾಡುವ ಸಾಹಸ ಬಿಜೆಪಿಯಿಂದ ಅಸಾಧ್ಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು. ಹುತ್ತಾದಿಂಬ ಗ್ರಾಮದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಿಜೆಪಿಯರಿಗೆ ಅಸೂಯೆ ಜಾಸ್ತಿ. ರಾಜ್ಯದಲ್ಲಿ ಭಾರತ್ ಜೋಡೋ ಪಾದಯಾತ್ರೆಯ ಯಶಸ್ಸು ಬಿಜೆಪಿಯಲ್ಲಿ ಅಸೂಯೆಗೆ ಕಾರಣವಾಗಿದೆ. ಅವರ ಅಸೂಯೆಗೆ ಯಾವುದೇ ಮದ್ದು ಇಲ್ಲ ಎಂದು ವ್ಯಂಗ್ಯವಾಡಿದರು.

ಬಿಜೆಪಿ ನಾಯಕರಿಗೆ ಕಷ್ಟದ ಅರಿವಿಲ್ಲ. ದೇಶಕ್ಕಾಗಿ ಪ್ರಾಣ ಕೊಟ್ಟಿಲ್ಲ, ಸ್ವಾತಂತ್ರ್ಯ ತಂದು ಕೊಟ್ಟಿಲ್ಲ, ಬಡವರಿಗೆ ಜಮೀನು, ಮನೆ ಕೊಟ್ಟಿಲ್ಲ. ಸಂವಿಧಾನ ಸಹ ರಚನೆ ಮಾಡಿಲ್ಲ. ಕಾಂಗ್ರೆಸ್ ರೂಪಿಸಿದ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಅಧಿಕಾರ ಮಾಡುತ್ತಿದೆ. ಬಿಜೆಪಿ ಟೀಕೆಗಳಿಗೆ ತಲೆ ಕೆಡಿಸಿಕೊಳ್ಳದೆ ನಮ್ಮ ಕೆಲಸವನ್ನು ನಾವು ಮಾಡುತ್ತೇವೆ ಎಂದರು.

ಖರ್ಗೆ ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರಿಗೆ ಭಯ ಹುಟ್ಟಿಸಿದೆ ಎಂದು ನಳೀನ್ ಕುಮಾರ್ ಕಟೀಲ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನಳೀನ್ ಕುಮಾರ್ ಅವರಿಗೆ ಶುಭವಾಗಲಿ, ಅವರು ಏನು ಬೇಕಾದರೂ ಹೇಳಿಕೊಂಡು ಸಂತೋಷವಾಗಿರಲಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net