ಭಾರತೀಯ ಸೇನೆ ಗುಂಡಿನಿಂದಲೇ ಉತ್ತರ ನೀಡಲಿ

25KUDLIGI3
Published on

ಕೂಡ್ಲಿಗಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಾರತೀಯರ ಮೇಲೆ ಉಗ್ರರು ನಡೆಸಿದ ನರಮೇಧ ಖಂಡಿಸುವುದರೊಂದಿಗೆ ಕೇಂದ್ರ ಸರ್ಕಾರ ಉಗ್ರರ ದಮನ ಮಾಡಬೇಕು ಎಂದು ಒತ್ತಾಯಿಸಿ ಪ್ರಧಾನಿಗೆ ಬರೆದ ಮನವಿಯನ್ನು ತಹಸೀಲ್ದಾರ್ ವಿ.ಕೆ.ನೇತ್ರಾವತಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಶುಕ್ರವಾರ ಸಲ್ಲಿಸಲಾಯಿತು.

ಪ್ರಧಾನ ಕಾರ್ಯದರ್ಶಿ ದೇವರಮನೆ ಮಹೇಶ್ ಮಾತನಾಡಿ, ಭಯೋತ್ಪಾದಕ ಕೃತ್ಯಗಳನ್ನು ಮಾಡುವ ಸಂಘಟನೆಗಳನ್ನು ಕೇಂದ್ರ ಸರ್ಕಾರ ದಮನ ಮಾಡಬೇಕು. ಕೃತ್ಯದ ಹಿಂದೆ ಪಾಕಿಸ್ತಾನ ಹಾಗೂ ಚೀನಾದ ಕುತಂತ್ರವೂ ಅಡಗಿದೆ. ಈ ಹೇಡಿ ಕೃತ್ಯವನ್ನು ಎಸಗಿರುವ ಉಗ್ರರು ಹಾಗೂ ಸಹಕರಿಸಿದ ಸ್ಥಳೀಯರಿಗೆ ಭಾರತೀಯ ಸೇನೆ ಗುಂಡಿನಿಂದಲೇ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾಧ್ಯಕ್ಷ ಬಣಕಾರ ಬಸವರಾಜ, ತಾಲೂಕು ಅಧ್ಯಕ್ಷ ಬಾಣದ ಮಾರುತಿ, ಹೊಸಪೇಟೆ ತಾಲೂಕು ಅಧ್ಯಕ್ಷ ಬಿ.ಶೇಕಪ್ಪ, ಸಂಡೂರು ತಾಲೂಕು ಕಾರ್ಯದರ್ಶಿ ವಿ.ಎಸ್.ಶಂಕರ್, ಎಂ.ಅಂಜಿನಪ್ಪ, ನಂದಿ ಜಂಬಣ್ಣ, ಎಂ.ನಾಗರಾಜ, ಬಿ.ಮೂಕಪ್ಪ, ಸಣ್ಣ ಗಾಳೆಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net