ಭಾರತೀಯ ಸಂಸ್ಕೃತಿ ನಾಶ ಅಸಾಧ್ಯ

14 Thyagarthi
ತ್ಯಾಗರ್ತಿಯಲ್ಲಿ ಹಿಂದು ಜಾಗರಣ ವೇದಿಕೆಯಿಂದ ಪಂಜಿನ ಮೆರವಣಿ ನಡೆಸಲಾಯಿತು. ಸುೀಂದ್ರ, ಲೋಕೇಶ್, ರಾಘವೇಂದ್ರ ಇತರರಿದ್ದರು.
Published on

ತ್ಯಾಗರ್ತಿ: ದೇಶ ವಿಭಜನೆಯಾದ ಕರಾಳ ದಿನವನ್ನು ಹಿಂದು ಜಾಗರಣಾ ವೇದಿಕೆ ಅಖಂಡ ಭಾರತ ಸಂಕಲ್ಪ ದಿನವನ್ನಾಗಿ ಆಚರಿಸುತ್ತಿದೆ ಎಂದು ಹಿಂದು ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಸಹ ಸಂಯೋಜಕ ಸತೀಶ್ ಪೂಜಾರಿ ಹೇಳಿದರು.

ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಬುಧವಾರ ಆಯೋಜಿಸಿದ್ದ ಪಂಜಿನ ಮೆರವಣಿಗೆಯಲ್ಲಿ ಮಾತನಾಡಿದ ಅವರು, ದೇಶದ ಯುವಕರಿಗೆ ಇತಿಹಾಸದ ಬಗ್ಗೆ ಸರಿಯಾದ ತಿಳಿವಳಿಕೆ ನೀಡಬೇಕು. ಹಿಂದಿನ ರಾಜಕೀಯ ನಾಯಕರು ಇತಿಹಾಸ ತಿರುಚುವ ಕೆಲಸ ಮಾಡಿದ್ದಾರೆ. ನಾವು ಎಂದಿಗೂ ಸ್ವಾತಂತ್ರ್ಯ ಕಳೆದುಕೊಳ್ಳಲಿಲ್ಲ. ಈ ದೇಶದಲ್ಲಿ 600 ವರ್ಷಗಳ ಕಾಲ ಮೊಘಲ್ ದೊರೆಗಳು ಆಳ್ವಿಕೆ ನಡೆಸಿದರು. ಅವರನ್ನು ಶಿವಾಜಿ ಮಹಾರಾಜರು ಕೊನೆಗೊಳಿಸಿದರು ಎಂದರು.

ವ್ಯಾಪಾರಕ್ಕಾಗಿ ಬಂದ ಬ್ರಿಟಿಷರು ಆಳ್ವಿಕೆ ನಡೆಸಿದರು. ಈ ದೇಶದ ಸಂಪತ್ತನ್ನು ದೋಚಿದರು. ಆದರೆ ಯಾರಿಗೂ ಇಲ್ಲಿನ ಭಾರತೀಯ ಸಂಸ್ಕೃತಿ ನಾಶಮಾಡಲು ಆಗಲಿಲ್ಲ. ದೇಶಕ್ಕಾಗಿ ಹೋರಾಡಿದ ಕ್ರಾಂತಿಕಾರಿ ನಾಯಕರಾದ ಚಂದ್ರಶೇಖರ್ ಆಜಾದ್, ಭಗತ್ ಸಿಂಗ್, ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಇವರ ಹೋರಾಟವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ಈಶ್ವರ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ನೂರಾರು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಮಾರಿಕಾಂಬ ದೇವಾಲಯದವರೆಗೆ ಪಂಜಿನ ಮೆರವಣಿಗೆ ನಡೆಸಿದರು. ಹಿಂದು ಜಾಗರಣ ವೇದಿಕೆ ಪ್ರಮುಖರಾದ ಸುೀಂದ್ರ, ಲೋಕೇಶ್, ರಾಘವೇಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net