

ಹಾಸನ: ಭಾರತೀಯ ಸಂಸ್ಕೃತಿ ಬೇರುಗಳನ್ನು ಉಳಿಸಿ ಬೆಳಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಪುರಸ್ಕರಾದ ಗ್ಯಾರಂಟಿ ರಾಮಣ್ಣ ತಿಳಿಸಿದರು.
ನಿರಂತರ ಸಾಂಸ್ಕೃತಿಕ ಮತ್ತು ಕ್ರೀಡಾ ಯುವಕ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸರ್ಕಾರಿ ವಿಜ್ಞಾನ ಕಾಲೇಜ್ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಜೋಡಿ ಕೃಷ್ಣಾಪುರದಲ್ಲಿ ದೇವಸ್ಥಾನ ಮುಂಭಾಗ ಏರ್ಪಡಿಸಿದ ಜಾನಪದ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಸ್ಕೃತಿ ಬೆಳವಣಿಗೆ ಯುವ ಜನತೆ ಮುಂದಾಗಬೇಕು ಇಂದಿನ ಆಧುನಿ ಕ ವಿದ್ಯಾಮಾನಗಳ ಹಾವಳಿಯಿಂದ ಜಾನಪದಕ್ಕೆ ಸ್ವಲ್ಪ ಹಿನ್ನಡೆಯಾಗುತ್ತಿತ್ತು ಎಂದರು.
ಹಳ್ಳಿಯಲ್ಲಿ ಹುಟ್ಟಿದ ಜಾನಪದ ಕಲೆ ಸಾಹಿತ್ಯ ಇವತ್ತು ಹಳ್ಳಿಯವರಿಗೆ ಬೇಡವಾಗುತ್ತಿರುವುದೆಂದು ವಿಷಾದಿ ನಿಯಾ ಜಾನಪದ ಕಲೆಗೆ ಇರುವ ಶಕ್ತಿ ಬೇರೆ ಯಾವ ಕಲೆಗೂ ಕಾಣಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.
ಜಾನಪದ ಕಲೆ ಶ್ರೀಮಂತ ಕಲೆ, ಆದರೆ ಕಲಾವಿದರು ಮಾತ್ರ ಬಡವರು ಜಾನಪದ ಮನರಂಜನೆಗಾಗಿ ಕಲೆಯು ಕೇವಲ ಮನರಂಜನಗಾಗಿ ಇರುವಂತದ್ದ, ಅಲ್ಲ ಜಾನಪದದಲ್ಲಿ ಶಿಕ್ಷಣ ನೀತಿ ಇದೆ ಇದೇ ಜೀವನದಲ್ಲಿ ಮೌಲ್ಯಗಳಿಗೆ ಆದ್ದರಿಂದ ಜಾನಪದ ಕಲೆ ಉಳಿಯಬೇಕಾದರೆ ಕಲಾವಿದರು ಉಳಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಎಸ್.ಎಚ್.ಗಂಗೆಗೌಡ ಮಾತನಾಡಿದ ಅವರು, ಜಾನಪದ ನಮ್ಮ ಎಲ್ಲಾ ಸಂಸ್ಕೃತಿಗಳ ತಾಯಿಬೇರು ಶತಮಾನಗಳಿಂದ ನಮಗೆ ಮನರಂಜನೆ ಜೊತೆಗೆ ಜೀವನ ಮೌಲ್ಯ ಬದುಕು ಆದರ್ಶಗಳನ್ನು ಅಳವಡಿಸಿಕೊಳ್ಳುಬೇಕು. ಆಧುನಿಕ ಜೀವನ ಶೈಲಿಯಿಂದ ಜಾನಪದ ಸಂಸ್ಕೃತಿ ಮಾಯವಾಗುತ್ತಿರುವುದು ವಿಷಾದನೀಯ ಎಂದರು.
ಕಾರ್ಯಕ್ರಮದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ಬಿ.ಟಿ. ಮಾನವ , ಹಿರಿಯ ಕಲಾವಿದರಾದ ತಟ್ಟೆಕೆರೆ ಲಕ್ಷ್ಮಣ್, ಡಾ.ಎಂ. ವಿಜಯ ಇತರರು ಇದ್ದರು.