ಭಾರತೀಯರ ಭವಿಷ್ಯಕ್ಕಾಗಿ ದುಡಿಯುತ್ತಿರುವ ಪ್ರಧಾನಿ

10 ckm 1
ಚಿಕ್ಕಮಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ೧೧ ವರ್ಷಗಳ ಅಭಿವೃದ್ಧಿ ಕುರಿತ ವಿಕಸಿತ ಭಾರತ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಭಾರತಾಂಭೆಗೆ ಪುಷ್ಪಾರ್ಚನೆ ಮಾಡುವ ಮೂಲಕ ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಉದ್ಘಾಟಿಸಿದರು. ಎಂ.ಆರ್.ದೇವರಾಜ ಶೆಟ್ಟಿ, ಎಚ್.ಸಿ.ಕಲ್ಮರುಡಪ್ಪ, ಈಶ್ವರಹಳ್ಳಿ ಮಹೇಶ್, ಮಧುಕುಮಾರ್ ರಾಜ್ ಅರಸ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಸ್ವಾರ್ಥಕ್ಕೆ ಆಸೆಪಡದೇ, ನಿಸ್ವಾರ್ಥದಿಂದ ಭಾರತೀಯರ ಉಜ್ವಲ ಭವಿಷ್ಯಕ್ಕೆ ಹಗಲಿರುಳೆನ್ನದೇ ನಿರಂತರ ದುಡಿಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಆಡಳಿತ ಇಡಿ ವಿಶ್ವವೇ ಕಂಡ ಅಪರೂಪದ ಪ್ರಜಾಪ್ರಭುತ್ವದ ಆಳ್ವಿಕೆಯಾಗಿದೆ ಎಂದು ಉಪಸಭಾಪತಿ ಎಂ.ಕೆ.ಪ್ರಾಣೇಶ್ ಬಣ್ಣಿಸಿದರು.

ನಗರದ ಜಿಲ್ಲಾ ಬಿಜೆಪಿ ಪಾಂಚಜನ್ಯ ಕಚೇರಿಯಲ್ಲಿ ಮಂಗಳವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ೧೧ ವರ್ಷಗಳ ಅಭಿವೃದ್ಧಿ ಕುರಿತ ವಿಕಸಿತ ಭಾರತ ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಕೇಂದ್ರ ಸರ್ಕಾರ ಬಡವರು, ದೀನದಲಿತರ ಏಳಿಗೆಗೆ ಹಲವು ಯೋಜನೆಗಳನ್ನು ಅನುಷ್ಟಾನಕ್ಕೆ ತಂದು ದಶಕವನ್ನು ಪೂರೈಸಿ ಸಾಧನೆ ಮಾಡಿದೆ. ಈ ಸಂದರ್ಭದಲ್ಲಿ ಸದಾಕಾಲ ರಾಷ್ಟç ಹಿತಕ್ಕಾಗಿ ದುಡಿಯುತ್ತಿರುವ ಪ್ರಧಾನಿ ಮಂತ್ರಿ ಭಾರತಾಂಬೆಯ ಖ್ಯಾತಿಗೆ ಚ್ಯುತಿ ಬಾರದಂತೆ ಕರ್ತವ್ಯ ನಿರ್ವಹಿಸುತ್ತಿರುವ ವಿಚಾರವನ್ನು ಎಲ್ಲೆಡೆ ಪಸರಿಸಬೇಕಿದೆ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಹಿಂದಿನ ಪ್ರಧಾನಿ ಆಟಲ್ ಬಿಹಾರಿ ವಾಜಪೇಯಿ ಅವರ ಅಭಿವೃದ್ಧಿ ಕಾರ್ಯಗಳು ತಳಮಟ್ಟದಿಂದ ಪ್ರಚಾರಗೊಳ್ಳದ ಕಾರಣ ಅಂದು ಅಧಿಕಾರದಿಂದ ಕೆಳಗಿಳಿಯಬೇಕಾಯಿತು. ಆದರೀಗ ಮೋದಿ ಸರ್ಕಾರದ ಯೋಜನೆಗಳ ಬಗ್ಗೆ ಜನಸಾಮಾನ್ಯರಿಗೆ ಅರಿವಿದೆ. ಇದರ ನಡುವೆಯೂ ವಿಪಕ್ಷಗಳ ಸುಳ್ಳಿನ ಮಾಹಿತಿಗಳನ್ನು ಹೊರಗೆಳೆದು ಕೇಂದ್ರ ಸರ್ಕಾರದ ಸಾಧನೆಯ ಸತ್ಯಾಸತ್ಯತೆಯನ್ನು ಕಾರ್ಯಕರ್ತರು ಜನಸಾಮಾನ್ಯರಿಗೆ ಮನದಟ್ಟು ಮಾಡಬೇಕಿದೆ ಎಂದು ತಿಳಿಸಿದರು.

