

ಯಾದಗಿರಿ: ಭಾರತೀಯ ಮೌಲ್ಯ, ಸಂಸ್ಕೃತಿ ಮತ್ತು ಪರಂಪರೆ ಯುವ ಪೀಳಿಗೆಯಲ್ಲಿ ಗಟ್ಟಿಗೊಂಡು ಪ್ರಕೃತಿ ಕೇಂದ್ರಿತ ಅಭಿವೃದ್ಧಿಗೆ ಒತ್ತು ನೀಡುವ ಅಗತ್ಯವಿದೆ ಎಂದು ವಿಕಾಸ ಅಕಾಡೆಮಿ ಜಿ¯್ಲÁ ಸಂಚಾಲಕ ಎಚ್.ಸಿ. ಪಾಟೀಲ್ ಹೇಳಿದರು.
ನಗರದ ಆರ್.ವಿ. ಶಿP್ಷÀಣ ಸಂಸ್ಥೆಯಲ್ಲಿ ಭಾನುವಾರ ಕೊತ್ತಲ ಬಸವೇಶ್ವರ ಭಾರತೀಯ ಶಿP್ಷÀಣ ಸಮಿತಿಯ ಸ್ವರ್ಣ ಜಯಂತಿ ಹಾಗೂ 7ನೇ ಭಾರತೀಯ ಸಂಸ್ಕೃತಿ ಉತ್ಸವ ನಿಮಿತ್ತ ಏರ್ಪಡಿಸಿದ್ದ ತಾಲೂಕು ಮಟ್ಟದ ಪ್ರತಿಭಾ ಸ್ಪರ್ಧೆಗಳ ಕಾರ್ಯಕ್ರಮ ಉದ್ಘಾಟಿಸಿದ ಅವರು, ಜಲ, ಜಮೀನು, ಅರಣ್ಯ, ಪಶು-ಪಕ್ಷಿ ಮತ್ತು ಪ್ರಾಣಿ ಸಂಪತ್ತು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸುವುದು ಪ್ರe್ಞÁವಂತ ನಾಗರಿಕರಾದ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ನಿಸರ್ಗದ ಜತೆ ಸಾಮರಸ್ಯದಿಂದ ಬದುಕುವ ವಿಚಾರವನ್ನು ಸಾಮಾನ್ಯನಿಗೆ ಪರಿಚಯಿಸುವ ನಿಟ್ಟಿನಲ್ಲಿ 2025ರ ಜ.29ರಿಂದ ಭಾರತೀಯ ಸಂಸ್ಕೃತಿ ಉತ್ಸವ ಹಮ್ಮಿಕೊಳ್ಳಲಾಗಿದ್ದು, ನಮ್ಮ ಭಾಗದ ಮಕ್ಕಳು, ಶಿP್ಷÀಕರು, ರೈತರು ಸೇರಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕೋರಿದರು. ತಾಲೂಕು ಪಂಚಾಯಿತಿ ಯೋಜನಾಧಿಕಾರಿ ಶಶಿಧರ ಹಿರೇಮಠ ಮಾತನಾಡಿ, ಬಸವರಾಜ ಪಾಟೀಲï ಸೇಡಂ ಎರಡು ದಶಕಗಳಿಂದ ನಮ್ಮ ಭಾಗದ ಪ್ರತಿ ಗ್ರಾಮ, ಶಾಲೆ ಮತ್ತು ರೈತರ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಮಾದರಿಯಾಗಿದೆ ಎಂದರು.
ಅಕಾಡೆಮಿ ಜಿ¯್ಲÁ ಸಹ ಸಂಯೋಜಕ ಭೀಮಣ್ಣ ಬಿ.ವಡವಟ್ ಪ್ರಾಸ್ತಾವಿಕ ಮಾತನಾಡಿದರು. ಹಿರಿಯ ಸಂಚಾಲಕ ಎಸ್.ಎನ್. ಮಣ್ಣೂರ, ಶಿP್ಷÀಕರಾದ ಮಹಾದೇವಪ್ಪ, ರಾಚಯ್ಯ ಸ್ವಾಮಿ ಬಾಡಿಯಾಲ, ಯಲ್ಲಪ್ಪ, ಮಲ್ಲಿಕಾರ್ಜುನ, ಮಹೇಶ, ರಾಜು ದೊರೆ, ಭೀಮಾಶಂಕರ, ಮಲೇಶ, ಶಂಕರ ಇತರರಿದ್ದರು.
ವಿಜೇತರಿಗೆ ಪ್ರಮಾಣಪತ್ರ: ಯಾದಗಿರಿ ತಾಲೂಕಿನ 17 ಪ್ರಾಥಮಿಕ, 12 ಪ್ರೌಢಶಾಲೆಯ 422 ವಿದ್ಯಾರ್ಥಿಗಳು, 56 ಭಜನೆ ಕಲಾವಿದರು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ವಿಜೇತರಿಗೆ ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆ ಮತ್ತು ನಗದು ಬಹುಮಾನ ನೀಡಲಾಯಿತು. 56 ಜನರು ಜಿ¯್ಲÁ ಮಟ್ಟಕ್ಕೆ ಆಯ್ಕೆಯಾಗಿz್ದÁರೆ.