ಭಾರತೀಯ ಸನಾತನ ಸಂಸ್ಕೃತಿ ಹಾಗೂ ಮೌಲ್ಯಗಳನ್ನು ಎತ್ತಿಹಿಡಿಯುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ :ಎನ್.ಆರ್.ಸಂತೋಷ್

ಭಾರತೀಯ ಸನಾತನ ಸಂಸ್ಕೃತಿ ಹಾಗೂ ಮೌಲ್ಯಗಳನ್ನು ಎತ್ತಿಹಿಡಿಯುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ :ಎನ್.ಆರ್.ಸಂತೋಷ್
Published on

ಅರಸೀಕೆರೆ: ಆಧುನಿಕತೆಯ ಭರಾಟೆಯ ನಡುವೆಯೂ ಭಾರತೀಯ ಸನಾತನ ಸಂಸ್ಕೃತಿ ಹಾಗೂ ಮೌಲ್ಯಗಳನ್ನು ಎತ್ತಿಹಿಡಿಯುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಬಿಜೆಪಿ ಮುಖಂಡ ಎನ್.ಆರ್.ಸಂತೋಷ್ ಹೇಳಿದರು. ತಾಲೂಕಿನ ಶಶಿವಾಳ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಗಂಗಾ ಪೂಜೆ,ನೂರೊಂದಡೆ ಸೇವೆ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಾವಿ ಕಟ್ಟೆಗೆ ಪೂಜೆ ಸಲ್ಲಿಸಿ ಮಾತನಾಡಿದರು.

ಗ್ರಾಮೀಣ ಜನರ ಏಳಿಗೆ ಮನಗಂಡಿದ್ದ ಹಿರಿಯರು ಕೆರೆ,ಕಟ್ಟೆ, ಬಾವಿಗಳನ್ನು ನಿರ್ಮಿಸಿದ್ದರು.

ಬದಲಾದ ವಿದ್ಯಮಾನದಲ್ಲಿ ಕೊಳವೆ ಬಾವಿಗಳ ಆರ್ಭಟದಲ್ಲಿ ಕಲ್ಯಾಣಿಗಳು ರಾಟೆ ಬಾವಿಗಳು ಅಳಿವಿನ ಅಂಚಿಗೆ ಬಂದು ನಿಂತಿವೆ.ಬದಲಾವಣೆ ಜಗದ ನಿಯಮ ಎನ್ನುವಂತೆ ಪ್ರಸಕ್ತ ವರ್ಷ ದೈವ ಕೃಪೆಯಿಂದ ತಾಲೂಕಿನ ಬಹುತೇಕ ಕೆರೆ,ಕಟ್ಟೆಗಳು ಭರ್ತಿಯಾಗಿದ್ದು ಕೋಡಿ ಬಿದ್ದಿದ್ದು 14 ವರ್ಷಗಳ ಬರ ದೂರವಾಗಿದೆ. ಇದೀಗ ಬಹುತೇಕ ಹಳ್ಳಿಗಳ ಬಾವಿಗಳಲ್ಲಿ ಅಂತರ್ಜಲ ಹೆಚ್ಚಿದ್ದು ಶುಭ ಸೂಚಕವಾಗಿದೆ.ನಗರ ಹಾಗೂ ಗ್ರಾಮೀಣ ಜ, ಜೀವನದ ಅವಿಭಾಜ್ಯ ಅಂಗವಾಗಿರುವ ಸಾಂಸ್ಕೃತಿಕ ಪದ್ದತಿ,ಆಚಾರ, ವಿಚಾರ, ರೀತಿ ,ರಿವಾಜುಗಳನ್ನು ಉಳಿಸಿ, ಬೆಳಸಿ ಮುಂದಿನ ಪೀಳಿಗೆಗೆ ಪರಿಚಸುವ ಕೆಲಸ ನಮ್ಮೆಲ್ಲರ ಮೊದಲ ಆದ್ಯತೆಯಾಗಬೇಕು ಎಂದು ಕಿವಿಮಾತು ಹೇಳಿದರು.

ಮುಖಂಡರಾದ ರಾಂಪುರ ಶೇಖರಪ್ಪ,ಗಂಗಾಧರ್,ಮಲ್ಲಿಕಾರ್ಜುನ್ ಸ್ವಾಮಿ, ಜಯಣ್ಣ,ಗ್ರಾಪಂ ಸದಸ್ಯ ಚನ್ನಪ್ಪ,ಈಶ್ವರಪ್ಪ ಇನ್ನಿತರರಿದ್ದರು.ಗಂಗಾ ಪೂಜೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರಿಗೆ ಪತ್ನಿ ಜಾಹ್ನವಿಯವರೊಂದಿಗೆ ಸೀರೆ, ಕಣ,ಬಳೆ ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net