ರಾಷ್ಟçದಲ್ಲೇ ಬಿಜೆಪಿ ಅತ್ಯಂತ ಹೆಚ್ಚು ಸದಸ್ಯತ್ವ ಹೊಂದಿರುವ ದೊಡ್ಡ ರಾಜಕೀಯ ಪಕ್ಷವಾಗಿದೆ. ಹೀಗಾಗಿ ಕೇಂದ್ರದಿAದ ಕೈಗೊಂಡಿರುವ ಅಭಿವೃದ್ಧಿ ಯೋಜನೆ, ಪ್ರವಾಸಿಗರ ಸಾವಿಗೆ ಆಪರೇಷನ್ ಸಿಂಧೂರ್ ಮೂಲಕ ತಕ್ಕ ಉತ್ತರದ ಪ್ರತೀಕಾರ, ಸರ್ಜಿಕಲ್ ಸ್ಟೆçÊಕ್ ಯಶಸ್ವಿ ಸೇರಿದಂತೆ ಜನಪರ ಆಡಳಿತದ ಮಾಹಿತಿಗಳನ್ನು ತಿಳಿಸುವ ಕೆಲಸವಾಗಬೇಕು ಎಂದು ಹೇಳಿದರು.

ದೇಶದಲ್ಲಿ ಕಾಂಗ್ರೆಸ್ ಸ್ವಾತಂತ್ರÈ ಪೂರ್ವದಿಂದಲೂ ಸುಳ್ಳನ್ನೇ ಸತ್ಯವೆಂದು ಪ್ರತಿಪಾದಿಸುತ್ತಾ ಬರುತ್ತಿದೆ. ತುರ್ತು ಪರಿಸ್ಥಿತಿ ಹೇರಿಕೆಯಿಂದ ಜನತೆಗೆ ದಿಕ್ಕು ತಪ್ಪಿಸಿದೆ. ಇಂದಿಗೂ ಆ ವಂಶದ ಕುಡಿ ರಾಹುಲ್‌ಗಾಂಧಿ ರಾಷ್ಟç ಹಾಗೂ ಪ್ರಧಾನಿಗಳ ವಿರುದ್ಧ ಸುಖಾಸುಮ್ಮನೆ ಹೇಳೀಕೆ ನೀಡಿ ಕೊನೆಗೆ ಆತನೇ ಪೇಚಾಡುವಂಥ ಸ್ಥಿತಿ ನಿರ್ಮಿಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ಪ್ರಪಂಚದಲ್ಲಿ ಭಾರತ ರಾಷ್ಟç ಪ್ರಸ್ತುತ ಆರ್ಥಿಕತೆಯಲ್ಲಿ ಐದನೇ ಸ್ಥಾನದ ಗರಿಯಲ್ಲಿದ್ದು, ಮೂರನೇ ಸ್ಥಾನಕ್ಕೆ ಕೊಂಡೊಯ್ಯುವ ಶಕ್ತಿ ಕಾರ್ಯಕರ್ತರು ಮತ್ತು ಜನತೆಯಿಂದಾಗಬೇಕು. ಹೀಗಾಗಿ ಕೇಂದ್ರದ ಸಂಪೂರ್ಣ ಸಾಧನೆಯ ವರದಿಯನ್ನು ಪ್ರತಿ ಬೂತ್‌ನಲ್ಲಿ ಪ್ರಚಾರಗೊಂಡಾಗ ಭಾರತ ಮೂರನೇ ಅತಿದೊಡ್ಡ ರಾಷ್ಟçವಾಗಿ ಹೊರಹೊಮ್ಮಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಪಕ್ಷಗಳ ಬೇಡದ ವಿಷಯಗಳಿಗೆ ಕಾರ್ಯಕರ್ತರು ಕಿವಿಗೊಡದೇ ಸಕಾರಾತ್ಮಕವಾಗಿ ಚಿಂತಿಸುವ ಕೆಲಸ ಮಾಡಬೇಕು. ಕೇಂದ್ರ ಸರ್ಕಾರದ ಸಾಧನೆಯನ್ನು ಇಂದು ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ಸಮಯವಾಗಿದೆ. ಸಾಮಾನ್ಯವಾಗಿ ರಾಜಕೀಯ ಆಳ್ವಿಕೆ ಕೇಳಿz್ದೆÃವೆ. ಆದರೆ ಮೋದಿ ಸರ್ಕಾರದ ವಿಭಿನ್ನ, ವಿಶೇಷ ಆಳ್ವಿಕೆ ಬೇರೆ ಯಾವ ಪಕ್ಷದಲ್ಲೂ ಕೇಳಲು ಸಾಧ್ಯವಿಲ್ಲ ಎಂದು ತಿಳಿಸಿದರು.

ವಿಕಸಿತ ಭಾರತ ಕಾರ್ಯಾಗಾರದ ಸಂಚಾಲಕ ಈಶ್ವರಹಳ್ಳಿ ಮಹೇಶ್ ಮಾತನಾಡಿ, ಬಿಜೆಪಿ ರಾಷ್ಟಿçÃಯ ಅಧ್ಯಕ್ಷರ ಆದೇಶದಂತೆ ಜಿಲ್ಲೆಯಾದ್ಯಂತ ೧೧ನೇ ವರ್ಷದ ಕೇಂದ್ರ ಸರ್ಕಾರದ ಸಾಧನೆ ಕುರಿತು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಧನೆ ಮಾಹಿತಿ ತಿಳಿಸುವಂತಾಗಲೂ ಪ್ರತಿಯೊಬ್ಬ ಕಾರ್ಯಕರ್ತರೂ ಕಾರ್ಯಪ್ರವೃತ್ತರಾಗಿz್ದÉÃವೆ ಎಂದರು.

ಕಾರ್ಯಕರ್ತರು ಹುರುಪಿನಿಂದ ಕೇಂದ್ರದ ವಿಶ್ವಕರ್ಮ, ಗ್ರಾಮ್‌ಸಡಕ್, ಪಿಎಂ ಆವಾಜ್, ಮಹಿಳಾ ಸಬಲೀಕರಣದ ಯೋಜನೆಗಳ ವಿವರಗಳನ್ನು ಪ್ರತಿ ಬೂತ್‌ಗಳಲ್ಲಿ ಹಂಚಿಕೊಳ್ಳಲು ಜೂನ್ ೨೫ರಿಂದ ಜುಲೈ ತಿಂಗಳವರೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಲ್ಲರೂ ಒಮ್ಮತ ಹಾಗೂ ಸಹಕಾರದಿಂದ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ, ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಚ್.ಸಿ.ಕಲ್ಮರುಡಪ್ಪ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಬೆಳವಾಡಿ ರವೀಂದ್ರ, ಪುಣ್ಯಪಾಲ್, ಡಾ. ನರೇಂದ್ರ, ರಾಜ್ಯ ಬಿಜೆಪಿ ಎಸ್ಸಿ ಮೋರ್ಚಾ ಕಾರ್ಯದರ್ಶಿ ಸೀತಾರಾಭರಣ್ಯ, ಕಾರ್ಯಗಾರದ ಸಹ ಸಂಚಾಲಕ ಶರತ್, ನಗರ ಮಂಡಲ ನಿಕಟಪೂರ್ವ ಅಧ್ಯಕ್ಷ ಮಧುಕುಮಾರ ರಾಜ್ ಅರಸ್, ರೈತ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಮುಗುಳುವಳ್ಳಿ ದಿನೇಶ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net